ಹಾರ್ಟ್ ಫೇಲ್ಯೂರ್ ಲಕ್ಷಣಗಳು :-
★ಹೃದಯದ ಸ್ತಂಭದ ಪ್ರಾಥಮಿಕ ಲಕ್ಷಣ – ಆಯಾಸ, ಸುಸ್ತು(Fatigue)
★ ಹೃದಯದ ಎಡಭಾಗ ಕೆಲಸ ಮಾಡದೆ ಹೋಗುವುದರ ಸಾಧಾರಣ ಲಕ್ಷಣ – ಉಸಿರಾಟದ ತೊಂದರೆ (ಎದುಸಿರು)
★ಈ ಏದುಸಿರು ಪ್ರಾರಂಭದಲ್ಲಿ ವ್ಯಾಯಾಮ ಮಾಡುತ್ತಿರುವಾಗ. ಇಲ್ಲವೇ ದೈಹಿಕ ಶ್ರಮಪಡುತ್ತಿರುವಾಗ ತೀವ್ರವಾಗುತ್ತದೆ. ಆನಂತರ ವಿಶ್ರಾಂತಿ ತೆಗೆದುಕೊಳ್ಳುತ್ತಿರುವಾಗಲೂ ಕೂಡ ಬರುತ್ತದೆ.
★ರೋಗಿ ಬೆನ್ನು ಆನಿಸಿಕೊಂಡು ಕುಳಿತಾಗ ಮಾತ್ರ, ಸಾಮಾನ್ಯವಾಗಿ ಉಸಿರಾಡಲು ಸಮರ್ಥನಾಗಿರುತ್ತಾನೆ.
★ ಒಮ್ಮೊಮ್ಮೆ ರೋಗಿ (ಸ್ತ್ರೀಯಾಗಲಿ,ಪುರುಷರಾಗಲಿ) ರಾತ್ರಿ ನಿದ್ದೆಯಲ್ಲಿ ಉಸಿರಾಡಲಾಗದೆ,ಕೆಮ್ಮುತ್ತಾ ಬೆವರುತ್ತಾ ಥಟಕ್ಕನೆ ಎದ್ದು ಕೊರಬಹುದು.
★ಕಾಲಿನ ಪಾದಗಳು, ಕಾಲುಗಳು ಸಂಜೆಯ ವೇಳೆಗೆ ಊದಿಕೊಂಡು ಬೆಳಗಾಗುವ ವೇಳೆಗೆ ಊತ ಇಳಿಯುತ್ತದೆ.
★ಉಗುರುಗಳು,ತುಟಿಗಳು ನೀಲಿ ಬಣ್ಣಕ್ಕೆ ತಿರುಗುತ್ತವೆ.
★ಶರೀರದಲೆಲ್ಲಾ ನೀರು ಸೇರಿ ರೋಗಿ ಊದಿಕೊಂಡಂತೆ ಕಾಣಿಸುತ್ತಾನೆ.
★ಹಾರ್ಟ್ ಫೇಲ್ಯೂರ್ ಲಕ್ಷಣಗಳು ಕ್ರಮೇಣ ಕಡಿಮೆಯಾಗಬಹುದು. ಇಲ್ಲವೇ ತುತ್ತು ಚಿಕಿತ್ಸೆ ತೆಗೆದುಕೊಳ್ಳಬೇಕಾದ ಅಗತ್ಯವೂ ಬರಬಹುದು.
★ಹೃದಯದ ಬಲಭಾಗ ಕೆಲಸ ಮಾಡುವಾಗ, (ರೈಟ್ ಸೈಡೆಡ್ ಹಾರ್ಟ್ ಫೆಲ್ಯೂರ್) ಏದುರಿಸಿ ಕಡಿಮೆಯಿರುತ್ತದೆ. ಆದರೆ ಕಾಲುಗಳ ಊತ ಅಧಿಕವಾಗಿರುತ್ತದೆ.ಒಮ್ಮೊಮ್ಮೆ ಲಿವರ್ ದಪ್ಪವಾಗುವುದು,ಕರುಳು ಉಬ್ಬುವುದು (Congestion)ಇವುಗಳಿಂದ ಅಜೀರ್ಣದಂತಹ ಲಕ್ಷಣಗಳು, ತೋರಿ ಬರಬಹುದು.
★ ಹೃದಯದ ಎಡಭಾಗ ಕೆಲಸ ಮಾಡದಿರುವುದು (Left Sided Heart Failure)ಬಲಭಾಗ ಕೆಲಸ ಮಾಡದಿರುವುದು (Right Sided Heart Failure)ಪ್ರಮಾದಕರ. ಇದಕ್ಕೆ ಸೂಕ್ತ ಚಿಕಿತ್ಸೆ ಮಾಡದೇ ಹೋದರೆ ಇತರ ಮುಖ್ಯ ಅಂಗಗಳಾದ ಮೆದುಳು, ಕಿಡ್ನಿ, ಲಿವರ್ ಮೊದಲಾದವುಗಳಿಗೆ ಹಾನಿಯಾಗುವ ಅಪಾಯವಿದೆ.