ಬೆಂಗಳೂರು: ಕಾವೇರಿ ನದಿ ನೀರನ್ನು ತಮಿಳುನಾಡಿಗೆ ಹರಿಸಬೇಕು ಎಂದು ಸುಪ್ರೀಂಕೊರ್ಟ್ ಆದೇಶ ವಿರೋಧಿಸಿ ಬೆಂಗಳೂರು ಬಂದ್ ಮಾಡಿದ್ದ ವೇಳೆ ಜಯನಗರದಲ್ಲಿ ನಡೆದಿದ್ದ ಹೋಟೆಲ್ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಜಯನಗರ ಪೊಲೀಸರು ಇಬ್ಬರು ಅರೋಪಿಗಳನ್ನು ಬಂಧಿಸಿದ್ದಾರೆ.
ಯೋಗಿಶ್ ಮತ್ತು ಸೋಮಶೇಖರ್ ಬಂಧಿತ ಅರೋಪಿಗಳು.
ಬಂದ್ ವೇಳೆ ಏಂಟಕ್ಕು ಹೆಚ್ಚು ಜನರು ಗುಂಪಾಗಿ ಬಂದು ಹೋಟೆಲ್ ಸೇರಿ ನಾಲ್ಕು ಕಡೆ ಕಲ್ಲು ತೂರಿದ್ದರು. ಈ ಹಿನ್ನಲೆ ಜಯನಗರ ಪೋಲೀಸ್ ಠಾಣೆಯಮಲ್ಲಿ ಪ್ರತ್ಯೇಕ ನಾಲ್ಕು ಕೇಸ್ ದಾಖಲು ಮಾಡಲಾಗಿತ್ತು. ಸದ್ಯ ಇಬ್ಬರು ಅರೋಪಿಗಳು ಬಂಧಿಸಿರುವ ಪೊಲೀಸರು, ಉಳಿದ ಹಲವಾರು ಅರೋಪಿಗಳಿಗೆ ಹುಡುಕಾಟ ನಡೆಸಿದ್ದಾರೆ. ಇ
ನ್ನು ತನಿಖೆ ವೇಳೆ ಬಂಧಿತರು ಬಿಜೆಪಿ ಕಾರ್ಯಕರ್ತರಾಗಿದ್ದು, ಜಯನಗರ ಎಂ ಎಲ್ ಎ ರಾಮಮೂರ್ತಿ ಶಿಷ್ಯರು ಎಂಬುದು ಪತ್ತೆಯಾಗಿದೆ.