ಮಂಡ್ಯ:ಸರಗಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಅಂತರ್ ಜಿಲ್ಲಾ ಕಳ್ಳರಿಬ್ಬರನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ತಿಳಿಸಿದರು.
ಮೈಸೂರು ಜಿಲ್ಲೆ ಟಿ.ನರಸೀಪುರದ ಸಾಹಸ ಕಲಾವಿದ ಶೃಂಗಾರ್ ಹಾಗೂ ಬೆಂಗಳೂರು ಸುಂಕದಕಟ್ಟೆ ನಿವಾಸಿ ಕ್ಯಾಬ್ ಡ್ರೈವರ್ ಚೇತನ್ (೨೫), ಬಂಧಿತ ಆರೋಪಿಗಳು.ಬಂಧಿತ ಆರೋಪಿಗಳಿಂದ ೨೮೬ ಗ್ರಾಂ ಚಿನ್ನಾಭರಣ ಹಾಗೂ ಬೆಂಗಳೂರಿ ನಲ್ಲಿ ಕಳ್ಳತನ ಮಾಡಿದ ಅಪಾಚಿ ಬೈಕ್‌ನ್ನು ವಶಕ್ಕೆ ಪಡೆಯಲಾಗಿದೆ. ಇವುಗಳ ಒಟ್ಟು ಮೌಲ್ಯ ೨೪ ಲಕ್ಷ ಎಂದು ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.
೨೦೨೫ ಫೆ.೯ ರಂದು ಮದ್ದೂರು ಪಟ್ಟಣದ ಲೀಲಾವತಿ ಬಡಾವಣೆ ನಿವಾಸಿ ಪರಮೇಶ್ ತಮ್ಮ ಹೆಂಡತಿ ಪ್ರೇಮ ಅವರನ್ನು ಬೈಕ್‌ನಲ್ಲಿ ಮುಡುಕುತೊರೆ ದೇವಸ್ಥಾನಕ್ಕೆ ತೆರಳುತ್ತಿದ್ದ ವೇಳೆ ಮಳವಳ್ಳಿ ತಾಲ್ಲೂಕಿನ ಕೋಣನಕೊಪ್ಪಲು ಹಾಗೂ ನಾರಾಯಣಪುರ ಗ್ರಾಮದ ಮದ್ಯೆ ಮಧ್ಯಾಹ್ನ ೨.೨೦ ರಲ್ಲಿ ಅಡ್ಡಗಟ್ಟಿ ಪ್ರೇಮಾ ಅವರ ಕತ್ತಿನಲ್ಲಿದ್ದ ೭೦ ಗ್ರಾಂ ತೂಕದ ಎರಡೆಳೆ ಮಾಂಗಲ್ಯ ಸರ ಹಾಗೂ ೧೦ ಗ್ರಾಂ ತೂಕದ ಶಾರ್ಟ್ ನಕ್ಲೆಸ್‌ನ ಸ್ವಲ್ಪ ಭಾಗವಾದ ಕೊಂಡಿ ಚೈನನ್ನು ಕಸಿದು ಪರಾರಿಯಾಗಿದ್ದು.ಈ ಸಂಬಂಧ ಮಳವಳ್ಳಿ ತಾಲ್ಲೂಕಿನ ಬೆಳಕವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸುತ್ತಾರೆ.
ಪ್ರಕರಣ ಭೇದಿಸಿದ ಬೆಸಗರಹಳ್ಳಿ ಪೊಲೀಸರು ಇಬ್ಬರು ಆರೋಪಿ ಗಳನ್ನು ಬಂಧಿಸಿ, ವಿಚಾರಣೆ ಗೊಳಪಡಿಸಿದಾಗ ಮೈಸೂರು ಜಿಲ್ಲೆಯ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸರಕಳುವು ಪ್ರಕರಣದಲ್ಲಿ ಭಾಗಿಯಾಗಿರುವುದು ಪತ್ತೆಯಾಗಿದೆ ಎಂದರು
ಆರೋಪಿಗಳ ಪತ್ತೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಅಪರ ಪೊಲೀಸ್ ವರಿಷ್ಠಾಧಿಕಾರಿ ತಿಮ್ಮಯ್ಯ ಸಿ.ಇ. ಗಂಗಾಧರಸ್ವಾಮಿ, ಡಿವೈಎಸ್ಪಿ ವಿ.ಕೃಷ್ಣಪ್ಪ ಮಾರ್ಗದರ್ಶದಲ್ಲಿ ಹಲಗೂರು ವೃತ್ತ ನಿರೀಕ್ಷಕರಾದ ಶ್ರೀಧರ್ ಬಿ.ಎಸ್. ನೇತೃತ್ವದಲ್ಲಿ ವಿಶೇಷ ತಂಡ ರಚನೆ ಮಾಡಲಾಗಿತ್ತು. ಹಲಗೂರು ಪಿಎಸ್‌ಐ ರವಿಕುಮಾರ್ ಡಿ ಹಾಗೂ ಹಲಗೂರು ವೃತ್ತದ ಅಪರಾದ ಪತ್ತೆ ದಳ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಶ್ಲಾಘಿಸಿದರು.
ಸುದ್ದಿಗೋಷ್ಠಿಯಲ್ಲಿ ಅಪರ ಪೊಲೀಸ್ ವರಿಷ್ಠಾಧಿಕಾರಿ ತಿಮ್ಮಯ್ಯ ಸಿ.ಇ.ಗಂಗಾಧರಸ್ವಾಮಿ, ಡಿವೈಎಸ್ಪಿ ವಿ.ಕೃಷ್ಣಪ್ಪ ಹಲಗೂರು ವೃತ್ತ ನಿರೀಕ್ಷಕರಾದ ಶ್ರೀಧರ್ ಬಿ.ಎಸ್ ಹಾಗೂ ಹಲಗೂರು ಪಿಎಸ್‌ಐ ರವಿಕುಮಾರ್ ಡಿ ಹಾಜರಿದ್ದರು.