ಮನೆ ಸುದ್ದಿ ಜಾಲ ಶಿವಮೊಗ್ಗದಲ್ಲಿ ಭಾರೀ ಮಳೆಗೆ ಮನೆ ಗೋಡೆ ಕುಸಿತ : ಶತಾಯುಷಿ ಸಿದ್ದಮ್ಮ ಸಾವು, ಹಲವರಿಗೆ ಗಾಯ

ಶಿವಮೊಗ್ಗದಲ್ಲಿ ಭಾರೀ ಮಳೆಗೆ ಮನೆ ಗೋಡೆ ಕುಸಿತ : ಶತಾಯುಷಿ ಸಿದ್ದಮ್ಮ ಸಾವು, ಹಲವರಿಗೆ ಗಾಯ

0

ಶಿವಮೊಗ್ಗ: ರಾಜ್ಯದಲ್ಲಿ ಮಳೆ ಅಬ್ಬರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ನಡುವೆಯೇ, ಶಿವಮೊಗ್ಗ ಜಿಲ್ಲೆಯಲ್ಲಿ ತಡರಾತ್ರಿ ನಡೆದ ದುರಂತ ಹೃದಯವಿದ್ರಾವಕ ಘಟನೆಗೆ ಕಾರಣವಾಗಿದೆ. ಶಿವಮೊಗ್ಗ ತಾಲೂಕಿನ ಕುಂಸಿ ಸಮೀಪದ ಅಡಗಡಿ ಗ್ರಾಮದಲ್ಲಿ ಭಾರೀ ಮಳೆಗೆ ಮನೆ ಗೋಡೆ ಕುಸಿದು ಬಿದ್ದ ಪರಿಣಾಮ 100 ವರ್ಷ ವಯಸ್ಸಿನ ವೃದ್ಧೆ ಸಿದ್ದಮ್ಮ ಅವರು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.

ವೃದ್ಧೆ ಸಿದ್ದಮ್ಮ ಅವರು ಮೂಲತಃ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲ್ಲೂಕಿನ ಕುಂಕೋವ ಗ್ರಾಮದ ನಿವಾಸಿಯಾಗಿದ್ದು, ಇತ್ತೀಚೆಗೆ ತಮ್ಮ ಸಂಬಂಧಿಯಾದ ಹೇಮಾವತಿಯವರ ಮನೆಗೆ ಅಡಗಡಿ ಗ್ರಾಮಕ್ಕೆ ಬಂದಿದ್ದ ವೇಳೆ ಈ ದುರಂತ ಸಂಭವಿಸಿದೆ.

ತಡರಾತ್ರಿ ನಡೆದ ಈ ದುರ್ಘಟನೆಯ ವೇಳೆ ಮನೆಯವರೆಲ್ಲ ಮಲಗಿದ್ದ ಸಂದರ್ಭ. ಭಾರೀ ಮಳೆಯಿಂದ ನೆಲ ಸಡಿಲಗೊಂಡು, ಮನೆಯ ಪಾರಂಪರಿಕ ಮಣ್ಣಿನ ಗೋಡೆ ಏಕಾಏಕಿ ಕುಸಿದಿದೆ. ಶಬ್ದಕ್ಕೆ ಮನೆಯವರು ಎಚ್ಚರಗೊಂಡರೂ, ಸಿದ್ದಮ್ಮ ಅವರು ಗೋಡೆ ಆವೃತವಾಗಿ ಸ್ಥಳದಲ್ಲೇ ಕೊನೆಯುಸಿರೆಳೆದರು.

ಘಟನೆಯಲ್ಲಿ ಹೇಮಾವತಿ ಎಂಬುವವರು ಗಂಭೀರ ಗಾಯಗೊಂಡು, ತಕ್ಷಣ ಶಿವಮೊಗ್ಗದ ಮೆಗ್ಗಾನ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಜೊತೆಗೆ ಪಲ್ಲವಿ, ಪರಶುರಾಮ್ ಮತ್ತು ಚೇತನ್ ಎಂಬುವವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಇವರಿಗೆ ಪ್ರಾಥಮಿಕ ಚಿಕಿತ್ಸೆ ನೀಡಲಾಗುತ್ತಿದೆ ಮತ್ತು ಪ್ರಾಣಾಪಾಯದ ಆತಂಕ ಇಲ್ಲವೆಂದು ವೈದ್ಯರು ತಿಳಿಸಿದ್ದಾರೆ.