ಮನೆ ರಾಷ್ಟ್ರೀಯ ಇಂಡಿಗೋ ಸಮಸ್ಯೆ ಇದ್ದಾಗಲೂ ಟಿಕೆಟ್‌ ದರ ಏರಿದ್ದು ಹೇಗೆ..? – ಕೇಂದ್ರಕ್ಕೆ ದೆಹಲಿ ಹೈಕೋರ್ಟ್ ಪ್ರಶ್ನೆ..?!

ಇಂಡಿಗೋ ಸಮಸ್ಯೆ ಇದ್ದಾಗಲೂ ಟಿಕೆಟ್‌ ದರ ಏರಿದ್ದು ಹೇಗೆ..? – ಕೇಂದ್ರಕ್ಕೆ ದೆಹಲಿ ಹೈಕೋರ್ಟ್ ಪ್ರಶ್ನೆ..?!

0

ನವದೆಹಲಿ : ಇಂಡಿಗೋ ವಿಮಾನ ರದ್ದತಿ ಮತ್ತು ವಿಳಂಬದ ಹೆಚ್ಚುತ್ತಿರುವ ಘಟನೆಗಳು ಗಂಭೀರ ಬಿಕ್ಕಟ್ಟು, ವಿಮಾನಗಳ ರದ್ದತಿಯು ಪ್ರಯಾಣಿಕರಿಗೆ ಅನಾನುಕೂಲತೆ ಮತ್ತು ಕಿರುಕುಳವನ್ನು ಉಂಟುಮಾಡುವುದಲ್ಲದೆ ಆರ್ಥಿಕತೆಗೂ ಹಾನಿಯನ್ನುಂಟುಮಾಡಿದೆ. ಪರಿಸ್ಥಿತಿ ಇಷ್ಟೊಂದು ಹದಗೆಟ್ಟಿದ್ದು ಹೇಗೆ ಎಂದು ಕೇಂದ್ರ ಸರ್ಕಾರವನ್ನು ದೆಹಲಿ ಹೈಕೋರ್ಟ್ ಪ್ರಶ್ನಿಸಿದೆ.

ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದರ ವಿಚಾರಣೆ ವೇಳೆ ಆಕ್ರೋಶ ಹೊರಹಾಕಿದ ನ್ಯಾಯಲಯ, ಇಂಡಿಗೋ ವಿಮಾನಗಳು ಸ್ಥಗಿತಗೊಂಡಾಗ ಇತರ ವಿಮಾನಯಾನ ಸಂಸ್ಥೆಗಳು ಪರಿಸ್ಥಿತಿಯ ಲಾಭ ಪಡೆದು ಟಿಕೆಟ್ ಬೆಲೆಗಳನ್ನು ಏಕೆ ಹೆಚ್ಚಿಸಿದವು ಅಂತಹ ಪರಿಸ್ಥಿತಿಯಲ್ಲಿ ಇತರ ವಿಮಾನಯಾನ ಸಂಸ್ಥೆಗಳು ಬೆಲೆ ಏರಿಕೆ ಮಾಡುವುದನ್ನು ಹೇಗೆ ಸಮರ್ಥಿಸಿಕೊಳ್ಳಬಹುದು ಎಂದು ಕೇಳಿದೆ.

ಸಾಮಾನ್ಯವಾಗಿ ಸುಮಾರು 5,000 ರೂ.ಗಳಷ್ಟು ಬೆಲೆಯ ಟಿಕೆಟ್‌ಗಳಿಗೆ 40,000 ರೂ.ಗಳಷ್ಟು ಹೆಚ್ಚಿನ ದರವನ್ನು ವಿಧಿಸಲು ಇತರ ವಿಮಾನಯಾನ ಸಂಸ್ಥೆಗಳಿಗೆ ಹೇಗೆ ಅನುಮತಿ ನೀಡಲಾಯಿತು? ಒಂದು ವೇಳೆ ಬಿಕ್ಕಟ್ಟು ಎದುರಾದರೆ ಇತರ ವಿಮಾನಯಾನ ಸಂಸ್ಥೆಗಳು ಲಾಭ ಪಡೆಯಲು ಹೇಗೆ ಅವಕಾಶ ನೀಡಬಹುದೇ? ದರಗಳು 35,000–39,000 ರೂ.ಗಳಿಗೆ ಹೇಗೆ ಏರಬಹುದು? ಇತರ ವಿಮಾನಯಾನ ಸಂಸ್ಥೆಗಳು ಈ ಮೊತ್ತವನ್ನು ವಿಧಿಸಲು ಹೇಗೆ ಪ್ರಾರಂಭಿಸಬಹುದು? ಇದು ಹೇಗೆ ಸಂಭವಿಸಿತು ಎಂದು ದೆಹಲಿ ಹೈಕೋರ್ಟ್ ಪೀಠ ಪ್ರಶ್ನಿಸಿತು.

ಇದಕ್ಕೆ ಪ್ರತಿಕ್ರಿಯೆಯಾಗಿ ವಾದ ಮಂಡಿಸಿದ ಸರ್ಕಾರವನ್ನು ಪ್ರತಿನಿಧಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್ ಚೇತನ್ ಶರ್ಮಾ, ವಿಚಾರಣೆಯ ಸಮಯದಲ್ಲಿ ಸಂಬಂಧಿತ ದಾಖಲೆಗಳನ್ನು ಉಲ್ಲೇಖಿಸಿ ಕಾನೂನುಬದ್ಧ ಕಾರ್ಯವಿಧಾನವು ಸಂಪೂರ್ಣವಾಗಿ ಜಾರಿಯಲ್ಲಿದೆ ಎಂದರು.

ಕೇಂದ್ರವು ದೀರ್ಘಕಾಲದವರೆಗೆ ಫ್ಲೈಟ್‌ ಡ್ಯೂಟಿ ಟೈಮ್‌ ಲಿಮಿಟ್‌ ಅಥವಾ ವಿಮಾನ ಕರ್ತವ್ಯದ ಸಮಯ ಮಿತಿ ಜಾರಿಗೆ ತರುವ ಗುರಿಯನ್ನು ಹೊಂದಿತ್ತು. ಆದರೆ ಇಂಡಿಗೋ ಜುಲೈ ಮತ್ತು ನವೆಂಬರ್ ಹಂತಗಳಿಗೆ ಏಕ ನ್ಯಾಯಾಧೀಶರ ಮುಂದೆ ವಿಸ್ತರಣೆಗಳನ್ನು ಕೋರಿತ್ತು. ಸಚಿವಾಲಯವು ಮಧ್ಯಪ್ರವೇಶಿಸುತ್ತಿರುವುದು ಇದೇ ಮೊದಲು. ಇಂಡಿಗೋಗೆ ಶೋ-ಕಾಸ್ ನೋಟಿಸ್ ನೀಡಲಾಗಿದ್ದು ವಿಮಾನಯಾನ ಸಂಸ್ಥೆಯು ತನ್ನ ತಪ್ಪಿಗೆ ಕ್ಷಮೆಯಾಚಿಸಿದೆ ಮತ್ತು ಪರಿಸ್ಥಿತಿಯನ್ನು ಸರಿಪಡಿಸುವ ಭರವಸೆ ನೀಡಿದೆ ಎಂದು ಮಾಹಿತಿ ನೀಡಿದರು.