ಮನೆ ಆರೋಗ್ಯ ನವಜಾತ ಶಿಶು ಆರೋಗ್ಯವಂತವಾಗಿದೆ ಎಂದು ತಿಳಿಯುವುದು ಹೇಗೆ ಗೊತ್ತಾ ?

ನವಜಾತ ಶಿಶು ಆರೋಗ್ಯವಂತವಾಗಿದೆ ಎಂದು ತಿಳಿಯುವುದು ಹೇಗೆ ಗೊತ್ತಾ ?

0

ತಾಯಿಯ ಗರ್ಭದಿಂದ ಮಗು ಹೊರ ಬಂತೆಂದರೆ ಅದರ ಕಷ್ಟಗಳ ಆರಂಭ ಎಂಬ ನಾಣ್ಣುಡಿಯಿದೆ. ಕಷ್ಟಗಳ ವಿಷಯಕ್ಕೆ ಬಂದರೆ ಅದರ ವ್ಯಾಪ್ತಿ ವಿಶಾಲವಾಗಿದೆ ಅದು ಬೇರೆಯದೆ ಕಥೆ. ಹೊಟ್ಟೆಯಲ್ಲಿರುವ ಭೌತಿಕ ವಾತಾವರಣಕ್ಕೂ ಹುಟ್ಟಿದ ನಂತರದ ವಾತಾವರಣಕ್ಕೂ ವ್ಯತ್ಯಾಸವಿದೆ. ಇದ್ದಕ್ಕಿದ್ದಂತೆ ಹೊಸ ವಾತಾವರಣಕ್ಕೆ ಹೊಂದಿಕೊಳ್ಳುವುದು ಮಗುಗೆ ಒಂದು ಸಮಸ್ಯೆ ಹೌದು. ನವಜಾತ ಶಿಶುಗಳಲ್ಲಿ ಮುಖ್ಯವಾಗಿ ಎದುರಾಗುವ ಸಮಸ್ಯೆ “ಏನ್ ಫಿಕ್ಸಿಯಾ “.    

ಏನ್ ಫಿಕ್ಸಿಯಾ ಎಂದರೆ ಶರೀರದಲ್ಲಿರುವ ಆಮ್ಲಜನಕದ ಪ್ರಮಾಣ ಕಡಿಮೆಯಾಗುವುದು ಮತ್ತು ಕಾರ್ಬನ್ ಡೈಯಾಕ್ಸೈಡ್ ಪ್ರಮಾಣ ಹೆಚ್ಚಾಗುವುದು. ಆಗ ತಾನೇ ಹುಟ್ಟಿದ ಮಕ್ಕಳ ಮರಣಕ್ಕೆ ಪ್ರಧಾನ ಕಾರಣ ಈ ಎನ್ ಫಿಕ್ಸಿಯಾ ಪ್ರಭಾವ. ಒಂದು ವೇಳೆ ಮರಣ ಸಂಭವಿಸದಿದ್ದರೂ ಮೆದುಳಿಗೆ ತೊಂದರೆಯಾಗುತ್ತದೆ. ಶಾಶ್ವತವಾಗಿ ದಡ್ಡರಾಗುತ್ತಾರೆ ಇಲ್ಲವೇ ,ಸ್ನಾಯುಗಳ ಹಿಡಿತ ಕಳೆದುಕೊಳ್ಳುತ್ತಾರೆ ,ಹುಟ್ಟುತ್ತಲೇ ಅಳದಿರುವ ಮಕ್ಕಳಿಗೆ ಏನ್ ಫಿಕ್ಸಿಯಾ  ಆಗಿರಬಹುದು

ಹುಟ್ಟಿದ ಮಗುವಿಗೆ ಎನ್ ಫಿಕ್ಸಿಯಾ ಆಗಲಿ ಇತರ ಅಪಾಯಕರ ಪರಿಸ್ಥಿತಿಯೇ ಇದೆಯೇ? ಇಲ್ಲವೋ ಎಂಬುದನ್ನುʼಯಪ್ಗಾರ್ ಸ್ಕೋರ್ʼ ಎಂಬ ಮಾನದಂಡದಿಂದ ಅಂದಾಜು ಮಾಡುತ್ತಾರೆ . ಯಪ್ಗಾರ್ ಸ್ಕೋರ್ ಪ್ರಕಾರ ಹುಟ್ಟಿದ ಮಗುವಿಗೆ 10 ಅಂಕಗಳು ಬಂದರೆ ಪೂರ್ಣಾಂಕಗಳು ಬಂದಂತೆಯೇ ಯಾವುದೇ ತೊಂದರೆ ಇರುವುದಿಲ್ಲ. ಆಗ ತಾನೇ ಹುಟ್ಟಿದ ಮಗುವಿಗೆ ಯಪ್ಗಾರ್ ಸ್ಕೋರ್ ಏಳಕ್ಕಿಂತ ಕಡಿಮೆ ಬಂದರೆ ತಕ್ಷಣ ವೈದ್ಯಕೀಯ ಸೌಲಭ್ಯದ ಸುಧಾರಿಸಬೇಕು.

 ಯಪ್ಗಾರ್ ಸ್ಕೋರ್ ನಲ್ಲಿ ಮಗು ಹುಟ್ಟುತ್ತಿದ್ದಂತೆ ಜೋರಾಗಿ ಅತ್ತರೆ ಎರಡು ಅಂಕ, ಮುಕುತ್ತಾ ನಿಧಾನವಾಗಿ ಅತ್ತರೆ ಒಂದು ಅಂಕ ಬರುತ್ತದೆ.

ಹೃದಯ ನಿಮಿಷಕ್ಕೆ ನೂರು ಬಾರಿಗಿಂತ ಹೆಚ್ಚಾಗಿ ಬಡಿಯುತ್ತಿದ್ದರೆ ಎರಡು ಅಂಕ ,ಅದಕ್ಕಿಂತ ಕಡಿಮೆ ಇದ್ದರೆ ಒಂದು ಅಂಕ ಬರುತ್ತದೆ.

ಹುಟ್ಟಿದ ಮಗುವಿಗೆ ಶರೀರ ನೇರ ನೇರಳೆ ಬಣ್ಣದಲ್ಲಿದ್ದರೆ ಎರಡು ಅಂಕ, ಸೊರಗಿದಂತೆ ಇಲ್ಲವೇ ನೀಲಿಯಾಗಿದ್ದರೆ ಒಂದು ಅಂಕ.

 ಸ್ನಾಯುಗಳು ಬಲಿಷ್ಠ ವಾಗಿದ್ದು ಕೀಲುಗಳು ಕೈಗಳು ಸರಿಯಾಗಿ ಮಡಚಿಕೊಂಡಿದ್ದರೆ ಎರಡು ಅಂಕ ಹಿಡಿತದಲ್ಲಿಲ್ಲದೆ ತೂಗಾಡುತ್ತಿದ್ದರೆ ಒಂದು ಅಂಕ ಬರುತ್ತದೆ.

ಮೂಗಿನೊಳಗೆ ಉರಿ ಮಾಡಿದ ಬಟ್ಟೆಯನ್ನು ಇಟ್ಟು ಕದಲಿಸಿದಾಗ ತಕ್ಷಣ ಸೀನಿದರೆ ಎರಡು ಅಂಕ, ಹಾಗೆ ಸೀನದ ಸುಮ್ಮನಿದ್ದರೆ ಒಂದು ಅಂಕ ಪಡೆಯುತ್ತದೆ .

ಹುಟ್ಟಿದ ಪ್ರತಿಯೊಂದು ಮಗುವನ್ನು ಪ್ರಕಾರ ಪರೀಕ್ಷಿಸುತ್ತಾರೆ ಮಗು ಹತ್ತಕ್ಕೆ 10 ಸ್ಕೋರ್ ಮಾಡಿದರೆ ಪರಿಸ್ಥಿತಿ ಕ್ರಮವಾಗಿದೆ ಎಂದು ಅರ್ಥ.

ಹೇರಿಗೆಯಾಗಿ ಮಗು ಈ ಪ್ರಪಂಚಕ್ಕೆ ಬರುವವರೆಗೆ ಅದಕ್ಕೆ ಅಗತ್ಯವಾದ ಆಮ್ಲಜನಕ ತಾಯಿಯ ರಕ್ತದ ಮೂಲಕ ಲಭ್ಯವಾಗುತ್ತಿರುತ್ತದೆ. ತಾಯಿಯ ಗರ್ಭದಲ್ಲಿದ್ದಾಗ ಮಗುವಿನ ಶ್ವಾಸಕೋಶಗಳು ಸ್ತಬ್ಧವಾಗಿರುತ್ತದೆ. ತಾಯಿಯ ಗರ್ಭದಲ್ಲಿ ಮಗುವಿನ ಶಾಶಕೋಶಗಳಲ್ಲಿ ನೀರು ತುಂಬಿರುತ್ತದೆ ಈ ನೀರು ಶ್ವಾಸಕೋಶಗಳನ್ನು ಅಂಗಾಂಶಗಳಲ್ಲಿ ಉತ್ಪತ್ತಿಯಾಗುತ್ತದೆ. ಈ ನೀರು 60-80 ml ನಷ್ಟು ಇರುತ್ತದೆ.  

ಮಗು ಹುಟ್ಟುತ್ತಲೇ ಸ್ವಾಶಕೋಶಗಳು ಕೆಲಸ ಮಾಡಲಾರಂಭಿಸುತ್ತದೆ. ಮಗುವಿನ ಅಳುವಿನೊಂದಿಗೆ ಶ್ವಾಶಕೋಶಗಳು ವಿಕಾಸ ವಾಗುವುದೇ ಅಲ್ಲದೆ ಅದುವರೆವಿಗೂ, ಅದರಲ್ಲಿದ್ದ ನೀರು ಹೊರ ಹೋಗುತ್ತದೆ.

ಯಾವುದೇ ಕಾರಣದಿಂದಾಗಲಿ ಮಗು ಸರಿಯಾಗಿ ಉಸಿರಾಡದಿದ್ದಲ್ಲಿ ಆಮ್ಲಜನಕ ಅಳವಡಿಸಬೇಕು ಅಷ್ಟೇ ಅಲ್ಲದೆ ಗಂಟಲಿನಲ್ಲಾಗಲಿ ಶ್ವಾಸನಾಳ ಗಳಲ್ಲಾಗಲಿ, ಉಸಿರಾಡಲು ಏನಾದರೂ ಅಡಚಣೆ ಇದ್ದರೆ ಸರಿಪಡಿಸಬೇಕು, ಮೂಗಿಗೆ ಆಮ್ಲಜನಕ ಅಳವಡಿಸಿದರೂ ಪರಿಸ್ಥಿತಿ ಸುಧಾರಿಸದಿದ್ದರೆ ಶ್ವಾಸಕೋಶಗಳು ನಳಿಕೆ ಅಳವಡಿಸಿ ಗಾಳಿಯನ್ನು ಪಂಪ್ ಮಾಡಬೇಕು. ಗಾಳಿ ಕ್ರಮವಾಗಿ ಲಭ್ಯವಾಗದಿದ್ದರೆ ಹೃದಯ ಕೂಡ ಸಾಕಷ್ಟು ಪಡೆಯುವುದಿಲ್ಲ ಅಂತ ಸಮಯದಲ್ಲಿ ಎದೆಯ ಮಧ್ಯದಲ್ಲಿ ಬೆರಳುಗಳನ್ನು ಪ್ರೇರಿಸಬೇಕು ಈ ಕ್ರಮವನ್ನು

ʼʼಎ.ಬಿ.ಸಿ. ರೆಸಕ್ಸಿಟೇಷನ್ʼʼ ಎನ್ನುತ್ತಾರೆ.

 ರೆಸಕ್ಸಿಟೇಷನ್ ಕ್ರಿಯೆಯಲ್ಲಿ ಆಮ್ಲಜನಕವನ್ನು ಒದಗಿಸುವುದೇ ಅಲ್ಲದೇ ಅಗತ್ಯವಾದರೆ ಔಷಧಿಗಳನ್ನು ಬಳಸುತ್ತಾರೆ. ಹೃದಯದ ಬಡಿತ ನೂರು ಬಾರಿಗಿಂತಲೂ ಕಡಿಮೆ ಇದ್ದರೆ 0.2-0.3ml ಆಡ್ರಿನಲ್ ಚುಚ್ಚುಮದ್ದು ಕೊಡುತ್ತಾರೆ. ಅಗತ್ಯಕ್ಕನುಗುಣವಾಗಿ ಸೋಡಿಯಂ ಬೈಕಾರ್ಬೋನೇಟ್ ಚುಚ್ಚುಮದ್ದನ್ನು ಕೊಡುತ್ತಾರೆ.

ಹುಟ್ಟಿದ ಮಗು ತಕ್ಷಣ ಆಳದಿದ್ದರೆ ಬೆನ್ನಿನ ಹಿಂಭಾಗದಲ್ಲಿ ಒಂದೆರಡು ಗುದ್ದು ಕೊಡುತ್ತಾರೆ ಅದಕ್ಕಿಂತಲೂ ಹೆಚ್ಚು ಬಾರಿ ಖುದ್ದು ಕೊಡದೆ ಕೊಡುವುದರಿಂದ ಪ್ರಯೋಜನವಿಲ್ಲ. ಗುದ್ದು ಕೊಡುವುದಕ್ಕಿಂತಲೂ ಕೈಯಲ್ಲಿ ಉಜ್ಜಬೇಕು. ಮಗು ಅಳುತ್ತಿಲ್ಲವೆಂದು ಕೆಲವರು ತಣ್ಣೀರನ್ನು ಮಗುವಿನ ಮೇಲೆ ಎರಚುತ್ತಾರೆ. ಇಲ್ಲವೇ ನೀರಿನಲ್ಲಿ ಮುಳುಗಿಸುತ್ತಾರೆ. ಇಲ್ಲವೇ ಬಿಸಿನೀರನ್ನು ಚೆಲ್ಲುತ್ತಾರೆ. ಈ ರೀತಿ ಮಾಡಬಾರದು.  ತಣ್ಣೀರುಸುರಿದರೆ ಮಗುವಿನ ಮೈ ಶಾಖ ಕಳೆದುಕೊಂಡು ಅಪಾಯಕ್ಕೆ ಸಿಲುಕುತ್ತದೆ. ಬಿಸಿ ನೀರು ಸುರುಯುವುದರಿಂದ ಮಗುವಿನ ಮೈ ಸುಡುತ್ತದೆ. 

ಪ್ರತಿಯೊಬ್ಬರಿಗೂ ಎನ್ ಫಿಕ್ಸಿಯಾ ಕುರಿತು ತಿಳಿದಿರಬೇಕು. ಯಾಪ್ಗಾರ್ ಸ್ಕೋರ್ ಲೆಕ್ಕ ಹಾಕಬೇಕು. ತಕ್ಷಣ ಮಾಡಬೇಕಾದ ಕ್ರಮದಲ್ಲಿ ರಿಸಕ್ಸಿಟೇಷನ್ ಮಾಡಬೇಕು ಆಗ ಮಗುವಿನ ಭವಿಷ್ಯದ ಬೆಳವಣಿಗೆ ಭವ್ಯವಾಗಿರುತ್ತದೆ.