ಮನೆ ವ್ಯಕ್ತಿತ್ವ ವಿಕಸನ ಜ್ಞಾನೋದಯಕ್ಕೆ ಎಷ್ಟು ಸಮಯ ಬೇಕಾಗುತ್ತದೆ ?

ಜ್ಞಾನೋದಯಕ್ಕೆ ಎಷ್ಟು ಸಮಯ ಬೇಕಾಗುತ್ತದೆ ?

0

ಒಂದು ದಿನ ಒಬ್ಬಾತನು ಗುರುವನ್ನು ಭೇಟಿಯಾಗಿ “ಗುರುವೇ, ಜ್ಞಾನೋದಯ ಪಡೆಯಲು ಎಷ್ಟು ಸಮಯ ಬೇಕಾಗುತ್ತದೆ?” ಎಂದು ಕೇಳಿದನು.

ಗುರು “10 ವರ್ಷಗಳು” ಎಂದು ಹೇಳಿದನು. ಆ ಯುವಕ ಗಾಬರಿಗೊಂಡು “ಅಷ್ಟು ದೀರ್ಘ ಸಮಯವೇ?” ಎಂದು ಅಚ್ಚರಿ ವ್ಯಕ್ತಪಡಿಸಿದನು. ಅದಕ್ಕೆ ಗುರು “ಇಲ್ಲ, ಅದು ತಪ್ಪಾಯ್ತು. ನಿನಗೆ 20 ವರ್ಷ ಬೇಕಾಗುತ್ತದೆ” ಎಂದನು. ಆಗ ಯುವಕ “ಅದೇಕೆ ನೀವು ಸಂಖ್ಯೆಯನ್ನು ದ್ವಿಗುಣಗೊಳಿಸಿದಿರಿ? ಜ್ಞಾನೋದಯ ಸಂಪಾದನೆಗೆ ನಾನು ಬಹಳ ಕಠಿಣ ಪರಿಶ್ರಮಕ್ಕೆ ಸಿದ್ಧನಿದ್ದೇನೆ. ಹಾಗಾದ್ರೆ ಎಷ್ಟು ಕಾಲ ಬೇಕಾಗುವುದು?” ಎಂದು ಪ್ರಶ್ನಿಸಿದನು. ಗುರು ಹೀಗೆಂದು ಉತ್ತರಿಸಿದನು….

ಪ್ರಶ್ನೆಗಳು :- 1. ಗುರುವಿನ ಉತ್ತರವೇನಾಗಿತ್ತು? 2. ಈ ಕತೆಯ ಪರಿಣಾಮವೇನು…

ಉತ್ತರಗಳು :- 1. ಗುರು ಹೇಳಿದನು, “ಹಾಗೆ ಆಲೋಚಿಸಿ ನೋಡಿದರೆ, ನಿನ್ನ ವಿಷಯದಲ್ಲಿ ಅದಕ್ಕೆ ಬಹುಶಹ 50 ವರ್ಷಗಳಾದರೂ ಬೇಕಾಗಬಹುದು”.

2. ವಿವೇಕದ ಉನ್ನತ ಸ್ವರೂಪವೇ ಜ್ಞಾನೋದಯವಾಗಿದೆ. ಯಾರಾದರೂ ಒಬ್ಬರು ವಿವೇಕ ಅಥವಾ ಜ್ಞಾನೋದಯವನ್ನು ಸಂಪಾದಿಸುವ ಕುರಿತು ಆಲೋಚಿಸಿದರೆ, ಅವರು ಎಂದೆಂದಿಗೂ ಅದನ್ನು ಪಡೆಯಲಾರರು ಅದು ಸಾಧಿಸಬಲ್ಲ, ಗುರಿಯಲ್ಲ. ಯಾರು ಸಹ ವಿವೇಕಯುತ ಆತ್ಮವಾಗಲು ಗುರಿ ನಿಗದಿಪಡಿಸಲು ಸಾಧ್ಯವಿಲ್ಲ. ಜ್ಞಾನೋದಯ ಚಿಂತೆಯನ್ನು ಸಂಪೂರ್ಣವಾಗಿ ಮರೆತರೆ ಮಾತ್ರ ಅದನ್ನು ಗಳಿಸಲು ಸಾಧ್ಯವಾಗಬಹುದು. ಅಲ್ಲಿಗೆ ಹೋಗಿ ತಲುಪಲು ಅದೇನು ಒಂದು ನಿಲ್ದಾಣವಲ್ಲ, ಬದಲು ಅದನ್ನು ಪ್ರಯಾಣ ವಿಧಾನ ಒಂದೊಮ್ಮೆ ನೀವು ಬಲು ವೇಗವಾಗಿ ಪ್ರಾಯಪಯಣಿಸಿದರೆ ದೃಶ್ಯಾವಳಿಯ ವೀಕ್ಷಣೆ ಅವಕಾಶವನ್ನು ಕಳೆದುಕೊಳ್ಳಬಹುದು.