ಮನೆ ಮಕ್ಕಳ ಶಿಕ್ಷಣ ಪೇರೆಂಟ್ಸ್ ಹೇಗೆ ವರ್ತಿಸಬೇಕು ?: ಭಾಗ-1

ಪೇರೆಂಟ್ಸ್ ಹೇಗೆ ವರ್ತಿಸಬೇಕು ?: ಭಾಗ-1

0

ಇತ್ತೀಚಿಗೆ ನಾನು ಬಾಲಕ ಬಾಲಕಿಯರಿರಾಗಿ ಒಂದು ಸಣ್ಣ ಕಾರ್ಯಕ್ರಮ ನಡೆಸಿಕೊಟ್ಟೆ. ಹಾಸ್ಯ ತುಣುಕುಗಳು, ಮ್ಯಾಜಿಕ್, ಜೊತೆಗೆ,ಹೇಗೆ ಓದಿಕೊಳ್ಳಬೇಕು?

ಭವಿಷ್ಯತ್ತಿನಲ್ಲಿ ಏನು ಮಾಡಬೇಕು? ಮುಂತಾದ ವಿಷಯಗಳನ್ನು ಹೇಳುತ್ತಾ, ಅವರಿಗೆ ಒಂದು ಪ್ರಶ್ನೆ ಕೇಳಿದೆ. ಸದರಿ ಪ್ರಶ್ನೆಗೆ ಸಂಬಂಧಪಟ್ಟ ಹಾಗೆ ಉತ್ತರವನ್ನು ಒಂದು ಕಾಗದದ ಮೇಲೆ ರಹಸ್ಯವಾಗಿ  ಬರೆದು ನನಗೆ ಕೊಡಬೇಕೆಂದು ಹೇಳಿದೆ ಎಲ್ಲರೂ ಪೇಪರ್, ಪೆನ್ನುಗಳನ್ನು ಕೈಗೆತ್ತಿಕೊಂಡರು. ನಾನು ಕೇಳಿದ ಪ್ರಶ್ನೆ ಏನೆಂದರೆ”ನಿಮ್ಮ ತಾಯಿ- ತಂದೆಯವರು ಹೇಗಿರಬೇಕೆಂದು ಅಂದುಕೊಂಡಿದ್ದೀರಿ?” ಇದಕ್ಕೆ ಉತ್ತರವನ್ನು ಬರೆದವರೆಲ್ಲಾ 14 ವರ್ಷ ವಯಸ್ಸಿನೊಳಗಿನವರು.

ಸುಮಾರು ಮುನ್ನರು ಮಂದಿ ಮಕ್ಕಳು. ಅವರ ಪಕ್ಕದಲ್ಲೇ ತಾಯಿ ತಂದೆಯರು. ಒಟ್ಟಾಗಿ ಒಂದು ಸಾವಿರ ಮಂದಿಯಿಂದ್ದ ಆ ಸಮಾವೇಶದಲ್ಲಿ ಸುಮಾರು 250 ಮಂದಿ ಮಕ್ಕಳು ಉತ್ತರಗಳನ್ನು ಬರೆದುಕೊಟ್ಟರು. ಅವುಗಳು ಬರೆಯಬೇಕಾದರೆ ಬಹಳಷ್ಟು ಮಕ್ಕಳು ತಾಯಿ ತಂದೆಯರಿಂದ ದೂರ ಹೋಗಿ ಬರೆದರು. ಒಬ್ಬಿಬ್ಬರು ಮಾತ್ರ ಅವರ ತಾಯಿ,ತಂದೆ ಹೇಳಿದ ಹಾಗೆ ಬರೆದರು. ಅದು ಬೇರೆ ವಿಷಯ.

  ಆ  ಉತ್ತರಗಳನ್ನು ಓದಿದ ನಂತರ ನನ್ನ ತಲೆ ಸುತ್ತಿ ಬಂತು. ಇದರಲ್ಲಿ ತಾಯಿ, ತಂದೆಯರ ನಡೆನುಡಿ ತಪ್ಪೇ? ಮಕ್ಕಳ ಆಲೋಚನಾ ರೀತಿ ತಪ್ಪೇ? ಎಂಬುದನ್ನು ನಿರ್ಧಾರಿಸಿಕೊಳ್ಳಲಾಗದಂತಹ ಪರಿಸ್ಥಿತಿ. ಈ ವಿಷಯವನ್ನು ಇಂದಿನ ತಾಯಿ -ತಂದೆಯರು ಖಂಡಿತವಾಗಿಯೂ ತಿಳಿದುಕೊಳ್ಳಬೇಕೆನಿಸಿತು.ಆದ್ದರಿಂದಲೇ ನೀಡುತ್ತಿದ್ದೇನೆ. ಮುಂದೆ ಓದಿ.ಇವುಗಳಲ್ಲಿ ‘ಅಯ್ಯೋ ಪಾಪ’,ಅನಿಸುವಂತಹವೂ ಇವೆ. ಹೊರಟು ಉತ್ತರಗಳೂ ಇವೆ. ಒರಟು ಉತ್ತರಗಳೂ ಇವೆ.

ಇವು ಮಕ್ಕಳ ಅಭಿಪ್ರಾಯ ಮಾತ್ರ.ಇದನ್ನು ಓದಿ ತಾಯಿ -ತಂದೆಯರು ಪರಮ ನೀಚರು. ದಯೆ, ಕರುಣೆ ಇಲ್ಲದವರೆಂದುಕೊಂಡರೆ ತಪ್ಪಾಗುತ್ತದೆ. ಮಕ್ಕಳ ಏಳ್ಗೆಗಾಗಿ ತಾಯಿ ತಂದೆಯರು ಪಡುವ ಶ್ರಮ, ಹಗಲಿರಳೆನ್ನದೆ  ಕಷ್ಟಪಟ್ಟು ಕೆಲಸ ಮಾಡುವುದು ಮಕ್ಕಳ ಶ್ರೇಯಸ್ಸಿಗಾಗಿಯೇ ಎಂದು ನಾನು ಹೇಳಲಾರೆ. ತಾಯಿ ತಂದೆಯರಿಬ್ಬರೂ ಬಯಸಿದ್ದಕ್ಕಾಗಿಯೇ ಮಕ್ಕಳು ಹುಟ್ಟಿದರು. ಆದರೆ ಆ ಮಕ್ಕಳಿಗೆ ಒಂದು ಸುಂದರವಾದ ಬಾಲ್ಯವನ್ನು ನೀಡಬೇಕೆಂಬ ಹೋರಾಟದಲ್ಲಿ ತಮಗಿಷ್ಟ ಬಂದಹಾಗೆ ಮಾಡಿಕೊಂಡು ಹೋಗುತ್ತಿದ್ದಾರೆ. ಇಲ್ಲಿ ಅವರ ಅಭಿಪ್ರಾಯಗಳನ್ನು ತಿಳಿದುಕೊಳ್ಳಬೇಕೆಂದು  ಅಥವಾ ಅವರಿಗೆ ಯಾವ ರೀತಿ ಹೇಳಿದರೆ ಮನವರಿಕೆಯಾಗುತ್ತದೋ ಅಂತಹ ಉಪಾಯಗಳನ್ನು ತಿಳಿದುಕೊಳ್ಳಬೇಕು.

ಇಂದಿನ ತಾಯಿ ತಂದೆಯರು ತಮ್ಮ ಬಾಲ್ಯದಲ್ಲಿ ಅವರ ತಂದೆ ತಾಯಿಯರೊಡನೆ  ಭಯ ವಿನಯದಿಂದ ನಡೆದುಕೊಂಡಿರಬಹುದು. ಆದರೆ ಈ ಕಾಲದ ಮಕ್ಕಳು ಕೂಡಾ ಹಾಗೆಯೇ ಇರಬೇಕೆಂದುಕೊಳ್ಳುವುದು ಸಹಜ. ಆದರೆ ಇಲ್ಲೊಂದು  ರಹಸ್ಯವಿದೆ. ಮೊದಮೊದಲು ಅವಿಭಕ್ತ ಕುಟುಂಬಗಳಲ್ಲಿ ಮಕ್ಕಳನ್ನು ತಾಯಿ ತಂದೆಯರು ಬೈದರೂ, ಅವರನ್ನು ಸಂತೈಸಲು  ಕುಟುಂಬದ ಇತರ ಸದಸ್ಯರಿರುತ್ತಿದ್ದರು. ಈಗ ಆ ಪರಿಸ್ಥಿತಿಯಿಲ್ಲ ಅದ್ದರಿಂದ ಈ ಕಾಲದ ತಾಯಿ,ತಂದೆಯರು ಮಕ್ಕಳೊಂದಿಗೆ ಸ್ನೇಹಭಾವದಿಂದಿದ್ದರೇನೇ ಲಾಭ. ಅವರೂ ತಪ್ಪುಗಳನ್ನು ಮಾಡದಂತಿರುತ್ತಾರೆ. ಅವರೊಂದಿಗೆ ಮುಕ್ತವಾಗಿದ್ದರೆ ಅವರ ಫ್ರೆಂಡ್ಸ್ ಬಗ್ಗೆಯೂ ಗೊತ್ತಾಗುತ್ತದೆ. ಸಮಾಜ ಹಾಗೂ ಸದಂರ್ಭಾನುಸಾರವಾಗಿ ನಡೆದುಕೊಳ್ಳುವುದು ನಮಗೇ ಕ್ಷೇಮ.