ಮನೆ ಅಡುಗೆ ರುಚಿರುಚಿಯಾದ ಗಾರ್ಲಿಕ್ ಬಟರ್ ಚಿಕನ್ ಮಾಡುವ ವಿಧಾನ

ರುಚಿರುಚಿಯಾದ ಗಾರ್ಲಿಕ್ ಬಟರ್ ಚಿಕನ್ ಮಾಡುವ ವಿಧಾನ

0

ಸುಲಭ ರೀತಿಯಲ್ಲಿ ತಯಾರು ಮಾಡಬಹುದಾದ ಯಾವುದಾದರೂ ಅಡುಗೆ ಇದ್ದರೆ, ನಾವು ಅದನ್ನು ಮಿಸ್ ಮಾಡಿಕೊಳ್ಳಲೇಬಾರದು. ಅದರಲ್ಲೂ ಮನೆಯಲ್ಲಿ ಎಲ್ಲಾ ಪದಾರ್ಥಗಳು ಇದ್ದೂ ಕೂಡ, ಸುಮ್ಮನಿದ್ದರೆ ನಮ್ಮಂತಹ ನತದೃಷ್ಟರು ಬೇರೊಬ್ಬರಿಲ್ಲ. ಮಾಂಸಾಹಾರಿ ಪ್ರಿಯರಾಗಿ ಚಿಕನ್ ಎಂದರೆ ಇಷ್ಟ ಎನ್ನುವವರು ಇಲ್ಲಿ ನಾವು ಎಂದು ನಿಮಗೆ ತಿಳಿಸಲು ಹೊರಟಿರುವ ಗಾರ್ಲಿಕ್ ಬಟರ್ ಚಿಕನ್ ಒಮ್ಮೆ ಟ್ರೈ ಮಾಡಬಹುದು.ರುಚಿ ಹಾಗೂ ಸ್ವಾದದಲ್ಲಿ ಇದನ್ನು ಮೀರಿಸುವ ಮತ್ತೊಂದು ಅಡುಗೆ ಇಲ್ಲ. ಇದರಲ್ಲಿ ಹಾಕುವ ಸಾಮಗ್ರಿಗಳು ಕೂಡ ಎಲ್ಲವೂ ಆರೋಗ್ಯಕರವಾಗಿವೆ. ಹಾಗಿದ್ದ ಮೇಲೆ ಅತ್ಯಂತ ಕಡಿಮೆ ಸಮಯದಲ್ಲಿ ಈ ರುಚಿಕರ ಖಾದ್ಯವನ್ನು ನೀವು ತಯಾರು ಮಾಡಿ ಮನೆಯವರೆಲ್ಲರ ಜೊತೆ ಕುಳಿತು ಸವಿಯಿರಿ.

(ಬಡಿಸುವ ಪ್ರಮಾಣ: 2)

ಪ್ರಮುಖ ಸಾಮಗ್ರಿ

• 250 ಗ್ರಾಮ್ಸ್ ಕೋಳಿ

ಮುಖ್ಯ ಅಡುಗೆಗೆ

• 25 ಗ್ರಾಮ್ಸ್ ಬೆಣ್ಣೆ

• 1 ಚಮಚ ಲೈಟ್ ಸೋಯಾ ಸಾಸ್

• ಅಗತ್ಯ ತಕ್ಕಷ್ಟು ಉಪ್ಪು

• 1 – ಮೊಟ್ಟೆಯ ಬಿಳಿ

• 2 – ಕತ್ತರಿಸಿದ ಹಸಿಮೆಣಸಿನಕಾಯಿ

• 2 ಚಮಚ corn flour

• 1 ಚಮಚ ಬಿಳಿ ಕಾಳುಮೆಣಸಿನ ಪುಡಿ

• 1 ಚಮಚ ಪುಡಿ ಮಾಡಿದ ಕರಿಮೆಣಸು

• 8 clove ಬೆಳ್ಳುಳ್ಳಿ

• 1 ಚಮಚ ಶುಂಠಿ ಪೇಸ್ಟ್

• 1 ಚಮಚ ಬೆೆಳ್ಳುಳ್ಳಿ ಪೇಸ್ಟ್

• 1 ಕಪ್ ಈರುಳ್ಳಿ ದಂಟು

• 2 ಚಮಚ ಜೋಳದ ಹಿಟ್ಟು

Step 1:

ಮೊದಲಿಗೆ ನೀವು ತೆಗೆದುಕೊಂಡ ಚಿಕನ್ ಅನ್ನು ಸ್ವಲ್ಪ ಉಪ್ಪು, ಮೊಟ್ಟೆಯ ಬಿಳಿಯ ಭಾಗ, ಸೋಯಾ ಸಾಸ್, ಬಿಳಿ ಮೆಣಸಿನಪುಡಿ, ವಿನೆಗರ್ ಮತ್ತು ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ ಮ್ಯಾರಿನೆಟ್ ಮಾಡಿ ಮತ್ತು 15 ರಿಂದ 20 ನಿಮಿಷಗಳು ಇದು ಹಾಗೆ ಇರಲು ಬಿಡಿ.

ಮನೆಯಲ್ಲೇ ಮಾಡಿ ರೆಸ್ಟೋರೆಂಟ್ ಶೈಲಿಯ ಗಾರ್ಲಿಕ್ ಬಟರ್ ಚಿಕನ್

Step 2:

ಒಂದು ಪ್ಯಾನ್ ನಲ್ಲಿ ಸ್ವಲ್ಪ ಎಣ್ಣೆ ಹಾಕಿ ಅದನ್ನು ಬಿಸಿ ಮಾಡಿ. ಎಣ್ಣೆ ಬಿಸಿಯಾಗುತ್ತಿದ್ದಂತೆ ಅದಕ್ಕೆ ಚಿಕನ್ ಪೀಸ್ ಗಳನ್ನು ಹಾಕಿ. ಸ್ವಲ್ಪ ಪ್ರಮಾಣದಲ್ಲಿ ಗೋಲ್ಡನ್ ಕಲರ್ ಬರುವವರೆಗೂ ಎಣ್ಣೆಯಲ್ಲಿ ಬಾಡಿಸಿ.

Step 3:

ಈಗ ಒಂದು ಪ್ಯಾನ್ ತೆಗೆದುಕೊಂಡು ಅದಕ್ಕೆ ಸ್ವಲ್ಪ ಬೆಣ್ಣೆ ಮತ್ತು ಬೆಳ್ಳುಳ್ಳಿ ಹಾಕಿ ಸ್ವಲ್ಪ ಹೊತ್ತು ಹುರಿದು, ಹೆಚ್ಚಿದ ಹಸಿ ಮೆಣಸಿನಕಾಯಿ ಮತ್ತು ಈರುಳ್ಳಿ ಹೂವು ಸೇರಿಸಿ. ಕೆಲವು ಸೆಕೆಂಡುಗಳವರೆಗೆ ಇದನ್ನು ತಿರುಗಿಸಿ ಅದಕ್ಕೆ ಕಪ್ಪು ಮೆಣಸಿನ ಪುಡಿ, ಸ್ವಲ್ಪ ಉಪ್ಪು, ಕಾರ್ನ್ ಫ್ಲೋರ್ ಪೇಸ್ಟ್ ಎಲ್ಲವನ್ನೂ ಸೇರಿಸಿ ಒಂದು ನಿಮಿಷ ಚೆನ್ನಾಗಿ ಬೇಯಿಸಿ. ಇದು ಗಟ್ಟಿಯಾಗುತ್ತಿದ್ದಂತೆ ಸ್ವಲ್ಪ ನೀರು ಹಾಕಿ ಒಂದು ನಿಮಿಷ ಮತ್ತೆ ಬೇಯಿಸಿ.

Step 4:

ಈಗ ನೀವು ಹುರಿದುಕೊಂಡ ಚಿಕನ್ ಪೀಸ್ ಗಳನ್ನು ಇದರಲ್ಲಿ ಸೇರಿಸಿ ಎಲ್ಲವನ್ನೂ ಒಮ್ಮೆ ತಿರುಗಿಸಿ ಮತ್ತೆ ಒಂದು ನಿಮಿಷ ಬಿಸಿ ಮಾಡಿ. ಈಗ ನಿಮ್ಮ ಗಾರ್ಲಿಕ್ ಬಟರ್ ಚಿಕನ್ ಸವಿಯಲು ರುಚಿಯಾಗಿ ತಯಾರಾಗಿರುತ್ತದೆ.

ಹಿಂದಿನ ಲೇಖನಈ ರಾಶಿಯ ಒಡಹುಟ್ಟಿದವರು ನಿಮಗಿದ್ದಾರೆಂದರೆ ನಿಮ್ಮ ಅದೃಷ್ಟ
ಮುಂದಿನ ಲೇಖನಹೃದಯಾಘಾತದಿಂದ ಸಚಿವ ಉಮೇಶ್ ಕತ್ತಿ ನಿಧನ