ಮನೆ ಕಾನೂನು ಫೇಸ್’ಬುಕ್’ನಲ್ಲಿರುವ ಫೋಟೋ, ವಿಡಿಯೋಗಳನ್ನು ಗೂಗಲ್ ಫೋಟೋಸ್’ಗೆ ವರ್ಗಾಹಿಸುವುದು ಹೇಗೆ?

ಫೇಸ್’ಬುಕ್’ನಲ್ಲಿರುವ ಫೋಟೋ, ವಿಡಿಯೋಗಳನ್ನು ಗೂಗಲ್ ಫೋಟೋಸ್’ಗೆ ವರ್ಗಾಹಿಸುವುದು ಹೇಗೆ?

0

ಸೋಷಿಯಲ್ ಮೀಡಿಯಾ ಎಂಬುದು ಇಂದು ಮಾಂತ್ರಿಕ ಜಗತ್ತು ಎಂಬಂತಾಗಿದೆ. ಇದರಲ್ಲಿ ಅತ್ಯಂತ ಜನಪ್ರಿಯ ಸಾಮಾಜಿಕ ಮಾಧ್ಯಮಗಳಲ್ಲಿ ಒಂದಾಗರುವ ಫೇಸ್’ಬುಕ್ ಅನ್ನು ಎಲ್ಲಾ ವಯಸ್ಸಿನ ಜನರು ಉಪಯೋಗಿಸುತ್ತಿದ್ದಾರೆ.

Join Our Whatsapp Group

ಪ್ರತಿದಿನ ಸುಮಾರು ಕೋಟಿಗಟ್ಟಲೆ ಜನರು ಇದರಲ್ಲಿ ಸಕ್ರಿಯರಾಗಿದ್ದಾರೆ. ಬಳಕೆದಾರರ ಅನುಕೂಲಕ್ಕೆ ತಕ್ಕಂತೆ ಮೆಟಾ ಒಡೆತನದ ಕಂಪನಿ ಅನೇಕ ಫೀಚರ್’ಗಳನ್ನು, ನೂತನ ಅಪ್ಡೇಟ್’ಗಳನ್ನು ಬಿಡುಗಡೆ ಮಾಡುತ್ತಲೇ ಇರುತ್ತದೆ. ಹಾಗೆಯೆ ಎಫ್’ಬಿಯಲ್ಲಿ ಹಂಚಿಕೊಳ್ಳುವ ಫೋಟೋ, ವಿಡಿಯೋ ಅಥವಾ ಯಾವುದೇ ಡಾಟಾವನ್ನು ಇತರೆ ಮಾಧ್ಯಮಕ್ಕೆ ವರ್ಗಾವಣೆ ಮಾಡಬಹುದು.

ಹಾಗಾದರೆ ನೀವು ಫೇಸ್’ಬುಕ್’ನಲ್ಲಿ ಶೇರ್ ಮಾಡಿದ ಫೋಟೋ, ವಿಡಿಯೋವನ್ನು ಗೂಗಲ್ ಫೋಟೋಸ್ಗೆ  ವರ್ಗಾವಣೆ ಮಾಡುವುದು ಹೇಗೆ ಎಂಬುದನ್ನು ನೋಡೋಣ.

• ಮೊದಲಿಗೆ ಕಂಪ್ಯೂಟರ್’ನಲ್ಲಿ ನಿಮ್ಮ ಫೇಸ್’ಬುಕ್ ಖಾತೆಯಿಂದ ಲಾಗಿನ್ ಆಗಿ

• ಬಲ ತುದಿಯಲ್ಲಿರುವ ನಿಮ್ಮ ಪ್ರೊಫೂಲ್ ಐಕಾನ್ ಮೇಲೆ ಕ್ಲಿಕ್ ಮಾಡಿ ಸೆಟ್ಟಿಂಗ್ಸ್’ಗೆ ಹೋಗಿ

• ಈಗ ಎಡ ಬದಿಯಲ್ಲಿರುವ ಫೇಸ್’ಬುಕ್ ಇನ್’ಫಾರ್ಮೇಷನ್ ಆಯ್ಕೆ ಮೇಲೆ ಕ್ಲಿಕ್ ಮಾಡಿ

• ನಂತರ ಟ್ರಾನ್ಫರ್ ಕಾಪಿ ಎಂಬ ಆಯ್ಕೆಯಲ್ಲಿರುವ ವೀವ್ ಬಟನ್ ಮೇಲೆ ಒತ್ತಿರಿ

• ಇದರಲ್ಲಿ ಗೂಗಲ್ ಫೋಟೋಸ್ ಆಯ್ಕೆ ಮಾಡಿ

• ಈಗ ನಿಮಗೆ ಯಾವ ಫೈಲ್ ಟ್ರಾನ್ಫರ್ ಮಾಡಬೇಕು ಅದನ್ನು ಆಯ್ಕೆ ಮಾಡಿ ಒಕೆ ಒತ್ತಿರಿ

• ನಂತರ ಕನೆಕ್ಟ್ ಬಟಲ್ ಒತ್ತಿ ಗೂಗಲ್ ಅಕೌಂಟ್ಗೆ ಲಾಗಿನ್ ಆಗಿ, ಟ್ರಾನ್ಫರ್ ಬಟಲ್ ಕ್ಲಿಕ್ ಮಾಡಿದರೆ ಆಯಿತು

ಹಣ ಕೊಟ್ಟು ಫೇಸ್ ಬುಕ್ ಬ್ಲೂ ಟಿಕ್ ಪಡೆದುಕೊಳ್ಳಿ:

ಬ್ಲೂ ಟಿಕ್ ವಿಚಾರ ಟ್ವಿಟ್ಟರ್ ಬಳಿಕ ಇದೀಗ ಮೆಟಾ ಕಂಪನಿಯಲ್ಲೂ ಸದ್ದು ಮಾಡುತ್ತಿದೆ. ಟ್ವಿಟರ್ ಅನ್ನೇ ಅನುಸರಿಸಿರುವ ಮೆಟಾ ಈಗ ಹಣ ಪಾವತಿ ಮಾಡಿದರೆ ಬ್ಲೂ ಟಿಕ್ ನೀಡುವ ವ್ಯವಸ್ಥೆಯನ್ನು ಜಾರಿಗೆ ತಂದಿದೆ. ಈ ಬಗ್ಗೆ ಮಾಹಿತಿ ನೀಡಿರುವ ಫೇಸ್’ಬುಕ್’ನ ಮಾತೃ ಸಂಸ್ಥೆ ಮೆಟಾದ ಸಿಇಒ ಮಾರ್ಕ್ ಜುಕರ್ಬರ್ಗ್, ಮೆಟಾ ವೆರಿಫೈಡ್ ಅನ್ನು ಶುರು ಮಾಡಲಿದ್ದದೇವೆ ಎಂದು ಹೇಳಿದ್ದಾರೆ. ಇದು ಒಬ್ಬರ ಖಾತೆಯನ್ನು ದೃಢೀಕರಿಸಲು ತಿಂಗಳಿಗೆ $11.99 ರಿಂದ ಪ್ರಾರಂಭವಾಗುವ ಸೇವೆಯಾಗಿದೆ. ಅಂದರೆ ಭಾರತೀಯ ಮೌಲ್ಯದ ಪ್ರಕಾರ ಸುಮಾರು 900 ರೂ. ಎನ್ನಬಹುದು.