ಹುಬ್ಬಳ್ಳಿ (Hubballi )-ಹಳೇ ಹುಬ್ಬಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರ ವಿಚಾರಣೆ ಮಾಡುತ್ತಿರುವ ಪೊಲೀಸರು ಗಲಭೆ ಕುರಿತ ಇನ್ನಷ್ಟು ಮಾಹಿತಿ ಕಲೆ ಹಾಕುತ್ತಿದ್ದಾರೆ.
ಏ.16 ರ ರಾತ್ರಿ ಹಳೇ ಹುಬ್ಬಳ್ಳಿಯಲ್ಲಿ ನಡೆದ ಗಲಭೆ ದಿನದಿಂದ ಪೊಲೀಸರ ಎಂಟು ತಂಡಗಳು ತೀವ್ರ ಕಾರ್ಯಾಚರಣೆ ನಡೆಸಿದ್ದವು. ಗಲಭೆಗೆ ಸಂಬಂಧಿಸಿದಂತೆ ಇದುವರೆಗೂ ಒಟ್ಟು 146 ಜನರನ್ನು ಬಂಧಿಸಲಾಗಿದೆ.
ಗಲಭೆ ನಂತರದಲ್ಲಿ ರಣರಂಗದಂತಾಗಿದ್ದ ಹಳೇ ಹುಬ್ಬಳ್ಳಿ ಪ್ರದೇಶ ಇದೀಗ ಸಹಜ ಸ್ಥಿತಿಗೆ ಮರಳಿದೆ. ಪೊಲೀಸ್ ಆಯುಕ್ತರು ಸಹ ನಿಷೇಧಾಜ್ಞೆ ಹಿಂಪಡೆದು, ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್‌ಗೆ ಕ್ರಮ ವಹಿಸಿದ್ದಾರೆ.
ವಿವಾದಿತ ಪೋಸ್ವ್ ಹಾಕಿದ್ದ ಅಭಿಷೇಕ ಹಿರೇಮಠ ಸೋಮವಾರ ಕೂಡಾ ಪೊಲೀಸ್ ಬಿಗಿ ಬಂದೋಬಸ್ತ್‌ನಲ್ಲಿ ನಗರದ ಮಹೇಶ ಪಿಯು ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಹಾಜರಾದರು.
ಇನ್ನು ಹಳೇ ಹುಬ್ಬಳ್ಳಿ ಗಲಭೆಯಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಪೊಲೀಸರು ಬಂಧಿಸಿರುವ ಮೊಹಮ್ಮದ ಸಾದಿಕ್ ಕಂಚಗಾರ ಇಲ್ಲಿಯ ಸುಭಾಷನಗರದ ಸಾಂಬ್ರೆ ಪಿಯು ಸೈನ್ಸ್ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿಅರ್ಥಶಾಸ್ತ್ರ ಪರೀಕ್ಷೆ ಬರೆದರು. ಇಲ್ಲಿಯೂ ಪೊಲೀಸರ ಬಿಗಿ ಬಂದೋಬಸ್ತ್ ನಿಯೋಜಿಸಲಾಗಿತ್ತು.
ಮೊಹಮ್ಮದ ಸಾದಿಕ್ ಬಂಧನವಾಗಿದ್ದರಿಂದ ಏ. 22ರಂದು ನಡೆದ ಪರೀಕ್ಷೆಗೆ ಹಾಜರಾಗಿರಲಿಲ್ಲ. ಬಳಿಕ ಕುಟುಂಬಸ್ಥರು ನ್ಯಾಯಾಲಯ ಮೆಟ್ಟಿಲೇರಿದ ಬಳಿಕ ಪರೀಕ್ಷೆ ಬರೆಯಲು 4 ನೇ ಹೆಚ್ಚವರಿ ದಿವಾಣಿ ನ್ಯಾಯಾಲಯ ಅವಕಾಶ ಕಲ್ಪಿಸಿತ್ತು.