ಮನೆ ಅಪರಾಧ ಕ್ರಿಮಿನಲ್ ಜೊತೆಗೆ ಬಂದಿದ್ದ ಗೋವಾ ಪೊಲೀಸ್ ​ನನ್ನು ಬಂಧಿಸಿದ ಹುಬ್ಬಳ್ಳಿ ಪೊಲೀಸರು

ಕ್ರಿಮಿನಲ್ ಜೊತೆಗೆ ಬಂದಿದ್ದ ಗೋವಾ ಪೊಲೀಸ್ ​ನನ್ನು ಬಂಧಿಸಿದ ಹುಬ್ಬಳ್ಳಿ ಪೊಲೀಸರು

0

ಹುಬ್ಬಳ್ಳಿ: ನಟೋರಿಯಸ್ ಕ್ರಿಮಿನಲ್ ಜೊತೆಗೆ ಬಂದಿದ್ದ ಗೋವಾ ಪೊಲೀಸ್​ನನ್ನು ಹಳೇ ಹುಬ್ಬಳ್ಳಿಯ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಅಮಿತ ನಾಯಕ್ ಗೋವಾ ಪೊಲೀಸ್ ಕ್ರೈಂ ಬ್ರಾಂಚ್​ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

Join Our Whatsapp Group

ಆರೋಪಿ ಸುಲೇಮಾನ್ ಸಿದ್ದಿಕಿ ಹೈದರಾಬಾದ್, ಪುಣೆ, ದೆಹಲಿ, ಗೋವಾ ರಾಜ್ಯಗಳ ಪೊಲೀಸರಿಗೆ ಬೇಕಾಗಿದ್ದಾನೆ. ಈತನ ವಿರುದ್ಧ ಕೊಲೆ, ಕೊಲೆ‌ ಯತ್ನ, ಬೆದರಿಕೆ, ವಂಚನೆ, ಭೂ ಮಾಫಿಯಾ ದಂಧೆ, ಸಾರ್ವಜನಿಕರನ್ನು ಹೆದರಿಸಿ ದುಡ್ಡು ಕೀಳುವುದು, ದರೋಡೆ ಪ್ರಕರಣಗಳಲ್ಲಿ ಭಾಗಿಯಾಗಿರುವ ಆರೋಪಗಳಿವೆ.

ಈ ಹಿನ್ನೆಲೆಯಲ್ಲಿ ಹತ್ತಕ್ಕೂ ಹೆಚ್ಚು ರಾಜ್ಯಗಳಿಗೆ ಬೇಕಾಗಿರುವ ನಟೋರಿಯಸ್ ಕ್ರಿಮಿನಲ್ ಸುಲೇಮಾನ್ ಸಿದ್ದಿಕಿಯನ್ನು ಬಂಧಿಸಿ ಗೋವಾ ಪೊಲೀಸರು ಕಂಬಿ ಹಿಂದೆ ತಳ್ಳಿದ್ದರು. ನಟೋರಿಯಸ್ ಕ್ರಿಮಿನಲ್ ಸುಲೇಮಾನ್ ಸಿದ್ದಿಕಿ ಕಾಯಲು ಅಮಿತ್ ನಾಯಕನನ್ನ ನೇಮಕ ಮಾಡಲಾಗಿತ್ತು.

ಆದರೆ, ಸುಲೇಮಾನ್ ಸಿದ್ದಿಕಿಯನ್ನು ಶುಕ್ರವಾರ (ಡಿ.13) ಮಧ್ಯರಾತ್ರಿ ಕಸ್ಟಡಿಯಿಂದ ಬಿಟ್ಟಿದ್ದಲ್ಲದೇ, ಆತನೊಂದಿಗೆಯೇ ತಾನು ಪರಾರಿಯಾಗಿದ್ದನು. ನಟೋರಿಯಸ್ ಕ್ರಿಮಿನಲ್‌‌ ಜೊತೆಗೆ ಪೊಲೀಸ್ ಠಾಣೆಯಿಂದ ಎಸ್ಕೇಪ್ ಅಗಿದ್ದ ಅಮಿತ್ ನಾಯಕ ಗೋವಾದಿಂದ ತಲೆ‌ ಮರೆಸಿಕೊಳ್ಳಲು ಹುಬ್ಬಳ್ಳಿಗೆ ಬಂದಿದ್ದನು. ಇಲ್ಲಿ ಹಳೇ ಹುಬ್ಬಳ್ಳಿಯ ಪೊಲೀಸರ ಕೈವಶವಾಗಿದ್ದಾರೆ.