ಮನೆ ಕಾನೂನು ಹುಬ್ಬಳ್ಳಿ: ಗಂಗೂಬಾಯಿ ಹಾನಗಲ್‌ ವಿದ್ಯಾಲಯ ಎದುರು ಎಬಿವಿಪಿ ಪ್ರತಿಭಟನೆ

ಹುಬ್ಬಳ್ಳಿ: ಗಂಗೂಬಾಯಿ ಹಾನಗಲ್‌ ವಿದ್ಯಾಲಯ ಎದುರು ಎಬಿವಿಪಿ ಪ್ರತಿಭಟನೆ

0

ಹುಬ್ಬಳ್ಳಿ: ಡಾ.ಗಂಗೂಬಾಯಿ ಹಾನಗಲ್ ಗುರುಕುಲ ಮಾದರಿ ಸಂಗೀತ ವಿಶ್ವವಿದ್ಯಾಲಯ ರದ್ದತಿ ಖಂಡಿಸಿ ಎಬಿವಿಪಿ ನೇತೃತ್ವದಲ್ಲಿ ವಿದ್ಯಾರ್ಥಿಗಳು ವಿದ್ಯಾಲಯದ ಮುಂದೆ ಪ್ರತಿಭಟನೆ ನಡೆಸಿದರು.

Join Our Whatsapp Group

ಸೋಮವಾರ ವಿದ್ಯಾಲಯದ ಮುಂದೆ ಜಮಾಯಿಸಿದ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು. ಜಿಲ್ಲಾಧಿಕಾರಿ ಸ್ಥಳಕ್ಕೆ ಆಗಮಿಸಬೇಕೆಂದು‌ ಪ್ರತಿಭಟನಾಕಾರರು ಪಟ್ಟು ಹಿಡಿದ್ದಿದ್ದಾರೆ.

ತಹಶಿಲ್ದಾರರು ಕಲನಗೌಡ ಅವರು ಮನವಿ ಸ್ವೀಕರಿಸಲು‌ ಬಂದರೂ ಮನವಿ ನೀಡಲು‌ ವಿದ್ಯಾರ್ಥಿಗಳು ನಿರಾಕರಿಸಿದರು.

ಜಿಲ್ಲಾಧಿಕಾರಿಗಳು ಬಾರದಿದ್ದರೆ ವಿದ್ಯಾಲಯ ಒಳನುಗ್ಗುವುದಾಗಿ ಹೇಳಿದರಲ್ಲದೆ, ಒಳಗಡೆ ಭರತನಾಟ್ಯ ಕಿರಿಯ, ಹಿರಿಯ‌ ವಿಭಾಗದ ಪರೀಕ್ಷೆ ನಡೆಯುತ್ತಿದ್ದು, ಅಧಿಕಾರಿಗಳು ಸ್ಪಂದಿಸದಿದ್ದರೆ, ಪರೀಕ್ಷೆಗೆ ಅಡ್ಡಿ ಎಚ್ಚರಿಕೆ ನೀಡಿದರು.

ವಿದ್ಯಾಲಯದ ಮುಖ್ಯದ್ವಾರ ಮುಚ್ಚಿ ಪೊಲೀಸ್ ಭದ್ರತೆ ನೀಡಲಾಗಿದೆ. ಎಬಿವಿಪಿಯ ಮಣಿಕಂಠ ಕಳಸ, ಪೃಥ್ವಿ ಇನ್ನಿತರರು ಇದ್ದರು.