ಹುಬ್ಬಳ್ಳಿ(Hubballi): ಮನೆಯ ಮುಂದೆ ನಿಲ್ಲಬೇಡ ಎಂದಿದ್ದಕ್ಕೆ ಕಾಂಗ್ರೆಸ್ ಯುವ ಮುಖಂಡನೊಬ್ಬನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಸೋನಿಯಾ ಗಾಂಧಿ ನಗರದ ನಿಜಾಮುದ್ದಿನ್ ಪ್ಲಾಟ್ನಲ್ಲಿ ನಡೆದಿದೆ.
ಕಾಂಗ್ರೆಸ್ ಯುವ ಮುಖಂಡ ತೌಸಿಫ್ ಲಕ್ಕುಂಡಿ ತೀವ್ರವಾಗಿ ಗಾಯಗೊಂಡಿರುವ ವ್ಯಕ್ತಿ.
ಇತ್ತೀಚೆಗಷ್ಟೇ ಸೋನಿಯಾ ಗಾಂಧಿ ನಗರದಲ್ಲಿ ಮನೆ ಮಾಡಿದ್ದ ತೌಸಿಫ್ ಮನೆಯ ಬಳಿ ಪದೇ ಪದೆ ಐದಾರು ಜನರೊಂದಿಗೆ ಬಂದು ನಿಲ್ಲುತ್ತಿದ್ದ ಇಸ್ಮಾಯಿಲ್ ಎಂಬುವರ ನಡುವೆ ವಾಗ್ವಾದ ನಡೆದಿತ್ತು. ಇದರಿಂದ ಕೋಪಗೊಂಡಿದ್ದ ಇಸ್ಮಾಯಿಲ್ ನಿನ್ನೆ ರಾತ್ರಿ ತೌಸಿಫ್ನ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಘಟನೆಯಲ್ಲಿ ಗಾಯಗೊಂಡ ತೌಸಿಫ್ ಅವರನ್ನು ಚಿಕಿತ್ಸೆಗಾಗಿ ಕಿಮ್ಸ್ಗೆ ದಾಖಲಿಸಲಾಗಿದೆ. ಘಟನೆ ಕುರಿತು ಮಾಹಿತಿ ಪಡೆದ ಹಳೆ ಹುಬ್ಬಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿ ಬಂಧನಕ್ಕೆ ಬಲೆ ಬೀಸಿದ್ದಾರೆ.