ಮನೆ ಕಾನೂನು ಹುಬ್ಬಳ್ಳಿ ಗಲಭೆ ಪ್ರಕರಣ: ಆರೋಪಿಯ ಜಾಮೀನು ಅರ್ಜಿ ವಜಾ, ಪರೀಕ್ಷೆ ಬರೆಯಲು ಅನುಮತಿ

ಹುಬ್ಬಳ್ಳಿ ಗಲಭೆ ಪ್ರಕರಣ: ಆರೋಪಿಯ ಜಾಮೀನು ಅರ್ಜಿ ವಜಾ, ಪರೀಕ್ಷೆ ಬರೆಯಲು ಅನುಮತಿ

0

ಹುಬ್ಬಳ್ಳಿ(Hubballi): ನಾಳೆಯಿಂದ ದ್ವಿತೀಯ ಪಿಯುಸಿ ಪರೀಕ್ಷೆ ಆರಂಭವಾಗಲಿದ್ದು, ಇತ್ತೀಚಿಗೆ ನಗರದಲ್ಲಿ ನಡೆದ ಕೋಮುಗಲಭೆಗೆ ಕಾರಣವಾದ ಆರೋಪಿಗೆ ಪರೀಕ್ಷೆ ಬರೆಯಲು ಜಾಮೀನು ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಾಗಿತ್ತು. ಆದರೆ ಸದರಿ ಅರ್ಜಿ ವಜಾಗೊಂಡಿದ್ದು, ಪರೀಕ್ಷೆ ಬರೆಯಲು ಅವಕಾಶ ನೀಡಿದೆ.

ವಾಟ್ಸಾಪ್​​ನಲ್ಲಿ ವಿವಾದಾತ್ಮಕ ಸ್ಟೇಟಸ್​ ಇರಿಸಿ ಕೋಮು ಗಲಭೆಗೆ ಕಾರಣವಾಗಿ ಬಂಧಿತನಾಗಿರುವ ಹಳೆ ಹುಬ್ಬಳ್ಳಿಯ ಆನಂದನಗರ ನಿವಾಸಿ ಅಭಿಷೇಕ ಹಿರೇಮಠಗೆ ಮಧ್ಯಂತರ ಜಾಮೀನು ನೀಡಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿರುವುದಲ್ಲದೇ ಪೊಲೀಸ್​ ಭದ್ರತೆಯಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡುವಂತೆ ಪೊಲೀಸರಿಗೆ ಆದೇಶಿಸಿದೆ.

ಏಪ್ರಿಲ್ 22 ರಿಂದ ಮೇ 16 ರವರಗೆ ಪರೀಕ್ಷೆ ಹಾಜರಾಗಲು ಅನುಮತಿ ನೀಡಿದೆ. ಹಳೇ ಹುಬ್ಬಳ್ಳಿ ಪೊಲೀಸರ ಬೆಂಗಾವಲು ಭದ್ರತೆ ನೀಡುವಂತೆ ಸೂಚನೆ ನೀಡಿದೆ‌. ಜೈಲಿನಲ್ಲಿನಲ್ಲಿ ಪ್ರತ್ಯೇಕ ಸೆಲ್ ವ್ಯವಸ್ಥೆ, ಓದಲು ಬೇಕಾದ ಪುಸ್ತಕ ಮತ್ತು ಬೆಳಕಿನ ವ್ಯವಸ್ಥೆ ಕಲ್ಪಿಸುವಂತೆ ಕೋರ್ಟ್ ಅದೇಶ ನೀಡಿದೆ.

ಪರೀಕ್ಷೆ ಬರೆಯಲು ಅವಕಾಶ ನೀಡುವಂತೆ ಅಭಿಷೇಕ್​ ಪರ ವಕೀಲ ಸಂಜೀವ್ ಬಡಸ್ಕರ್ ಕೋರ್ಟ್ ಮೆಟ್ಟಿಲೇರಿ ವಾದ ಮಂಡನೆ ಮಾಡಿದ್ದರು‌. ಆದರೆ ಜಾಮೀನು ಅರ್ಜಿಯನ್ನು ವಜಾಗೊಳಿಸಿದ ಹುಬ್ಬಳ್ಳಿಯ 4 ನೇ ಜೆಂಎಂಎಫ್​ಸಿ‌ ಕೋರ್ಟ್ ಅಭಿಷೇಕ್​ಗೆ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಿದೆ.