ಮನೆ ರಾಜ್ಯ ರಾಜ್ಯ ರಾಜಕಾರಣದಲ್ಲಿ ಭಾರಿ ಬೆಳವಣಿಗೆ : ಮೂರು ಪಕ್ಷದ 56 ಶಾಸಕರ ಮಹತ್ವದ ಸಭೆ

ರಾಜ್ಯ ರಾಜಕಾರಣದಲ್ಲಿ ಭಾರಿ ಬೆಳವಣಿಗೆ : ಮೂರು ಪಕ್ಷದ 56 ಶಾಸಕರ ಮಹತ್ವದ ಸಭೆ

0

ಬೆಂಗಳೂರು : ರಾಜ್ಯ ರಾಜಕೀಯದಲ್ಲಿ ಇದೀಗ ಭಾರಿ ಬೆಳವಣಿಗೆ ಆಗಿದ್ದು, ಮೂರು ಪಕ್ಷಗಳ ಶಾಸಕರ ಮಹತ್ವದ ಸಭೆ ನಡೆದಿದೆ. ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಜೆಪಿ ಶಾಸಕರು ಒಂದೇ ಕಡೆ ಸೇರಿ ಸಭೆ ನಡೆಸಿದ್ದಾರೆ ಎನ್ನಲಾಗಿದೆ. ಈ ಒಂದು ಸಭೆಯಲ್ಲಿ 56ಕ್ಕೂ ಹೆಚ್ಚು ಶಾಸಕರು ಭಾಗಿಯಾಗಿದ್ದರು. ಅದರಲ್ಲೂ ಮೊದಲ ಬಾರಿಗೆ ಆಯ್ಕೆಯಾದ ಶರಣಗೌಡ ಕಂದಕೂರು, ಶಿವಗಂಗಾ ಬಸವರಾಜ್ ಈ ಒಂದು ಸಭೆ ಆಯೋಜನೆ ಮಾಡಿದ್ದು ಹೊಸದಾಗಿ ಆಯ್ಕೆಯಾದ ಶಾಸಕರು ಈ ಸಭೆಯಲ್ಲಿ ಭಾಗಿಯಾಗಿದ್ದರು.

ಜೆಡಿಎಸ್ ಕಾಂಗ್ರೆಸ್ ಹಾಗು ಬಿಜೆಪಿ ಶಾಸಕರು ಸಭೆಯಲ್ಲಿ ಭಾಗಿಯಾಗಿದ್ದರು.ಅಲ್ಲದೇ ಜೆಡಿಎಸ್ ಶಾಸಕರಿಗೆ ಔತಣಕೂಟಕ್ಕೆ ವಿಶೇಷ ಅಹ್ವಾನ ನೀಡಲಾಗಿದೆ. ಅಲ್ಲದೇ ಹಿರಿಯ ಮತ್ತು ಕಿರಿಯ ಶಾಸಕರಿಗೂ ಆ ಅಹ್ವಾನ ನೀಡಲಾಗಿದೆ. ಇದೀಗ ಮೂರು ಪಕ್ಷದ ಶಾಸಕರ ಸಭೆ ತೀವ್ರ ಕುತೂಹಲ ಮೂಡಿಸಿದೆ. ಮೊದಲ ಬಾರಿಗೆ ಆಯ್ಕೆಯಾದ ಶಾಸಕರೇ ಈ ಒಂದು ಸಭೆಯಲ್ಲಿ ಭಾಗಿಯಾಗಿದ್ದಾರೆ.

ಶೇಕಡಾ 70ಕ್ಕಿಂತ ಹೆಚ್ಚು ಮೊದಲ ಬಾರಿಗೆ ಆಯ್ಕೆಯಾದ ಶಾಸಕರಿಗೆಅಹ್ವಾನ ನೀಡಲಾಗಿದೆ. ಪಕ್ಷಾತೀತವಾಗಿ ಮೊದಲ ಬಾರಿಯ ಶಾಸಕರಿಗೆ ಔತಣಕೂಟ ಏರ್ಪಡಿಸಲಾಗಿತ್ತು. ಆಯೋಜಕರು ಕೆಲ ಶಾಸಕರನ್ನು ನೇರವಾಗಿ ಸಂಪರ್ಕಿಸಿದ್ದಾರೆ ಎನ್ನಲಾಗಿದೆ. ಪ್ರಮುಖವಾಗಿ ಜೆಡಿಎಸ್ ಶಾಸಕರು ಜೊತೆಯು ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ಜೆಡಿಎಸ್ ಶಾಸಕರಿಗೆ ಔತಣಕೂಟಕ್ಕೆ ವಿಶೇಷ ಆಹ್ವಾನ ನೀಡಲಾಗಿದೆ.