ಮನೆ ರಾಜ್ಯ ರೈಲ್ವೆ ಹಳಿಗಳ ಮೇಲೆ ಬಿದ್ದ ಬೃಹತ್ ಮರ: ರೈಲು ಸಂಚಾರದಲ್ಲಿ ವ್ಯತ್ಯಯ

ರೈಲ್ವೆ ಹಳಿಗಳ ಮೇಲೆ ಬಿದ್ದ ಬೃಹತ್ ಮರ: ರೈಲು ಸಂಚಾರದಲ್ಲಿ ವ್ಯತ್ಯಯ

0

ಶಿವಮೊಗ್ಗ: ಬೃಹತ್ ಮರವೊಂದು ರೈಲ್ವೆ  ಹಳಿಗಳ ಮೇಲೆ ಬಿದ್ದು, ರೈಲು ಸಂಚಾರದಲ್ಲಿ ವ್ಯತ್ಯಯವಾದ ಘಟನೆ ಹೊಸನಗರ ತಾಲೂಕಿನ ಅರಸಾಳು ಬಳಿ ಬಟಾಣಿಜೆಡ್ಡು ಎಂಬಲ್ಲಿ ಸಂಭವಿಸಿದೆ.

Join Our Whatsapp Group

ಮರ ಬಿದ್ದ ಪರಿಣಾಮ ವಿದ್ಯುತ್ ತಂತಿಗಳಿಗೂ ಹಾನಿಯಾಗಿದೆ.

ತಾಳಗುಪ್ಪದಿಂದ ಬೆಂಗಳೂರಿಗೆ ರೈಲು ಹೊರಟಿದ್ದು, ಈ ವೇಳೆ ಅರಸಾಳು ಬಳಿಯ ಬಟಾಣಿಜೆಡ್ಡು ಎಂಬಲ್ಲಿ ಮರಬಿದ್ದ ಕಾರಣ 7.15ಕ್ಕೆ ಶಿವಮೊಗ್ಗ ತಲುಪಬೇಕಿದ್ದ ರೈಲು ಕೆಲ ಹೊತ್ತು ನಿಂತು, 9 ಗಂಟೆಗೆ ಶಿವಮೊಗ್ಗಕ್ಕೆ ತಲುಪಿತು.

ಪ್ರಯಾಣಿಕರು ಎರಡು ತಾಸು ಕಾದು ಹೈರಾಣಾಗಿದ್ದರು.