ಮನೆ ರಾಜ್ಯ ಕೆಆರ್ ಎಸ್ ನಿಂದ ನದಿಗೆ ಭಾರಿ ಪ್ರಮಾಣದ ನೀರು ಬಿಡುಗಡೆ: ದೋಣಿ ವಿಹಾರ ಕೇಂದ್ರ ಮುಳುಗಡೆ

ಕೆಆರ್ ಎಸ್ ನಿಂದ ನದಿಗೆ ಭಾರಿ ಪ್ರಮಾಣದ ನೀರು ಬಿಡುಗಡೆ: ದೋಣಿ ವಿಹಾರ ಕೇಂದ್ರ ಮುಳುಗಡೆ

0

ಮಂಡ್ಯ(Mandya): ಕಾವೇರಿ ನದಿ ಪಾತ್ರದ ಪ್ರದೇಶದಲ್ಲಿ  ಹೆಚ್ಚಿನ ಮಳೆಯಾಗುತ್ತಿರುವುದರಿಂದ  ಕೆ.ಆರ್.ಎಸ್ ಜಲಾಶಯದ ಒಳಹರಿವು ಹೆಚ್ಚಾಗಿದ್ದು, ನದಿಗೆ ಅಪಾರ ಪ್ರಮಾಣದ ನೀರನ್ನು ಹರಿಸಲಾಗುತ್ತಿದೆ.

ಕೊಡಗು, ಮೈಸೂರು ಭಾಗದಲ್ಲಿ ಹೆಚ್ಚಿನ ಮಳೆಯಾಗಿರುವುದರಿಂದ ಕೆಆರ್ ಎಸ್ ಜಲಾಶಯಕ್ಕೆ ಅಪಾರ ಪ್ರಮಾಣದಲ್ಲಿ ನೀರು ಹರಿದು ಬರುತ್ತಿರುವ ಕಾರಣದಿಂದಾಗಿ ಕೆಆರ್ ಎಸ್ ಜಲಾಶಯದಿಂದ 78 ಸಾವಿರ ಕ್ಯೂಸೆಕ್ ನೀರನ್ನ ನದಿಗೆ ಬಿಡಲಾಗಿದೆ.

ಈ ಹಿನ್ನೆಲೆಯಲ್ಲಿ ಕೆಆರ್ ಎಸ್ ನ ಬೃಂದಾವನಕ್ಕೂ ನೀರು ನುಗ್ಗಿದೆ.  ದೋಣಿವಿಹಾರ ಕೇಂದ್ರವೂ ಮುಳುಗಡೆಯಾಗಿದ್ದು, ದೋಣಿವಿಹಾರ. ಸಂಗೀತ ಕಾರಂಜಿ ಸ್ಥಗಿತವಾಗಿದೆ.

ಹಿಂದಿನ ಲೇಖನರಾಜ್ಯದಲ್ಲಿ ಮಂಕಿ ಫಾಕ್ಸ್‌ ಪ್ರಕರಣ ಕಂಡುಬಂದಿಲ್ಲ: ಸಚಿವ ಡಾ.ಕೆ.ಸುಧಾಕರ್‌
ಮುಂದಿನ ಲೇಖನವಿಶ್ವ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌: ತ್ರಿಪಲ್‌ ಜಂಪ್‌ ನಲ್ಲಿ ಬೆಳ್ಳಿ ಗೆದ್ದ ಸೆಲ್ವ ಪಿ. ತಿರುಮಾರನ್