ಹುಣಸಗಿ: ಪಟ್ಟಣದಲ್ಲಿ ನಕಲಿ ವೈದ್ಯ ಹಾಗೂ ಕ್ಲಿನಿಕ್ ಮೇಲೆ ತಾಲೂಕು ವೈದ್ಯಾಧಿಕಾರಿಗಳಿಂದ ಸೋಮವಾರ (ನ.11) ದಾಳಿ ಮಾಡಲಾಯಿತು.
ಸ್ಥಳೀಯರ ಖಚಿತ ಮಾಹಿತಿ ಮೇರೆಗೆ ತಾಲೂಕು ಆರೋಗ್ಯ ಅಧಿಕಾರಿ ಡಾ.ರಾಜಾ ವೆಂಕಟಪ್ಪ ನಾಯಕ ಅವರ ಅಧಿಕಾರಿಗಳ ತಂಡವು ಬಾಲಾಜಿ ಕ್ಲಿನಿಕ್ ಗೆ ಭೇಟಿ ನೀಡಿದಾಗ ನಕಲಿ ವೈದ್ಯ ಎಂದು ಗೊತ್ತಾಗಿದೆ.
ನಕಲಿ ಹಾವಳಿ ತಡೆಗಟ್ಟುವ ಹಿನ್ನೆಲೆಯಲ್ಲಿ ಕ್ಲಿನಿಕ್ ಸೀಲ್ ಮಾಡಲಾಗಿದೆ ಎಂದು ತಾಲೂಕು ಆರೋಗ್ಯ ಅಧಿಕಾರಿ ಡಾ.ರಾಜಾ ವೆಂಕಟಪ್ಪ ನಾಯಕ ತಿಳಿಸಿದ್ದಾರೆ.
ಈ ಸಂದರ್ಭ ತಾಲೂಕು ಚಿಕಿತ್ಸಾ ಮೇಲ್ವಿಚಾರಕ ಹಣಮಂತ, ಎಂಟಿಎಸ್ ನರಸಿಂಹ , ಶಾಂತಪ್ಪ ನಾಯಕ ಹಾಗೂ ಹುಸನಪ್ಪ ಸೇರಿದಂತೆ ಸ್ಥಳೀಯರು ಇದ್ದರು.
Saval TV on YouTube