Saval TV on YouTube
ಹುಣಸೂರು(Hunsur): ವಾಯುಭಾರ ಕುಸಿತದಿಂದ ಉಂಟಾಗಿರುವ ಹವಾಮಾನ ವೈಪರಿತ್ಯದಿಂದಾಗಿ ಹುಣಸೂರು ತಾಲೂಕಿನಾದ್ಯಂತ ಬೆಳಗ್ಗೆ ಭಾರೀ ಚಳಿ ಹಾಗೂ ಎಲ್ಲೆಡೆ ಮಂಜು ಮುಸುಕಿನ ವಾತಾವರಣವಿತ್ತು. ಮಾತ್ರವಲ್ಲದೇ ಮಳೆಯು ಸುರಿದಿದ್ದರಿಂದ ಜನರು ಹಾಗೂ ವಿದ್ಯಾರ್ಥಿಗಳು ಮನೆಯಿಂದ ಹೊರಬರಲು ಪರಿಪಾಟಲು ಪಡುವಂತಾಯಿತು.
ಬುಧವಾರ ಸಂಜೆಯಿಂದಲೇ ಜಿಟಿ-ಜಿಟಿ ಮಳೆ ಆರಂಭವಾಯಿತಾದರೂ ರಾತ್ರಿ ಮಳೆಗೆ ಬಿಡುವು ನೀಡಿದ್ದ ಮಳೆರಾಯ ಮುಂಜಾನೆ 4 ಗಂಟೆಯಿಂದ ಮತ್ತೆ ಮಳೆ ಆರಂಭವಾಯಿತು. ಮಳೆಯ ಜೊತೆಗೆ ಭಾರಿ ಮಂಜು ಬೀಳುತ್ತಿದ್ದರಿಂದ ತಾಲೂಕಿನಾದ್ಯಂತ ಬೆಳಗ್ಗೆ 7 ಗಂಟೆಯಾಗಿದ್ದರೂ ಕತ್ತಲು ಆವರಿಸಿತ್ತು.
ಅದರ ಜೊತೆಗೆ ಮೈ ಕೊರೆಯುವ ಚಳಿಯಿಂದಾಗಿ ಜನರ ದೈನಂದಿನ ಕಾರ್ಯಗಳಿಗೆ ತೆರಳಲು ಹಾಗೂ ವಿದ್ಯಾರ್ಥಿಗಳಿಗೆ ಶಾಲಾ-ಕಾಲೇಜುಗಳಿಗೆ ತೆರಳಲು ಪರದಾಡುವಂತಾಗಿದೆ.