ಹುಣಸೂರು: ಚಿರತೆ ದಾಳಿಗೆ ಒಂದು ಕುರಿ ಬಲಿಯಾಗಿದ್ದು, ಇನ್ನೊಂದು ಕುರಿಗೆ ಗಾಯವಾಗಿರುವ ಘಟನೆ ತಾಲೂಕಿನ ರಾಮಪಟ್ಟಣದ ಮದನ್ ಎಂಬವರ ಫಾರಂ ಹೌಸ್ ನಲ್ಲಿ ಸೋಮವಾರ ನಡೆದಿದೆ.
ಸೋಮವಾರ ರಾತ್ರಿ ಕೊಟ್ಟಿಗೆಗೆ ದಾಳಿ ಇಟ್ಟ ಚಿರತೆ ಒಂದು ಕುರಿಯನ್ನು ಹೊತ್ತೊಯ್ದು ಕೊಂದು ತಿಂದು ಹಾಕಿದ್ದು, ಇನ್ನೊಂದು ಕುರಿ ಗಾಯಗೊಂಡಿದೆ.
ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ರವಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಚಿರತೆ ಹೆಜ್ಜೆ ಕಾಣಿಸಿಕೊಂಡ ಹಿನ್ನೆಲೆ ಆ ಸ್ಥಳದಲ್ಲಿ ಬೋನ್ ಇರಿಸಿ ಸೆರೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಆರ್.ಎಫ್.ಓ.ನಂದಕುಮಾರ್ ತಿಳಿಸಿದರು.














