ಮನೆ ರಾಜ್ಯ ಹುಣಸೂರು: ಕೊಳವಿಗೆ ಗ್ರಾಮದ ಸುತ್ತಲು ಹುಲಿ ಸಂಚಾರ- ಆತಂಕಗೊಂಡ ಜನತೆ

ಹುಣಸೂರು: ಕೊಳವಿಗೆ ಗ್ರಾಮದ ಸುತ್ತಲು ಹುಲಿ ಸಂಚಾರ- ಆತಂಕಗೊಂಡ ಜನತೆ

0

ಹುಣಸೂರು: ತಾಲ್ಲೂಕಿನ ಹನಗೋಡು ಹೋಬಳಿಯ ಕೊಳವಿಗೆ ಗ್ರಾಮದ ಸುತ್ತಲು ಹುಲಿ ಕಾಣಿಸಿಕೊಂಡು ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸಿದೆ.

Join Our Whatsapp Group

ನಾಗರಹೊಳೆ ಅರಣ್ಯದಂಚಿನಲ್ಲಿರುವ ಕೊಳವಿಗೆ ಗ್ರಾಮದ ಮುಸುಕಿನ ಜೋಳದ  ಹೊಲದಲ್ಲಿ ಮಂಗಳವಾರ ರಾತ್ರಿ ಹುಲಿ ಹೆಜ್ಜೆ ಗುರುತುಗಳು ಮೂಡಿದ್ದು, ರೈತರ ಆತಂಕಕ್ಕೆ ಕಾರಣವಾಗಿದೆ.

ಅರಣ್ಯದಂಚಿನ ಹೊಲಗಳಿಗೆ ರೈತರು ಹೋಗಿ ಬರಲು ಸಾಧ್ಯವಾಗುತ್ತಿಲ್ಲ. ಅರಣ್ಯ ಇಲಾಖೆ ಗಮನಕ್ಕೆ ತರಲಾಗಿದೆ. ಇಲಾಖೆ ಅಧಿಕಾರಿಗಳು ಈವರೆಗೂ ಬಂದಿಲ್ಲ ಎಂದು ಸ್ಥಳೀಯರು ಹೇಳಿದರು.

ಕಳೆದ ವರ್ಷ ಕೊಳವಿಗೆ ಹಾಡಿಯಲ್ಲಿ ಹುಲಿ ದಾಳಿಗೆ ಗಿರಿಜನ ಯುವಕನೊಬ್ಬ ಮೃತಪಟ್ಟಿದ್ದ. ಇಲಾಖೆ ಕೊಂಬಿಂಗ್ ಕಾರ್ಯಾಚರಣೆ ನಡೆಸಿ ಹುಲಿ ಸೆರೆ ಹಿಡಿದು ಅರಣ್ಯಕ್ಕೆ ಬಿಡಬೇಕು  ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಹಿಂದಿನ ಲೇಖನದೆಹಲಿ ಫ್ಲೈಓವರ್ ಬಳಿ ಮಹಿಳೆಯ ದೇಹದ ಭಾಗ ಪತ್ತೆ: ತನಿಖೆ ಚುರುಕುಗೊಳಿಸಿದ ಪೊಲೀಸರು
ಮುಂದಿನ ಲೇಖನಯುವ ಬ್ರಿಗೇಡ್ ಕಾರ್ಯಕರ್ತನ ಕೊಲೆಯನ್ನು ಬಿಜೆಪಿ ರಾಜಕೀಯಕ್ಕೆ ಬಳಸಿಕೊಳ್ಳುತ್ತಿದೆ: ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್