ಮನೆ ಅಪರಾಧ ವಿಷ ಸೇವಿಸಿ ಗಂಡ-ಹೆಂಡತಿ ಆತ್ಮಹತ್ಯೆ

ವಿಷ ಸೇವಿಸಿ ಗಂಡ-ಹೆಂಡತಿ ಆತ್ಮಹತ್ಯೆ

0

ಪಾವಗಡ: ಗಂಡ-ಹೆಂಡತಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಪಟ್ಟಣದ ಹೊರವಲಯ ಚಳ್ಳಕೆರೆ ರಸ್ತೆ ಸಮೀಪದ ಜಮೀನುನೊಂದರಲ್ಲಿ ಡಿ. 20ರ ಶುಕ್ರವಾರ ಬೆಳಗ್ಗೆ ಸುಮಾರು 9 ಗಂಟೆಗೆ ನಡೆದಿದೆ.

Join Our Whatsapp Group

ಸಾಸಲಕುಂಟೆ ಸಮೀಪದ ಅಂಧ್ತಪ್ರದೇಶದ ಕುಂದುರ್ಪಿಮಂಡಲದ ವೆಂಕಟಮ್ಮಪಲ್ಲಿ ಗ್ರಾಮದ ಗೋವಿಂದರೆಡ್ಡಿ ಮತ್ತು ಜ್ಯೋತಿ ಮೃತಪಟ್ಟವರು.

ಗೋವಿಂದ ರೆಡ್ಡಿಗೆ ಎರಡು ಮದುವೆಯಾಗಿದ್ದು, ಜ್ಯೋತಿ ಮೊದಲನೇ ಹೆಂಡತಿ ಎಂದು ಹೇಳಲಾಗುತ್ತಿದೆ. ಈತನ ಎರಡನೇ ಹೆಂಡತಿ ಲಕ್ಷ್ಮೀದೇವಿ ಎಂದು ತಿಳಿದಿದ್ದು, ಸದ್ಯ ಈಕೆ ಬೆಂಗಳೂರಿನಲ್ಲಿ ವಾಸವಾಗಿದ್ದರು.

ಪಾವಗಡ ಪಟ್ಟಣದ ಲಾಡ್ಜ್ ವೊಂದರಲ್ಲಿ ಡಿ.19ರ ಗುರುವಾರ ರಾತ್ರಿ ಜ್ಯೋತಿ ಮತ್ತು ಗೋವಿಂದ ರೆಡ್ಡಿ ತಂಗಿದ್ದು, ಬೆಳಿಗ್ಗೆ ಸುಮಾರು 9 ಗಂಟೆಯ ಸಂದರ್ಭ ಪಟ್ಟಣದ ಹೊರವಲಯದ ಜಮೀನೊಂದರ ಬಂಡೆಯ ಮೇಲೆ ಮದ್ಯಕ್ಕೆ ವಿಷ ಮಿಶ್ರಣ ಮಾಡಿ ಕುಡಿದಿದ್ದು, ಜ್ಯೋತಿ 9. 30ರ ಸಂದರ್ಭದಲ್ಲಿ ಸಾವನ್ನಪ್ಪಿದ್ದರೆ, ಕೊನೆ ಉಸಿರಿನಲ್ಲಿದ್ದ ಗೋವಿಂದ ರೆಡ್ಡಿಯನ್ನು ಪಾವಗಡ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ನೀಡಲಾಗಿದೆ. ಆದರೂ ಚಿಕಿತ್ಸೆ ಫಲಕಾರಿಯಾಗದೆ ಸುಮಾರು 11ರ ಸುಮಾರಿಗೆ ಸಹ ಮೃತಪಟ್ಟಿದ್ದಾರೆ.

ಘಟನಾ ಸ್ಥಳಕ್ಕೆ ತುಮಕೂರು ಎ.ಎಸ್.ಪಿ. ಮರಿಯಪ್ಪ, ಮಧುಗಿರಿ ಡಿವೈಎಸ್ಪಿ ರಾಮಚಂದ್ರಪ್ಪ, ಪಾವಗಡ ಸಿಪಿಐ ಸುರೇಶ್, ಪಿಎಸ್ಐ ಗುರುನಾಥ, ಹೆಡ್ ಕಾನ್ಸ್ ಸ್ಟೇಬಲ್ ರಾಮಕೃಷ್ಣ ಭೇಟಿ ನೀಡಿ ಪರಿಶೀಲಿಸಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.