ಅಲಿಗಢ: ತನ್ನ ಪತಿಯನ್ನು ಕೊಂದ 36 ವರ್ಷದ ಮಹಿಳೆ ಮತ್ತು ಆಕೆಯ 22 ವರ್ಷದ ಅಪ್ರಾಪ್ತ ಪ್ರಿಯಕರನಿಗೆ ಆಕೆಯ 13 ವರ್ಷದ ಮಗಳ ಹೇಳಿಕೆಯನ್ನು ಆಧರಿಸಿ ಇಲ್ಲಿನ ಜಿಲ್ಲಾ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.
ಜುಲೈ 22,2021 ರಂದು ನಡೆದ ಧರಮ್‌ಪುರ ಗ್ರಾಮದ ನೀರಜ್ ಸಿಂಗ್ (40) ಹತ್ಯೆಗೆ ಸಂಬಂಧಿಸಿದಂತೆ ಜಿಲ್ಲಾ ನ್ಯಾಯಾಧೀಶರು ಈ ಶಿಕ್ಷೆ ವಿಧಿಸಿದ್ದಾರೆ.
ಪತ್ನಿಯ ಅಕ್ರಮ ಸಂಬಂಧವನ್ನು ವಿರೋಧಿಸಿದ್ದಕ್ಕಾಗಿ ಅವರ ಪತ್ನಿ ದೇವೇಂದ್ರಿ ದೇವಿ ಹಾಗೂ ಆಕೆಯ ಪ್ರಿಯಕರ ಆಶು ಕಾಲಿಯಾ, ಸಿಂಗ್ ಅವರನ್ನು ಹೊಡೆದು ಹತ್ಯೆ ಮಾಡಿದ್ದರು.
ಸಿಂಗ್ ಕಿರಿಯ ಸಹೋದರ ದೇವರಾಜ್ ಸಿಂಗ್ ಪೊಲೀಸ್ ದೂರು ನೀಡಿದ್ದರು. ತಾವು ಕೋಣೆಯಲ್ಲಿ ಮಲಗಿದ್ದಾಗ ದೇವೇಂದ್ರಿ ಕಿರುಚಾಟವನ್ನು ಕೇಳಿಸಿತ್ತು ಎಂದು ಅವರು ದೂರಿನಲ್ಲಿ ತಿಳಿಸಿದ್ದರು.
ಪೊಲೀಸರು ಸ್ಥಳಕ್ಕೆ ಧಾವಿಸಿ ವಿಚಾರಿಸಿದಾಗ ಯಾರೋ ಅಪರಿಚಿತರು ಭಾರವಾದ ವಸ್ತುವಿನಿಂದ ತನ್ನ ಗಂಡನ ಹತ್ಯೆ ಮಾಡಿ ಓಡಿದ್ದಾರೆ ಎಂದು ದೇವೇಂದ್ರಿ ಹೇಳಿದ್ದರು.ಆದರೆ ಆಕೆಯ ತಾಯಿ ಮತ್ತು ಆಶು ಕಾಲಿಯಾ ತನ್ನ ತಂದೆಯನ್ನು ಹೊಡೆದು ಸಾಯಿಸಿದ್ದಾರೆ ಎಂದು ದೇವೇಂದ್ರಿ ಅಪ್ರಾಪ್ತ ಮಗಳು ಪೊಲೀಸರಿಗೆ ತಿಳಿಸಿದ್ದರು.
ಆಕೆಯ ಹೇಳಿಕೆಯನ್ನೇ ಪ್ರಮುಖ ಸಾಕ್ಷಿಯಾಗಿ ಪರಿಗಣಿಸಿದ ನ್ಯಾಯಾಲಯ ತಪ್ಪಿತಸ್ಥರಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ.