ಮನೆ ಅಪರಾಧ ಅನೈತಿಕ ಸಂಬಂಧ ಶಂಕೆ: ಪತ್ನಿಯ ತಲೆ ಕತ್ತರಿಸಿದ ಪತಿ

ಅನೈತಿಕ ಸಂಬಂಧ ಶಂಕೆ: ಪತ್ನಿಯ ತಲೆ ಕತ್ತರಿಸಿದ ಪತಿ

0

ಮೈಸೂರು(Mysuru): ಜಿಲ್ಲೆಯ ವರುಣ ಹೋಬಳಿಯ ಚಟ್ಟನಹಳ್ಳಿ ಗ್ರಾಮದಲ್ಲಿ ವ್ಯಕ್ತಿಯೋರ್ವ ಪತ್ನಿ ಅನೈತಿಕ ಸಂಬಂಧ ಹೊಂದಿದ್ದಾಳೆ ಎಂಬ ಅನುಮಾನದಿಂದ ಅಕೆಯ ತಲೆಯನ್ನೇ ಕತ್ತರಿಸಿ ಭೀಕರವಾಗಿ ಹತ್ಯೆ ಮಾಡಿದ್ದಾನೆ.

ಪುಟ್ಟಮ್ಮ(40) ಕೊಲೆಯಾದ ಮಹಿಳೆ ಎಂದು ಗುರುತಿಸಲಾಗಿದೆ. ಪತಿ ದೇವರಾಜು ಹತ್ಯೆ ಮಾಡಿದ ಆರೋಪಿಯಾಗಿದ್ದಾರೆ.

ದೇವರಾಜುಗೆ ಪುಟ್ಟಮ್ಮ 2ನೇ ಹೆಂಡತಿ. ಮೊದಲ ಹೆಂಡತಿಯನ್ನು ಕೊಲೆ ಮಾಡಲು ಯತ್ನಿಸಿದ್ದು, ಅವರೇ ದೇವರಾಜನಿಂದ ದೂರವಾಗಿದ್ದಾರೆ ಎನ್ನಲಾಗಿದೆ.

ಬಳಿಕ 21 ವರ್ಷಗಳ ಹಿಂದೆ ಪುಟ್ಟಮ್ಮಳನ್ನು ಎರಡನೇ ಮದುವೆ ಆಗಿದ್ದ ದೇವರಾಜುಗೆ 20 ವರ್ಷದ ಮಗಳೂ ಕೂಡಾ ಇದ್ದಾರೆ. ಆದರೂ ಪತ್ನಿಯ ಶೀಲದ ಬಗ್ಗೆ ಶಂಕೆ ವ್ಯಕ್ತಪಡಿಸಿ  ದಿನನಿತ್ಯ ಜಗಳ ವಾಡುತ್ತಿದ್ದ ಎನ್ನಲಾಗಿದೆ.

ಸೋಮವಾರ ಮಗಳು ಕಾಲೇಜಿಗೆ ಹೋಗಿದ್ದ ಸಂದರ್ಭದಲ್ಲಿ ಪುಟ್ಟಮ್ಮನ ಜತೆ ಗಲಾಟೆ ಮಾಡಿ ಅವರ ತಲೆ ಕತ್ತರಿಸಿ ದೇವರಾಜು ನಾಪತ್ತೆ ಆಗಿದ್ದಾನೆ ಎಂಬ ಆರೋಪ ಕೇಳಿಬಂದಿದ್ದು, ಈ ಸಂಬಂಧ ಮಗಳು ಪವಿತ್ರ ವರುಣಾ ಪೋಲಿಸ್ ಠಾಣೆಯಲ್ಲಿ ತಂದೆಯ ವಿರುದ್ಧ ದೂರು ದಾಖಲಿಸಿದ್ದಾರೆ.

ಸದ್ಯ ಪೊಲೀಸರು ನಾಪತ್ತೆಯಾಗಿರುವ ಆರೋಪಿ ಬಂಧನಕ್ಕೆ ಬಲೆ ಬೀಸಿದ್ದಾರೆ.