ಆನೇಕಲ್(Anekal): ಪತ್ನಿಯ ಶೀಲ ಶಂಕಿಸಿ, ಚಾಕುವಿನಿಂದ ಆಕೆಯ ಕತ್ತನ್ನು ಸೀಳಿ ಕೊಲೆ ಮಾಡಿದ ಆರೋಪಿ, ನಂತರ ತಾನೇ ಪೊಲೀಸರಿಗೆ ಶರಣಾದ ಘಟನೆ ಆನೇಕಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ತಿಮ್ಮರಾಯಸ್ವಾಮಿ ದಿಣ್ಣೆಯ ಸರಸ್ವತಿ(35) ಕೊಲೆಯಾದ ಮಹಿಳೆ, ಮಲ್ಲೇಶ್ ಕೊಲೆ ಮಾಡಿದ ಪತಿ.
ಮಲ್ಲೇಶ್ ಲಾಂಡ್ರಿ ನಡೆಸುತ್ತಿದ್ದ. ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಇತ್ತೀಚೆಗೆ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದ. ಎರಡು ವರ್ಷಗಳ ಹಿಂದೆ ತನ್ನನ್ನು ಯಾರೋ ಕೊಲೆ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಪೊಲೀಸರಿಗೆ ಕಾಟ ಕೊಟ್ಟಿದ್ದ. ಆನೇಕಲ್ ಪೊಲೀಸರು ಎಲ್ಲಾ ಅನುಮಾನಾಸ್ಪದ ವ್ಯಕ್ತಿಗಳನ್ನು ಕರೆಸಿ ವಿಚಾರಣೆ ನಡೆಸಿದ್ದರು.
ಈದಾದ ನಂತರ ಪತ್ನಿ ತನ್ನ ತಮ್ಮನ ಜೊತೆ ಅನೈತಿಕ ಸಂಬಂಧ ಹೊಂದಿದ್ದಾಳೆ ಎಂದು ಶಂಕಿಸಿದ್ದ, ಈ ಬಗ್ಗೆ ಪತ್ನಿ ಸರಸ್ವತಿ ಎಷ್ಟೇ ಸಮಜಾಯಿಶಿ ನೀಡಿದ್ದರು ನಂಬದ ಆತ ಅಕೆಯ ಕತ್ತು ಸೀಳಿ ಕೊಂದಿದ್ದಾನೆ. ನಂತರ ಪೊಲೀಸರಿಗೆ ಶರಣಾಗಿದ್ದಾರೆ. ಶರಣಾದ ನಂತರ ಪೊಲೀಸರು ನನ್ನನ್ನು ನಕಲಿ ಎನ್ ಕೌಂಟರ್ ನಲ್ಲಿ ಕೊಲ್ಲಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದ. ಅದಾದ ನಂತರ ತನ್ನ ಸ್ನೇಹಿತ ಮತ್ತು ತನ್ನ ಪರ ವಕೀಲ ನ್ಯಾಯಾಲಯದ ಆವರಣದಲ್ಲಿ ನನ್ನನ್ನು ಕೊಲ್ಲಲು ಪ್ಲಾನ್ ಮಾಡಿದ್ದಾರೆ ಎಂದು ಅನುಮಾನ ವ್ಯಕ್ತ ಪಡಿಸಿ ನ್ಯಾಯಾಲಯಕ್ಕೆ ಕಳುಹಿಸುವಂತೆ ಮನವಿ ಮಾಡಿದ್ದ.
ಹಾಗಾಗಿ ಅವನಿಗೆ ಸರ್ಕಾರಿ ಪರ ವಕೀಲರನ್ನು ನೇಮಿಸಲಾಗಿತ್ತು. ಆತ ಸ್ಕೀಜೋ ಪ್ರೇಮಿಯಾದಿಂದ ಬಳಲುತ್ತಿದ್ದು, ಆತನಿಗೆ ಜೈಲಿನಲ್ಲಿ ಪರೀಕ್ಷೆಗೊಳಪಡಿಸಬಹುದು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಆನೇಕಲ್ ಪೊಲೀಸರು ಐಪಿಸಿ ಸೆಕ್ಷನ್ 302 ರ ಅಡಿಯಲ್ಲಿ ಕೊಲೆ ಪ್ರಕರಣ ದಾಖಲಿಸಿದ್ದಾರೆ.