ಭೋಪಾಲ್ : ಹೆಂಡತಿಯನ್ನು ಕೇಳದೆ ಅಡಿಗೆ ಮನೆಯಲ್ಲಿ ಟೊಮ್ಯಾಟೊ ಬಳಸಿದ್ದಕ್ಕೆ ಮಗಳನ್ನು ಕರೆದುಕೊಂಡು ಪತ್ನಿ ಮನೆ ಬಿಟ್ಟು ಹೋದ ಘಟನೆ ಮಧ್ಯಪ್ರದೇಶದ ಶಹದೋಲ್ ನಲ್ಲಿ ನಡೆದಿದೆ.
ಸಂಜೀವ್ ಬರ್ಮನ್ ಅವರ ಟಿಫಿನ್ ಸರ್ವಿಸ್ ನಡೆಸುತ್ತಿದ್ದು, ಅಡಿಗೆ ಮಾಡುವ ಸಂದರ್ಭದಲ್ಲಿ ಹೆಂಡತಿಯ ಪರ್ಮಿಷನ್ ಇಲ್ಲದೆ 2 ಟೊಮೇಟೊಗಳನ್ನು ಅಡಿಗೆಯಲ್ಲಿ ಬಳಸಿದ್ದಾರೆ, ಇದರಿಂದ ಕೋಪಗೊಂಡ ಹೆಂಡತಿ ಪತಿಯೊಂದಿಗೆ ಜಗಳಕ್ಕೆ ಇಳಿದಿದ್ದಾಳೆ.
ಇವರಿಬ್ಬರ ಜಗಳ ಅತಿರೇಕಕ್ಕೆ ಹೋಗಿದ್ದು, ಹೆಂಡತಿ ತನ್ನ ಮಗಳನ್ನು ಕರೆದುಕೊಂಡು ಮನೆ ಬಿಟ್ಟು ಹೋಗಿದ್ದಾಳೆ. ಬಳಿಕ ಸಂಜೀವ್ ತನ್ನ ಹೆಂಡತಿ ಮತ್ತು ಮಗಳನ್ನು ಹುಡುಕಲು ಹೊರಟಿದ್ದಾರೆ, ಆದರೆ ಎಲ್ಲಿಯೂ ಪತ್ತೆಯಾಗದ ಹಿನ್ನೆಲೆ ಸಂಜೀವ್ ಹತ್ತಿರದ ಪೊಲೀಸ್ ಠಾಣೆಯಲ್ಲಿ ಹೆಂಡತಿ ಮನೆ ಬಿಟ್ಟು ಹೋಗಿರುವ ಬಗ್ಗೆ ದೂರು ನೀಡಿದ್ದಾರೆ.