ಬೆಂಗಳೂರು: ಗಂಡ-ಹೆಂಡತಿ ಜಗಳದಲ್ಲಿ ಪತಿರಾಯ ತನ್ನ ಪತ್ನಿಯ ಬೆರಳನ್ನೇ ಕಚ್ಚಿತಿಂದ ಘಟನೆ ಬೆಂಗಳೂರಿನ ಕೊಣನಕುಂಟೆ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಈ ಕುರಿತು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಇನ್ನು ಪುಷ್ಪಾ ಮತ್ತು ವಿಜಯ್ ಕುಮಾರ್ಗೆ 23 ವರ್ಷಗಳ ಹಿಂದೆ ಮದುವೆಯಾಗಿತ್ತು. ಮದುವೆಯಾದ ಕೆಲ ವರ್ಷಗಳಿಂದ ಪತ್ನಿಗೆ ಮಾನಸಿಕ ಮತ್ತು ದೈಹಿಕವಾಗಿ ಹಿಂಸೆ ನೀಡುತ್ತಿದ್ದ ಎನ್ನಲಾಗಿದೆ.
ಈ ಹಿನ್ನಲೆ ಗಂಡನಿಂದ ಬೇಸತ್ತು ತನ್ನ ಮಗನ ಜೊತೆ ಬೇರೆಡೆ ಮನೆ ಮಾಡಿಕೊಂಡಿದ್ದರು. ಕಳೆದ ತಿಂಗಳ ಜುಲೈ 28ನೇ ತಾರೀಖು ಪತಿ ವಿಜಯಕುಮಾರ್ ಪತ್ನಿ ಇದ್ದ ಮನೆಗೆ ಹೋಗಿ ಜಗಳ ತೆಗೆದಿದ್ದ. ಈ ವೇಳೆ ಪತ್ನಿಯ ಎಡಗೈ ಬೆರಳನ್ನೇ ಕಚ್ಚಿ ಕಚ್ಚಿ ತಿಂದಿದ್ದಾನಂತೆ. ಅಲ್ಲದೇ ರೌಡಿಶೀಟರ್ಗಳನ್ನ ಬಿಟ್ಟು ಕೊಲೆ ಬೆದರಿಕೆ ಹಾಕಿರುವ ಆರೋಪದ ಮೇಲೆ ಪತ್ನಿ ಪುಷ್ಪ ಸದ್ಯ ಪತಿಯ ವಿರುದ್ಧ ಕೋಣನಕುಂಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.