ಮನೆ ಅಪರಾಧ ಹೈದರಾಬಾದ್: ಪತ್ನಿ, ಮಗನಿಂದ ವೈದ್ಯನ ಹತ್ಯೆ

ಹೈದರಾಬಾದ್: ಪತ್ನಿ, ಮಗನಿಂದ ವೈದ್ಯನ ಹತ್ಯೆ

0

ಹೈದರಾಬಾದ್: ಪತ್ನಿ ಹಾಗೂ ಮಗ ಸೇರಿಕೊಂಡು ವೈದ್ಯನನ್ನು ಕೊಲೆ ಮಾಡಿರುವ ಘಟನೆ ಹೈದರಾಬಾದ್​ ಬಂಡ್ಲಗುಡದಲ್ಲಿ ಘಟನೆ ನಡೆದಿದೆ.

Join Our Whatsapp Group

 ಡಾ. ಮಸಿಯುದ್ದೀನ್ ಎಂದು ಗುರುತಿಸಲ್ಪಟ್ಟ ವ್ಯಕ್ತಿ ಕ್ರಿಸ್ಟಕ್ ಕಾಲೊನಿಯಲ್ಲಿ ಪತ್ನಿ ಶಬಾನಾ ಹಾಗೂ ಮಗ ಸಮೀರ್ ಜತೆ ವಾಸಿಸುತ್ತಿದ್ದರು. ಸಿಯಾಸತ್.ಕಾಮ್ ಜೊತೆ ಮಾತನಾಡಿದ ಬಂಡ್ಲಗುಡ ಎಸ್‌ಎಚ್‌ಒ, ಮಂಗಳವಾರ ಸಂಜೆ ಈ ಅಪರಾಧ ನಡೆದಿದೆ ಎಂದು ಹೇಳಿದರು.

ಕುಟುಂಬ ಸದಸ್ಯರ ನಡುವೆ ನಡೆದ ವಾಗ್ವಾದದ ನಂತರ ಈ ಘಟನೆ ನಡೆದಿದೆ. ಶಬಾನಾ ಹಾಗೂ ಸಮೀರ್ ಮಸಿಯುದ್ದೀನ್ ಅವರ ಕೈ-ಕಾಲುಗಳನ್ನು ಕಟ್ಟಿಹಾಕಿ ಕತ್ತು ಸೀಳುವ ಮೂಲಕ ಕೊಲೆ ಮಾಡಿದ್ದಾರೆ.

ಕೊಲೆಯ ಬಗ್ಗೆ ಮಾಹಿತಿ ಪಡೆದ ಬಂಡ್ಲಗುಡ ಪೊಲೀಸರು ಸ್ಥಳಕ್ಕೆ ಧಾವಿಸಿ ತನಿಖೆ ಆರಂಭಿಸಿದರು. ಪ್ರಸ್ತುತ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.