ಮನೆ ಆಟೋ ಮೊಬೈಲ್ ಹ್ಯುಂಡೈ ಮೋಟಾರ್ಸ್‌- ಎಸ್‌ ಯುವಿ ಹ್ಯುಂಡೈ ಎಕ್ಸ್‌ ಟರ್‌ ಬಿಡುಗಡೆ

ಹ್ಯುಂಡೈ ಮೋಟಾರ್ಸ್‌- ಎಸ್‌ ಯುವಿ ಹ್ಯುಂಡೈ ಎಕ್ಸ್‌ ಟರ್‌ ಬಿಡುಗಡೆ

0

ಬೆಂಗಳೂರು: ಹ್ಯುಂಡೈ ಮೋಟಾರ್ಸ್‌ ಇಂಡಿಯಾ ಲಿಮಿಟೆಡ್‌ ಸೋಮವಾರ ಮಧ್ಯಮ ವರ್ಗದ ಜನರನ್ನು ಗಮನದಲ್ಲಿಟ್ಟುಕೊಂಡು ವಿನ್ಯಾಸ ಮಾಡಲಾದ ಹೊಸ ಎಸ್‌ ಯುವಿ ಹ್ಯುಂಡೈ ಎಕ್ಸ್‌ ಟರ್‌ ಮಾರುಕಟ್ಟೆಗೆ ಪರಿಚಯಿಸಿದೆ.

Join Our Whatsapp Group

ಹ್ಯುಂಡೈ ಎಕ್ಸ್‌ ಟರ್‌ ಮಾರುಕಟ್ಟೆಗೆ ಬಿಡುಗಡೆಗೊಳಿಸಿ ಮಾತನಾಡಿದ ಹ್ಯುಂಡೈ ಮೊಟಾರ್ಸ್‌ ಇಂಡಿಯಾ ಲಿಮಿಟೆಡ್‌ ಎಂಡಿ ಮತ್ತು ಸಿಇಒ ಉನ್ಸೋ ಕಿಮ್‌, ಎಸ್‌ ಯುವಿ ಹ್ಯುಂಡೈ ಎಕ್ಸ್‌ಟರ್‌ ಮಾರುಕಟ್ಟೆಗೆ ಪರಿಚಯಿಸುವ ಮೂಲಕ ಹೊಸ ಮೈಲಿಗಲ್ಲು ಸೃಷ್ಟಿಸಿದೆ. ಎಕ್ಸ್‌ಟರ್‌ ನವೀನ ವಿನ್ಯಾಸ, ಆಧುನಿಕ ತಂತ್ರಜ್ಞಾನ ಮತ್ತು ಅಸಾಧಾರಣ ಕಾರ್ಯಕ್ಷಮತೆಗೆ ಹುಂಡೈನ ಬದ್ಧತೆ ಹೊಂದಿದೆ. ಅತ್ಯಾಧುನಿಕ ತಂತ್ರಜ್ಞಾನ ಮತ್ತು ಸಾಟಿಯಿಲ್ಲದ ಸುರಕ್ಷತಾ ವೈಶಿಷ್ಟéಗಳೊಂದಿಗೆ ವೇಗವಾಗಿ ಅಭಿವೃದ್ಧಿ

ಹೊಂದುತ್ತಿರುವ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ. ಎಸ್‌ಯುವಿ ಮಧ್ಯಮ ವರ್ಗದವರ ಮನ ಗೆಲ್ಲುವ ವಿಶ್ವಾಸದಲ್ಲಿದೆ ಎಂದರು.

ಎಕ್ಸ್‌ ಶೋರೂಮ್‌ ನಲ್ಲಿ ಎಸ್‌ ಯುವಿ ಹ್ಯುಂಡೈ ಎಕ್ಸ್‌ಟರ್‌ 5,99,900 ರೂ.ನಿಂದ 9,31,990 ರೂ.ಇದೆ. ವೇರಿಯಂಟ್‌ ಎಕ್ಸ್‌ 5,90,900 ರೂ., ಎಸ್‌ 7,26,990 ರೂ., ಎಸ್‌ಎಕ್ಸ್‌ 7,99,990ರೂ., ಎಸ್‌ ಎಕ್ಸ್‌(ಒ)8,63,990 ರೂ., ಎಸ್‌ ಎಕ್ಸ್‌ (ಒ) ಕನೆಕ್ಟ್

9,31,990 ರೂ. ನಿಗದಿ ಪಡಿಸಿದೆ. ಮೂರು ವರ್ಷಗಳ ಅನಿಯಮಿತ ಕಿ.ಮಿ. ವಾರೆಂಟಿ ಲಭ್ಯವಿದೆ. ಈ ವಾರೆಂಟಿಯನ್ನು ಗ್ರಾಹಕರು 7ವರ್ಷಗಳ ವರೆಗೆ ವಿಸ್ತರಿಸಲು ಅವಕಾಶ ಕಲ್ಪಿಸಲಾಗಿದೆ.

ಗ್ರಾಹಕರಿಗೆ ಹ್ಯುಂಡೈ ಎಕ್ಸ್‌ಟರ್‌ ನಲ್ಲಿ 6 ಮೊನೊಟೋನ್‌ ಮತ್ತು 3ಡ್ಯುಯಲ್‌ ಟೋನ್‌ ಸೇರಿದಂತೆ ಒಟ್ಟು 9 ಬಣ್ಣ ಆಯ್ಕೆಗಳಿವೆ. ಡ್ಯುಯಲ್‌ ಕ್ಯಾಮೆರಾದೊಂದಿಗೆ ಡ್ಯಾಶ್‌ ಕ್ಯಾಮೆರಾ, 5.84ಸೆ.ಮೀ. ಡೀಸ್‌ಪ್ಲೇ, ಎಚ್‌ಡಿ ವಿಡಿಯೋ ಕ್ವಾಲಿಟಿ, ಆಪಲ್‌ ಕಾರ್‌ ಪ್ಲೇ ಮತ್ತು ಆಂಡ್ರಾಯ್ಡ್‌ ಆಟೋ ಜತೆಗೆ 8ಇಂಚಿನ ಟಚ್‌ ಸ್ಕ್ರೀನ್‌ ಇನ್ಫೋಟೈನ್ಮೇಂಟ್‌, ಪ್ರಯಾಣ ಎಲ್ಲ ಕ್ಷಣಗಳನ್ನು ಸೆರೆ ಹಿಡಿಯುವ ರೆಕಾರ್ಡಿಂಗ್‌ ಮೋಡ್‌, ಫೋನ್‌ ವೈರ್‌ಲೈಸ್‌ ಚಾರ್ಜರ್‌, ಆಟೋಮ್ಯಾಟಿಕ್‌ ಎಸಿ ಕಂಟ್ರೋಲ್‌ ರೈನ್‌ ಸೆನ್ಸರ್‌ ಮುಂಭಾಗದ ಹಾಗೂ ಹಿಂಭಾಗದ ವೈಪರ್‌ ಸೇರಿ ಸಾಕಷ್ಟು ವೈಶಿಷ್ಟ್ಯಗಳನ್ನು ಇದು ಹೊಂದಿದೆ.

ಸುರಕ್ಷತೆಗೆ ಸಂಬಂಧಿಸಿದಂತೆ ಹೆಚ್ಚಿನ ಆದ್ಯತೆ ನೀಡಿದ್ದು, ಮುಂಭಾಗದಲ್ಲಿ ಎಲೆಕ್ಟ್ರಾನಿಕ್‌ ಸ್ಟೆಬಿಲಿಟಿ ಕಂಟ್ರೋಲ್‌, ವೆಹಿಕಲ್‌ ಸ್ಟೆಬಿಲಿಟಿ ಮ್ಯಾನೇಜ್ಮೇಂಟ್, ಹಿಲ್‌ ಅಸಿಸ್ಟ್‌ , ಕಂಟ್ರೋಲ್‌ ಪಾರ್ಕಿಂಗ್‌ ಸೆನ್ಸರ್‌, ಟಿಪಿಎಂಎಸ್‌ (ಹೈಲೈನ್‌) ಹಾಗೂ ಆರು ಏರ್‌ ಬ್ಯಾಗ್‌ ಸೇರಿದಂತೆ ಸಾಕಷ್ಟಯ ವೈಶಿಷ್ಟ್ಯ ಗಳಿವೆ ಎಂದು ಪ್ರಕಟಣೆ ತಿಳಿಸಿದೆ.