ಮೈಸೂರು: ಸುಮಲತಾ ಅವರ ಮೇಲೆ ವಿಶ್ವಾಸ ಇದೆ. ನಾನು ಸುಮಲತಾ ಅವರ ಮನೆಗೆ ಹೋದಾಗ ಸಹೋದರನ ರೀತಿ ನೋಡಿದ್ದಾರೆ. ಇಂದು ಮಂಡ್ಯದಲ್ಲಿ ಅವರ ಹಿತೈಷಿಗಳ ಸಭೆ ನಡೆದು ತೀರ್ಮಾನಿಸಲಿದ್ದಾರೆ. ಸಭೆಯಲ್ಲಿ ಅಂತಿಮ ನಿರ್ಣಯ ಮಾಡಲಿದ್ದಾರೆ. ಅವರ ನಿರ್ಣಯವನ್ನು ಕುತೂಹಲದಿಂದ ಕಾಯುತ್ತಿದ್ದಾರೆ. ಜಿಲ್ಲೆಯ ಅಭಿವೃದ್ಧಿ ದೃಷ್ಠಿಯಿಂದ ಅವರು ನಿರ್ಧಾರ ಮಾಡುತ್ತಾರೆ. ಅವರ ಮನೆಗೆ ಹೋಗಿದ್ದ ವೇಳೆ ಅತ್ಯಂತ ಅಭಿಮಾನ, ವಿಶ್ವಾಸದಿಂದ ಬರಮಾಡಿಕೊಂಡರು. ಭಿನ್ನಾಭಿಪ್ರಾಯ ಏನೇ ಇದ್ದರೂ ಸಹೋದರನಂತೆ ಭಾವಿಸಿದ್ದರು. ಅವರು ನನ್ನನ್ನು ಬೆಂಬಲಿಸಬಹುದು. ನನಗೆ ಅವರ ಮೇಲೆ ವಿಶ್ವಾಸವಿದೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು.
ಮೈಸೂರಿನಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರ ಜೀವನದಲ್ಲಿ ಜಾ.ದಳ ಕಾರ್ಯಕರ್ತರು, ದೇವೇಗೌಡರ ಭಜನೆ ಮಾಡಿಕೊಂಡು ಬಂದವರು. ಅವರ ಭಜನಯ ವಾಸನೆ ದೂರ ಹೋಗಿಲ್ಲ. ಹೀಗಾಗಿ ನಾನು ಏನು ಮಾಡೋದಕ್ಕೆ ಆಗುತ್ತದ. ನಿನ್ನೆ ಅವರ ಹೇಳಿಕೆಗಳನ್ನು ಗಮನಿಸಿದ್ದೇನೆ. ಸಿಎಂ ಹುದ್ದೆಯ ಜತೆಗೆ ಜ್ಯೋತಿಷಿ ಆಗಿದ್ದಾರೆ. ಜ್ಯೋತಿಷ್ಯ ಹೇಳುವುದನ್ನೂ ಅವರು ಕಲಿತಿದ್ದಾರೆ ಎಂದರು.
ನಾನು ಮೈಸೂರಿನಲ್ಲಿ ಮೈತ್ರಿ ಧರ್ಮ ಪಾಲಿಸಿದ್ದೇನೆ. ನಾನು ಮೈತ್ರಿ ಧರ್ಮ ಪಾಲಿಸದಿದ್ದರೆ ಒಂದೂ ಸ್ಥಾನ ಗೆಲ್ಲುತ್ತಿರಲಿಲ್ಲ. ಬೆಂಗಳೂರು ಗ್ರಾಮಾಂತರದಲ್ಲಿ ನಾವು ಪ್ರಾಮಾಣಿಕ ಕೆಲಸ ಮಾಡಿದ್ದೇವೆ. ನಾವು ಕೆಲಸ ಮಾಡದಿದ್ದರೆ ಡಿ.ಕೆ.ಸುರೇಶ್ ಸೋಲುತ್ತಿದ್ದರು ಎನ್ನುವ ಮೂಲಕ ಹಾಸನದಲ್ಲಿ ಕಳೆದ ಬಾರಿ ಪ್ರಜ್ವಲ್ ಸೋಲುತ್ತಿದ್ದರು ಎಂಬ ಸಿದ್ದರಾಮಯ್ಯ ಹೇಳಿಕೆ ವಿಚಾರಕ್ಕೆ ಟಾಂಗ್ ಕೊಟ್ಟರು.
ಪ್ರತಾಪ್ ಸಿಂಹ ಟಿಕೆಟ್ ತಪ್ಪಿಸಿದ್ದು ದೇವೇಗೌಡರೆಂಬ ಸಚಿವ ವೆಂಕಟೇಶ್ ಅವರ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ವೆಂಕಟೇಶ್ ಅವರು ನಮ್ಮ ನೆಂಟರು ಬೇರೆ, ಹಳೇ ಸ್ನೇಹಿತರು. ಯಾರ್ಯಾರಿಗೆ ಟೋಪಿ ಹಾಕಿಹೋಗಿದ್ದರು. 2004ರಲ್ಲಿ ಮಂತ್ರಿ ಮಾಡಲಿಲ್ಲ ಅಂತ ಹೋಗಿದ್ದರು. ದುಡಿಮೆ ಮಾಡಿದ್ದರೆ ಬರೀ 8 ಜನ ಮಾತ್ರ ಯಾಕೆ ಹೋದ್ರು? 52 ಮಂದಿ ಹೋಗಬೇಕಿತ್ತು ಅಲ್ಲವೇ? ಮಾತೆತ್ತಿದರೆ ಪಕ್ಷದಿಂದ ಹೊರ ಹಾಕಿದರು ಅಂತಾರೆ. ಆದರೆ ಅವರಿಗೆ ಎಲ್ಲರೂ ಕೂಡ ತ್ಯಾಗ ಮಾಡಿದ್ದಾರೆ. ಅವರ ರಾಜಕಾರಣಕ್ಕಾಗಿ ಜೆಡಿಎಸ್ ಕೊಡುಗೆ ಅಪಾರವಾಗಿದೆ. ನಮ್ಮ ರಕ್ತದ ಕಣಕಣದಲ್ಲೂ ಕನ್ನಡ ಅಂತಾರಲ್ಲ. ಕಾವೇರಿ ವಿಚಾರದಲ್ಲಿ ಅವರ ಕೊಡುಗೆ ಏನು? ಕಾವೇರಿ ವಿಚರದಲ್ಲಿ ದೇವೇಗೌಡರು ರಾಜಕಾರಣ ಮಾಡುವಾಗ ಏನು ಮಾಡುತ್ತಿದ್ದರು ಎಂದರು.
ಸಿದ್ದರಾಮಯ್ಯಗೆ ಈಗ ಒಕ್ಕಲಿಗರ ಮೇಲೆ ಪ್ರೀತಿ ಬಂದಿದೆ. ಚುನಾವಣೆ ಬಳಿಕ ಕಾಂತರಾಜ ವರದಿ ಬಿಡುಗಡೆ ಮಾಡುತ್ತಾರೆ. ಈಗ ಮಾಡಿದರೆ ಕಾಂಗ್ರೆಸ್ ಸರ್ವನಾಶ ಆಗುತ್ತದೆ ಅಂತಾರೆ. ಅವರ ಕಣ್ಣಲ್ಲಿ ನೀರು ಬರುವುದು ಕೃತಕವಾದದ್ದು. ನಮ್ಮ ಕಣ್ಣಲ್ಲಿ ಬರುವುದು ಭಾವನಾತ್ಮಕ ಕಣ್ಣೀರು. ಹೃದಯದಿಂದ ಬರುವಂತಹ ಕಣ್ಣೀರು. ನಾನು ರಾಜಕೀಯದ ತೆವಲಿಗೆ ಮಾತನಾಡಲ್ಲ. ಸಿಎಂ ಚಾಮುಂಡೇಶ್ವರಿ ಕ್ಷೇತ್ರಕ್ಕೆ ಏನು ಕಡಿದು ಕಟ್ಟಿಹಾಕಿದ್ದಾರೆ. ನಾನು ಅವರಿಗೆ ಓಪನ್ ಚಾಲೆಂಜ್ ಮಾಡ್ತೀನಿ. ನಾವು ನೀಡಿರುವ ಕೊಡುಗೆ ಅವರ ಕೊಡುಗೆ ಬಗ್ಗೆ ಚರ್ಚೆ ಆಗಬೇಕು ಎಂದು ಹೇಳಿದರು.
ನನ್ನ ರಾಜಕಾರಣದ ಅವಧಿಯಲ್ಲಿ ನನ್ನ ಮಗ ಮೂಗು ತೂರಿಸಿರಲಿಲ್ಲ. ನನ್ನ ಮಗನನ್ನು ಆಶ್ರಯ ಕಮಿಟಿ ಸದಸ್ಯ ಮಾಡಿರಲಿಲ್ಲ. ಭೈರತಿ ಬಸವರಾಜ್, ಮುನಿರತ್ನ, ಸೋಮಶೇಖರ್. ಮೂರು ಮಂದಿ ಹೋಗಿದ್ದು ಯಾಕೆ? ಜಾರ್ಜ್ ಹಾಗು ಭೈರತಿ ನಡುವೆ ಜಗಳ ಆಯ್ತು. ಆ ವೇಳೆ ಮೂವರು ಯಾಕೆ ಹೋದರು. ನಮ್ಮವರು ಮೂವರು ಹೋಗಲು ಇವರ ಚಿತಾವಣೆ ಇದೆ. ಸಿದ್ದೌಷಧ ಇಟ್ಟುಕೊಂಡು ಚಿತಾವಣೆ ಮಾಡ್ತಾರೆ. ಅವರು ಮಾತನಾಡುವ ಮಾತೆಲ್ಲ ಬರೀ ಗರ್ವದ ಮಾತು ಎಂದು ಹೇಳಿದರು.
ನಾವೆಂದು ಅವರ ರೀತಿ ತೋಳು,ಭುಜ ತಟ್ಟಿ ಗರ್ವದ ಮಾತಾಡಿಲ್ಲ. ನಮ್ಮ ಜ್ಯೋತಿಷ್ಯ ಹೇಳುವುದು ಇರಲಿ. ಪಾರ್ಲಿಮೆಂಟ್ ಚುನಾವಣೆ ಬಳಿಕ ಕಾಂಗ್ರೆಸ್ ಉಳಿವು. ಮೂರು ಜನ ಉಪಮುಖ್ಯಮಂತ್ರಿಯನ್ನ ಕೇಳುತ್ತಾರೆ. ಸಿಎಂ ಪ್ರತಿದಿನ ಜಾತಿರಾಜಕಾರಣ ಮಾಡುತ್ತಾರೆ ಎಂದರು.