ಮನೆ ಸುದ್ದಿ ಜಾಲ ರಷ್ಯಾಗೆ ನಾನೇ ನಂಬರ್ 1 ಟಾರ್ಗೆಟ್: ಉಕ್ರೇನ್ ಅಧ್ಯಕ್ಷ

ರಷ್ಯಾಗೆ ನಾನೇ ನಂಬರ್ 1 ಟಾರ್ಗೆಟ್: ಉಕ್ರೇನ್ ಅಧ್ಯಕ್ಷ

0

ವಾಶಿಂಗ್ಟನ್: ರಷ್ಯಾದ ಪಾಲಿಗೆ ನಾನೇ ನಂಬರ್ 1 ಟಾರ್ಗೆಟ್ ಆಗಿದ್ದು, ನನ್ನ ಕುಟುಂಬ ಎರಡನೇ ಟಾರ್ಗೆಟ್ ಆಗಿದೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಆರೋಪಿಸಿದ್ದಾರೆ.

ಶುಕ್ರವಾರ ದೂರದರ್ಶನದಲ್ಲಿ ರಷ್ಯಾ ದಾಳಿಯ ಕುರಿತು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಮಾತನಾಡಿದ್ದು. ರಾಷ್ಟ್ರದ ಮುಖ್ಯಸ್ಥರನ್ನು ನಾಶಪಡಿಸುವ ಮೂಲಕ ಉಕ್ರೇನ್ ಅನ್ನು ರಾಜಕೀಯವಾಗಿ ನಾಶಮಾಡಲು ರಷ್ಯಾ ಬಯಸಿದೆ ಎಂದು ದೂಷಿಸಿದರು.

ಕೇಂದ್ರ ಸರ್ಕಾರಕ್ಕೆ ಕೆಲಸ ಮಾಡಲು ಅಗತ್ಯವಿರುವ ಎಲ್ಲರೊಂದಿಗೆ ಅವರು ಸರ್ಕಾರಿ ಕ್ವಾಟ್ರಸ್‌ನಲ್ಲಿ ಉಳಿದುಕೊಂಡಿದ್ದಾರೆ. ನಾನು ರಾಜಧಾನಿಯಲ್ಲಿ ಇರುತ್ತೇನೆ, ನಾನು ನನ್ನ ಜನರೊಂದಿಗೆ ಇರುತ್ತೇನೆ” ಎಂದು ಸ್ಪಷ್ಟಪಡಿಸಿದರು.

ನನ್ನ ಕುಟುಂಬವೂ ಉಕ್ರೇನ್‌ನಲ್ಲಿದೆ. ನನ್ನ ಮಕ್ಕಳೂ ಉಕ್ರೇನ್‌ನಲ್ಲಿದ್ದಾರೆ. ನನ್ನ ಕುಟುಂಬ ದೇಶದ್ರೋಹಿಗಳಲ್ಲ. ಅವರು ಉಕ್ರೇನ್ ಪ್ರಜೆಗಳು. ಆದರೆ ಅವರು ಈಗ ಎಲ್ಲಿದ್ದಾರೆ ಎಂದು ಹೇಳುವ ಹಕ್ಕು ನನಗಿಲ್ಲ,” ಎಂಬುದಾಗಿ ತಿಳಿಸಿದರು.

ಹಿಂದಿನ ಲೇಖನ41ನೇ ವಸಂತಕ್ಕೆ ಕಾಲಿಟ್ಟ ಬಾಲಿವುಡ್ ನಟ ಶಾಹಿದ್ ಕಪೂರ್​!
ಮುಂದಿನ ಲೇಖನಮೈಸೂರು: ತೋಟದ ಮನೆಯಲ್ಲಿ ವ್ಯಕ್ತಿಯ ಬರ್ಬರ ಕೊಲೆ