ಮನೆ ರಾಜ್ಯ ನಾನು ಎಬಿವಿಪಿ ಕಾರ್ಯಕ್ರಮದಲ್ಲಿ ಭಾಗವಹಿಸಿಲ್ಲ : ಜಿ.ಪರಮೇಶ್ವರ್‌

ನಾನು ಎಬಿವಿಪಿ ಕಾರ್ಯಕ್ರಮದಲ್ಲಿ ಭಾಗವಹಿಸಿಲ್ಲ : ಜಿ.ಪರಮೇಶ್ವರ್‌

0

ಬೆಂಗಳೂರು : ನಾನು ದಾರಿಯಲ್ಲಿ ಬರುತ್ತಿದ್ದಾಗ ರಾಣಿ ಅಬ್ಬಕ್ಕನ ಮೆರವಣಿಗೆ ನಡೆಯುತ್ತಿತ್ತು. ಪುಷ್ಪನಮನ ಸಲ್ಲಿಸಿ ಎಂದಾಗ ನಾನು ನಮನ ಸಲ್ಲಿಸಿದ್ದೇನೆಯೇ ಹೊರತು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ ಕಾರ್ಯಕ್ರಮದಲ್ಲಿ ಭಾಗಿಯಾಗಿಲ್ಲ ಎಂದು ಗೃಹ ಸಚಿವ ಪರಮೇಶ್ವರ್‌ ಹೇಳಿದ್ದಾರೆ.

ತಿಪಟೂರಿನ ಎಬಿವಿಪಿ ಕಾರ್ಯಕ್ರಮದಲ್ಲಿ ಭಾಗಿಯಾದ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ನಾನು ಎಬಿವಿಪಿ ಕಾರ್ಯಕ್ರಮದಲ್ಲಿ ಭಾಗವಹಿಸಿಲ್ಲ. ನನ್ನ ಕಾಂಗ್ರೆಸ್ ಬದ್ಧತೆ, ಸೈದ್ಧಾಂತಿಕ ನಿಲುವು ಯಾರೂ ಪ್ರಶ್ನೆ ಮಾಡುವಂತಿಲ್ಲ. ನಾನು ಏನು ಎನ್ನುವುದು ಇಡೀ ಕರ್ನಾಟಕ ಜನಕ್ಕೆ ಗೊತ್ತಿದೆ ಎಂದು ತಿಳಿಸಿದರು.

ನಾನು ಕಾಂಗ್ರೆಸ್ ಮನುಷ್ಯ, ಕಾಂಗ್ರೆಸ್‌ನಲ್ಲೇ ಇರುತ್ತೇನೆ. ಕಾಂಗ್ರೆಸ್ ಮನುಷ್ಯನಾಗಿಯೇ ಸಾಯುತ್ತೇನೆ. ತಿಪಟೂರು ಎಬಿವಿಪಿಯಿಂದ ಗಣೇಶ ಪಂಜಿನ ಮೆರವಣಿಗೆ ಮಂಗಳವಾರ ರಾತ್ರಿ ನಡೆದಿತ್ತು.

ಈ ವೇಳೆ ಅದೇ ರಸ್ತೆಯಲ್ಲಿ ತೆರಳುತ್ತಿದ್ದ ಗೃಹ ಸಚಿವ ಪರಮೇಶ್ವರ್‌ ಅವರು ರಾಣಿ ಅಬ್ಬಕ್ಕನ ಪುತ್ಥಳಿಗೆ ಪುಷ್ಪನಮನ ಸಲ್ಲಿಸಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು.