ಮನೆ ರಾಜ್ಯ ನನಗೆ ಮುಸ್ಲಿಂರ ಮತ ಬೇಡ: ಕೆ.ಎಸ್.ಈಶ್ವರಪ್ಪ

ನನಗೆ ಮುಸ್ಲಿಂರ ಮತ ಬೇಡ: ಕೆ.ಎಸ್.ಈಶ್ವರಪ್ಪ

0

ಶಿವಮೊಗ್ಗ (Shimoga): ನನಗೆ ಮುಸ್ಲಿಂರ ಮತ ಬೇಡ ನಾನು ಅವರನ್ನು ಕೇಳೋದೆ ಇಲ್ಲ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.

ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರ್‌ಎಸ್‌ಎಸ್‌ ಟೀಕಿಸಿದರೆ ಸ್ವರ್ಗಕ್ಕೆ ಹೋಗ್ತೀವಿ ಅ೦ದುಕೊ೦ಡಿದ್ದಾರೆ. ಮುಸ್ಲಿಂರ ವೋಟು ಬರುತ್ತದೆ. ಅಂದುಕೊಂಡಿದ್ದಾರೆ. ನೀವು ಮುಸಲ್ಮಾನರ ವೋಟು ತೆಗೆದುಕೊಳ್ಳಿ, ಬೇಡ ಅನ್ನೋದಿಲ್ಲ. ಆದರೆ ನನಗ೦ತೂ ಮುಸ್ಲಿಮರ ವೋಟು ಬೇಡ. ಈ ಹಿ೦ದೆಯೂ ನಾನು ಅವರ ವೋಟು ಕೇಳಿಲ್ಲ, ಕೇಳುವುದೂ ಇಲ್ಲ. ಆದರೂ ಮುಸ್ಲಿಂ ಸಮುದಾಯ ಇರುವ 60 ಬೂತ್‌ಗಳಲ್ಲಿ ನನಗೆ ಮೂರುವರೆ ಸಾವಿರ ವೋಟು ಬಂದಿದೆ ಎ೦ದಿದ್ದಾರೆ.

ಆರ್‌ಎಸ್‌ಎಸ್‌ ಬೈಯ್ಯದಿದ್ದರೆ ಕೆಲವರಿಗೆ ತಿಂದ ಅನ್ನ ಜೀರ್ಣವಾಗುವುದಿಲ್ಲ. ಮೊದಲು ಸಿದ್ದರಾಮಯ್ಯ ಆರ್‌ಎಸ್‌ಎಸ್‌ಗೆ ಬೈಯ್ಯುತ್ತಿದ್ದರು. ಈಗ ಕುಮಾರಸ್ವಾಮಿ ಅವರಿಗೂ ಆ ಚಾಳಿ ಬ೦ದಿದೆ. ಆರ್‌ಎಸ್‌ಎಸ್‌ ಟೀಕಿಸಿದರೆ. ಮುಸ್ಲಿಮರ ವೋಟು ಬರುತ್ತದೆ ಎನ್ನುವುದು ಅವರ ಭಾವನೆ ಎಂದು ಕುಟುಕಿದ್ದಾರೆ.

ಹಿಂದಿನ ಲೇಖನವಾಣಿ ವಿಲಾಸ, ಗಾಯಿತ್ರಿ ಜಲಾಶಯಕ್ಕೆ ಭೇಟಿ ನೀಡಿದ ಯದುವೀರ್‌, ತ್ರಿಷಿಕಾ ಕುಮಾರಿ
ಮುಂದಿನ ಲೇಖನಜುಲೈ 1 ರಿಂದ ಹೊಸ ಕಾರ್ಮಿಕ ಕಾಯ್ದೆ ಜಾರಿಗೆ