ರಾಮನಗರ: ಇಷ್ಟು ವರ್ಷ ಚನ್ನಪಟ್ಟಣ ನೆನಪಿರಲಿಲ್ಲವಾ ಎಂದು ಪ್ರಶ್ನಿಸಿದ್ದ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿಗೆ ಟಾಂಗ್ ಕೊಟ್ಟಿರುವ ಡಿಸಿಎಂ ಡಿಕೆ ಶಿವಕುಮಾರ್, ಚನ್ನಪಟ್ಟಣಕ್ಕೆ ರಾಜಕೀಯ ಮಾಡಲು ಬಂದಿಲ್ಲ. ಅಭಿವೃದ್ಧಿ ಅಂದ್ರೆ ಏನು ಅಂತಾ ತೋರಿಸಲು ಬಂದಿದ್ದೇನೆ ಎಂದು ತಿರುಗೇಟು ನೀಡಿದ್ದಾರೆ.
ದೇಶಾದ್ಯಂತ 78ನೇ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮ ಹಿನ್ನೆಲೆಯಲ್ಲಿ ಚನ್ನಪಟ್ಟಣದಲ್ಲಿ ಧ್ವಜಾರೋಹಣ ನೆರವೇರಿಸಿ ಡಿಸಿಎಂ ಡಿಕೆ ಶಿವಕುಮಾರ್ ಮಾತನಾಡಿದರು. ಇದೇ ವೇಳೆ ಹಿಂದಿನ ಶಾಸಕರು ಇಲ್ಲಿಗೆ ಬಂದಿದ್ರೋ ಬಂದಿಲ್ವೋ ಎಂದು ಪ್ರಶ್ನಿಸುವ ಮೂಲಕ ಹೆಚ್.ಡಿಕೆ ಕಾಲೆಳೆದರು.
ಚನ್ನಪಟ್ಟಣ ಅಭಿವೃದ್ದಿಗೆ ಬಂದಿದ್ದೇನೆ. ಚನ್ನಪಟ್ಟಣ ಅಭಿವೃದ್ಧಿಗೆ ಸರ್ಕಾರ ಬದ‍್ಧವಾಗಿದೆ. ರಾಮನಗರ ಜಿಲ್ಲೆಯಲ್ಲಿ ಹುಟ್ಟಿದ್ದೇವೆ. ಅಭಿವೃದ್ಧಿ ಕೆಲಸ ಮಾಡಬೇಕಿದೆ ರಾಮನಗರಕ್ಕೆ 150 ಕೋಟಿ ನೀಡಲಾಗಿದೆ. ಅನುದಾನದ ಬಗ್ಗೆ ನಿನ್ನೆ ಸಿಎಂ ಆದೇಶವಾಗಿದೆ ಎಂದು ಡಿಕೆ ಶಿವಕುಮಾರ್ ತಿಳಿಸಿದರು.
Saval TV on YouTube