ಬೆಂಗಳೂರು : ನನ್ನನ್ನು ಯಾರು ದೆಹಲಿಗೆ ಬರುವಂತೆ ಕರೆದಿಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಡಿಕೆಶಿ, ನಾಳೆ ಇಂದಿರಾಗಾಂಧಿ ಅವರು ಆರಂಭಿಸಿದ ಅಂಗನವಾಡಿ ಯೋಜನೆಗಳಿಗೆ 50 ವರ್ಷ ತುಂಬಲಿದೆ. ಈ ಕಾರ್ಯಕ್ರಮದಲ್ಲಿ ನಾನು ಭಾಗಿಯಾಗುತ್ತೇನೆ. ಬೆಂಗಳೂರಿನಲ್ಲಿ ಇರಲಿದ್ದೇನೆ ಎಂದರು.
ಇಂದು ನಾನು ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಲು ನಾನು ಮುಂಬೈಗೆ ಹೋಗುತ್ತೇನೆ. ಇಂದು ಸಂಜೆ ನಾನು ಹೋಗಿ ರಾತ್ರಿಯೇ ಮರಳುತ್ತೇನೆ ಎಂದು ತಿಳಿಸಿದರು.
ಶನಿವಾರ ಡಿಕೆ ಶಿವಕುಮಾರ್ ಹೈಕಮಾಂಡ್ ಭೇಟಿ ಸಂಬಂಧ ದೆಹಲಿಗೆ ಹೋಗಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಸಿದ್ದರಾಮಯ್ಯನವರನ್ನು ಹೈಕಮಾಂಡ್ ಕರೆದಿದ್ದು ಇಬ್ಬರ ಜೊತೆ ಮಾತುಕತೆ ನಡೆಸಲಿದ್ದಾರೆ.















