ಮನೆ ಸುದ್ದಿ ಜಾಲ ಸಂಪುಟ ವಿಸ್ತರಣೆ ವೇಳೆ ನನಗೆ ಸಚಿವ ಸ್ಥಾನ ಸಿಗಲಿದೆ – ನಾರಾಯಣಸ್ವಾಮಿ

ಸಂಪುಟ ವಿಸ್ತರಣೆ ವೇಳೆ ನನಗೆ ಸಚಿವ ಸ್ಥಾನ ಸಿಗಲಿದೆ – ನಾರಾಯಣಸ್ವಾಮಿ

0

ಬೆಂಗಳೂರು : ಈ ಬಾರಿ ಸಚಿವ ಸಂಪುಟ ವಿಸ್ತರಣೆ ಆದಾಗ ನನಗೆ ಸಚಿವ ಸ್ಥಾನ ಸಿಗುವ ವಿಶ್ವಾಸ ಇದೆ ಎಂದು ಬಂಗಾರಪೇಟೆ ಕಾಂಗ್ರೆಸ್ ಶಾಸಕ ನಾರಾಯಣಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ವಿಧಾನಸೌಧದಲ್ಲಿ ಮಾತನಾಡಿದ ಅವರು, ನವೆಂಬರ್‌ಗೆ ಸಂಪುಟ ವಿಸ್ತರಣೆ ಆಗಬಹುದು. ಬಿಹಾರ ಚುನಾವಣೆ ಆದ ಮೇಲೆ ವಿಸ್ತರಣೆ ಆಗಬಹುದು. 2.5 ವರ್ಷ ಆದ ಮೇಲೆ ಮಂತ್ರಿ ಕೊಡ್ತೀವಿ ಅಂತ ಯಾರಿಗೆ ಹೈಕಮಾಂಡ್ ಮಾತು ಕೊಟ್ಟಿದ್ದರೋ ಅವರಿಗೆ ಸಚಿವ ಸ್ಥಾನ ಕೊಡಬೇಕು.

ದಲಿತ ಬಲಗೈ ಸಮುದಾಯ ಕರ್ನಾಟಕದಲ್ಲಿ ಜಾಸ್ತಿ ಜನ ಇದ್ದಾರೆ. ಚನ್ನಯ್ಯ ನಂತರ ಕೋಲಾರ ಸೇರಿ ಮೂರು ಜಿಲ್ಲೆಗಳಲ್ಲಿ ಬಲಗೈ ಸಮುದಾಯಕ್ಕೆ ಅನೇಕ ವರ್ಷಗಳಿಂದ ಮಂತ್ರಿ ಸ್ಥಾನ ಕೊಟ್ಟಿಲ್ಲ.ಹೈಕಮಾಂಡ್ ಮೇಲೆ ವಿಶ್ವಾಸ ನನಗೆ ಇದೆ. ಈ ಬಾರಿ ಮಂತ್ರಿ ಸ್ಥಾನ ಸಿಗುವ ವಿಶ್ವಾಸ ಇದೆ ಎಂದರು.

ನಮ್ಮ ಜಿಲ್ಲೆಯಲ್ಲಿ ನಾನು ಸೀನಿಯರ್. ಹೆಚ್ಚು ಬಾರಿ ಗೆದ್ದಿರುವುದರಿಂದ ಪಕ್ಷ ಈ ಬಾರಿ ನನ್ನನ್ನು ಮಂತ್ರಿ ಮಾಡಬೇಕು ಎಂದು ಮನವಿ ಮಾಡುತ್ತೇನೆ. ರೂಪಕಲಾ ಅವರಿಗೆ ಸಚಿವ ಸ್ಥಾನ ಕೊಡುವುದು ಹೈಕಮಾಂಡ್‌ಗೆ ಬಿಟ್ಟಿದ್ದು. ನಾನು ಹಿರಿಯ ನನಗೆ ಸಚಿವ ಸ್ಥಾನ ಸಿಗೋ ವಿಶ್ವಾಸ ಇದೆ ಎಂದರು.