ಮನೆ ಕ್ರೀಡೆ ಟಿ20 ವಿಶ್ವಕಪ್’ಗೆ 10 ಸ್ಥಳಗಳನ್ನು ಅಂತಿಮಗೊಳಿಸಿದ ಐಸಿಸಿ

ಟಿ20 ವಿಶ್ವಕಪ್’ಗೆ 10 ಸ್ಥಳಗಳನ್ನು ಅಂತಿಮಗೊಳಿಸಿದ ಐಸಿಸಿ

0

ವೆಸ್ಟ್ ಇಂಡೀಸ್ ಮತ್ತು ಯುಎಸ್ಎಯ ಜಂಟಿ ಆತಿಥ್ಯದಲ್ಲಿ ನಡೆಯಲ್ಲಿರುವ 2024 ರ ಟಿ20 ವಿಶ್ವಕಪ್ ಮುಂದಿನ ವರ್ಷದ ಜೂನ್ 4 ರಿಂದ ಆರಂಭವಾಗಲಿದ್ದು, ಜೂನ್ 30 ರಂದು ಫೈನಲ್ ಪಂದ್ಯ ನಡೆಯಲಿದೆ.

ಇದೀಗ ಈ ವಿಶ್ವಕಪ್​​ ನ ಬಗ್ಗೆ ಮಹತ್ವದ ನಿರ್ಧಾರ ಕೈಗೊಂಡಿರುವ ಐಸಿಸಿ, ಈ ಚುಟುಕು ವಿಶ್ವ ಸಮರ ಯಾವ್ಯಾವ ಸ್ಥಳಗಳಲ್ಲಿ ನಡೆಯಲ್ಲಿದೆ ಎಂಬ ಮಾಹಿತಿಯನ್ನು ಹಂಚಿಕೊಂಡಿದೆ.

ಐಸಿಸಿ ಬಿಡುಗಡೆ ಮಾಡಿರುವ ಅಧಿಕೃತ ಹೇಳಿಕೆಯ ಪ್ರಮುಖರ ಮುಂದಿನ ವರ್ಷ ನಡೆಯಲ್ಲಿರುವ ಟಿ20 ವಿಶ್ವಕಪ್ ಅನ್ನು 10 ಸ್ಥಳಗಳಲ್ಲಿ ಆಡಿಸಲು ನಿರ್ಧರಿಸಲಾಗಿದೆ. ಇದರಲ್ಲಿ 7 ಸ್ಥಳಗಳು ವೆಸ್ಟ್ ಇಂಡೀಸ್​ ಗೆ ಸೇರಿದ್ದರೆ, ಇನ್ನುಳಿದ 3 ಸ್ಥಳಗಳು ಅಮೆರಿಕಾಕ್ಕೆ ಸೇರಿವೆ.

ಐಸಿಸಿ ಬಿಡುಗಡೆ ಮಾಡಿರುವ ಮಾಹಿತಿ ಪ್ರಕಾರ, ಆಂಟಿಗುವಾ ಮತ್ತು ಬಾರ್ಬುಡಾ, ಬಾರ್ಬಡೋಸ್, ಡೊಮಿನಿಕಾ, ಗಯಾನಾ, ಸೇಂಟ್ ಲೂಸಿಯಾ, ಟ್ರಿನಿಡಾಡ್ ಮತ್ತು ಟೊಬಾಗೊ ಮತ್ತು ಸೇಂಟ್ ವಿನ್ಸೆಂಟ್ ಮತ್ತು ಗ್ರೆನಡೈನ್ಸ್ ಕೆರಿಬಿಯನ್ ರಾಷ್ಟ್ರಗಳಿಂದ ಆಯ್ಕೆಯಾದ ಏಳು ಸ್ಥಳಗಳಾಗಿದ್ದರೆ, ಡಲ್ಲಾಸ್‌ ನ ಗ್ರ್ಯಾಂಡ್ ಪ್ರೈರೀ, ಫ್ಲೋರಿಡಾದ ಬ್ರೋವರ್ಡ್ ಕೌಂಟಿ ಮತ್ತು ನ್ಯೂಯಾರ್ಕ್‌ನ ನಸ್ಸೌ ಕೌಂಟಿ ಯುಎಸ್​ಎ ಇಂದ ಆಯ್ಕೆಯಾಗಿರುವ ಮೂರು ಸ್ಥಳಗಳಾಗಿವೆ.

20 ತಂಡಗಳು 4 ಗುಂಪುಗಳು ಮತ್ತು 1 ಟ್ರೋಫಿ

ಮುಂಬರುವ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಒಟ್ಟು 20 ತಂಡಗಳು ಭಾಗವಹಿಸಲಿವೆ. ಈ 20 ತಂಡಗಳನ್ನು ತಲಾ 5 ತಂಡಗಳ 4 ಗುಂಪುಗಳಾಗಿ ವಿಂಗಡಿಸಲಾಗಿದೆ. ಎಲ್ಲಾ ನಾಲ್ಕು ಗುಂಪುಗಳಿಂದ ಅಗ್ರ 2 ತಂಡಗಳು ಸೂಪರ್ 8 ಗೆ ಅರ್ಹತೆ ಪಡೆಯುತ್ತವೆ. ಸೂಪರ್ 8 ಸುತ್ತಿಗೆ 4 ತಂಡಗಳನ್ನು ತಲಾ 4ರಂತೆ 2 ಗುಂಪುಗಳಾಗಿ ವಿಂಗಡಿಸಲಾಗುತ್ತದೆ. ಎರಡೂ ಗುಂಪಿನ ಅಗ್ರ 2 ತಂಡಗಳು ಸೆಮಿಫೈನಲ್‌ ಗೆ ಅರ್ಹತೆ ಪಡೆಯಲಿವೆ.

 ವಿಶೇಷವೆಂದರೆ ಈ ಟೂರ್ನಿಯಲ್ಲಿ ನ್ಯೂಯಾರ್ಕ್​ ನಿಂದ ಅನತಿ ದೂರದಲ್ಲಿರುವ ಐಸೆನ್ ಹೋವರ್ ಪಾರ್ಕ್ ಸ್ಟೇಡಿಯಂನಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ವಿಶ್ವಕಪ್ ಪಂದ್ಯ ನಡೆಯುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.