ನ್ಯೂಜಿಲೆಂಡ್‌ನ ಕೇನ್ ವಿಲಿಯಮ್ಸನ್ ಅವರನ್ನು 2021ರ ಐಸಿಸಿ ಟೆಸ್ಟ್ ತಂಡದ ನಾಯಕರಾಗಿ ಹೆಸರಿಸಲಾಗಿದೆ
ಐಸಿಸಿ ಪುರುಷರ ‘ವರ್ಷದ ಟೆಸ್ಟ್ ತಂಡದಲ್ಲಿ’ ರೋಹಿತ್ ಶರ್ಮ ಆರಂಭಿಕ ಬ್ಯಾಟರ್ ಆಗಿ, ರಿಷಭ್ ಪಂತ್ (Rishabh Pant) ವಿಕೆಟ್ ಕೀಪರ್ ಆಗಿ ಹಾಗೂ ಆರ್. ಅಶ್ವಿನ್ ಏಕೈಕ ವಿಶೇಷ ಸ್ಪಿನ್ನರ್ ಆಗಿ ಆಯ್ಕೆಯಾಗಿದ್ದಾರೆ ಆದರೆ ಏಕದಿನ ಇಲೆವೆನ್ ತಂಡದಲ್ಲಿ ಯಾವುದೇ ಭಾರತೀಯ ಆಟಗಾರನ ಹೆಸರನ್ನು ಒಳಗೊಂಡಿಲ್ಲ.
ಯುಎಇಯಲ್ಲಿ ನಡೆದ ವಿಶ್ವಕಪ್ ಅಭಿಯಾನದ ಕಳಪೆ ಪ್ರದರ್ಶನದ ಕಾರಣದಿಂದ ಐಸಿಸಿ ಪುರುಷರ ವರ್ಷದ ಟಿ 20 ತಂಡವನ್ನು ಪ್ರತಿನಿಧಿಸದೇ ಇದ್ದ ಕಾರಣ ಬರೀ 6 ಪಂದ್ಯಗಳನ್ನು ಆಡಲು ತಂಡವು ಸಫಲವಾಗಿದೆ. ಹೀಗಾಗಿ ಅಂತರರಾಷ್ಟ್ರೀಯ ಕ್ರಿಕೆಟ್ ಸಮಿತಿಯ (ಒನ್ ಡೇ ಇಂಟರ್ನ್ಯಾಶನಲ್) ನಲ್ಲಿ ಆಟಗಾರರು ಭಾಗವಹಿಸದೇ ಇರುವುದು ಆಶ್ಚರ್ಯದ ಸಂಗತಿ ಏನಲ್ಲ. ಇನ್ನು, ಈ ಪಟ್ಟಿಯಲ್ಲಿ ಬಾಲಂಗೋಚಿ ಐರ್ಲೆಂಡ್ನ ಇಬ್ಬರು ಆಟಗಾರರು ಕಾಣಿಸಿಕೊಂಡಿದ್ದಾರೆ.
ಕೇನ್ ವಿಲಿಯಮ್ಸನ್ 2021ರ ಐಸಿಸಿ ಟೆಸ್ಟ್ ತಂಡದ ನಾಯಕ:
ಟೆಸ್ಟ್ ಮ್ಯಾಚ್‌ಗಳಲ್ಲಿ ಭಾರತ ನಂಬರ್ ಒನ್ ಎಂದೆನಿಸಿದೆ. ಆದರೂ ಆಟದ ಸುದೀರ್ಘ ಸ್ವರೂಪಕ್ಕಾಗಿ ವರ್ಷದ ಅತ್ಯುತ್ತಮ ತಂಡದಲ್ಲಿ ಮೂರು ಪ್ರತಿನಿಧಿಗಳನ್ನು ಹೊಂದಿದ್ದು, ನ್ಯೂಜಿಲೆಂಡ್‌ನ ಕೇನ್ ವಿಲಿಯಮ್ಸನ್ ಅವರನ್ನು 2021ರ ಐಸಿಸಿ ಟೆಸ್ಟ್ ತಂಡದ ನಾಯಕರಾಗಿ ಹೆಸರಿಸಲಾಗಿದೆ. ವಿಲಿಯಮ್ಸನ್ ನೇತೃತ್ವದಲ್ಲಿ, ನ್ಯೂಜಿಲೆಂಡ್ ಕಳೆದ ವರ್ಷ ಭಾರತವನ್ನು ಸೋಲಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಗೆದ್ದಿತ್ತು. ಮೂವರು ಭಾರತೀಯರನ್ನು ಹೊರತುಪಡಿಸಿ, ತಂಡದಲ್ಲಿ ಇಬ್ಬರು ನ್ಯೂಜಿಲೆಂಡ್ ಆಟಗಾರರು, ಮೂವರು ಪಾಕಿಸ್ತಾನದ ಆಟಗಾರರು, ಒಬ್ಬರು ಆಸ್ಟ್ರೇಲಿಯಾ, ಒಬ್ಬರು ಶ್ರೀಲಂಕಾ ಮತ್ತು ಇಂಗ್ಲೆಂಡ್‌ನ ಒಬ್ಬ ಆಟಗಾರ ಇದ್ದಾರೆ.
ಒಟ್ಟಾರೆಯಾಗಿ, ಭಾರತವು 2021ರಲ್ಲಿ 14 ಟೆಸ್ಟ್ ಪಂದ್ಯಗಳನ್ನು ಆಡಿದೆ ಮತ್ತು ಅವುಗಳಲ್ಲಿ ಎಂಟನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ. ನ್ಯೂಜಿಲೆಂಡ್ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (WTC) ಫೈನಲ್‌ನಲ್ಲಿ ಹೀನಾಯವಾಗಿ ಸೋತಿರುವುದು ಸೇರಿದಂತೆ ಕಳೆದ ವರ್ಷ ತಂಡವು 3 ಟೆಸ್ಟ್‌ಗಳನ್ನು ಕಳೆದುಕೊಂಡಿತು.
ಮೂವರು ಆಟಗಾರರ ಪ್ರದರ್ಶನ ಹೇಗಿತ್ತು?
ವಿರಾಟ್ ಕೊಹ್ಲಿಯ ನಂತರ ನಾಯಕರಾಗಿ ಆಯ್ಕೆಯಾದ ರೋಹಿತ್ ಶರ್ಮ, ಎರಡು ಶತಕಗಳೊಂದಿಗೆ 47.68 ಸರಾಸರಿಯಲ್ಲಿ 906 ರನ್ ಗಳಿಸಿದರು. ಇಂಗ್ಲೆಂಡ್ ವಿರುದ್ಧ ರೋಹಿತ್ ಅವರು ಸಿಡಿಸಿರುವ ಶತಕಗಳು ಅವಿಸ್ಮರಣೀಯ ಎಂದೆನಿಸಿದವು. ಎಲ್ಲಾ ಮೂರು ಆಟದ ವೈಖರಿಗಳಲ್ಲೂ ಭಾರತದ ಮೊದಲ ಆಯ್ಕೆಯ ವಿಕೆಟ್ ಕೀಪರ್ ಎಂದೆನಿಸಿರುವ ರಿಷಭ್ ಪಂತ್ ಅಹಮದಾಬಾದ್‌ನಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಪಂದ್ಯದಲ್ಲಿ ಸ್ಮರಣೀಯ ಶತಕದೊಂದಿಗೆ 12 ಪಂದ್ಯಗಳಲ್ಲಿ 39.36 ಸರಾಸರಿಯಲ್ಲಿ 748 ರನ್ ಗಳಿಸುವಲ್ಲಿ ಯಶಸ್ವಿಯಾದರು.
ಅನುಭವಿ ಆಟಗಾರ ಅಶ್ವಿನ್ 9 ಪಂದ್ಯಗಳಲ್ಲಿ 16.64 ಸರಾಸರಿಯಲ್ಲಿ 54 ವಿಕೆಟ್‌ಗಳನ್ನು ತಮ್ಮದಾಗಿಸಿಕೊಳ್ಳುವಲ್ಲಿ ಸಫಲರಾದರು. ಹೀಗೆ ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ಅತಿ ದೊಡ್ಡ ಪ್ರಭಾವ ಬೀರಿದ ಆಟಗಾರ ಎಂದೆನಿಸಿದರು.
ಭಾರತದ ಆಟಗಾರರಲ್ಲದೆ ತಂಡದಲ್ಲಿ ಆಯ್ಕೆಯಾದ ಇನ್ನಿತರ ಆಟಗಾರರು:
ಭಾರತದ ಮೂವರು ಆಟಗಾರರು ಹಾಗೂ ವಿಲಿಯಮ್ಸನ್ ಅಲ್ಲದೆ, ಐಸಿಸಿ ಟೆಸ್ಟ್ ತಂಡವು ಶ್ರೀಲಂಕಾದ ದಿಮುತ್ ಕರುಣಾರತ್ನ, ಆಸ್ಪ್ರೇಲಿಯಾದ ಮಾರ್ನಸ್ ಲ್ಯಾಬುಸ್ಚಾಗ್ನೆ, ಇಂಗ್ಲೆಂಡ್ ತಂಡದ ನಾಯಕ ಜೋ ರೂಟ್, ನ್ಯೂಜಿಲೆಂಡ್‌ನ ಕೈಲ್ ಜೇಮಿಸನ್, ಮೂವರು ಪಾಕಿಸ್ತಾನದ ಆಟಗಾರರಾದ ಫವಾದ್ ಆಲಂ, ಹಸನ್ ಅಲಿ ಮತ್ತು ಶಾಹೀನ್ ಅಫ್ರಿದಿಯನ್ನು ಒಳಗೊಂಡಿದೆ.
2021ರ ಐಸಿಸಿ ವರ್ಷದ ಟೆಸ್ಟ್ ತಂಡವನ್ನು ಮುನ್ನಡೆಸುತ್ತಿರುವ ವಿಲಿಯಮ್ಸನ್ ನ್ಯೂಜಿಲೆಂಡ್ ತಂಡಕ್ಕಾಗಿ ಪ್ರಭಾವಿ ನಾಯಕರಾಗಿದ್ದರು. ಸೌತಾಂಪ್ಟನ್‌ನಲ್ಲಿ ಭಾರತದ ವಿರುದ್ಧದ ಉದ್ಘಾಟನಾ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ತಂಡದ ವಿಜಯಕ್ಕೆ ಕಾರಣರಾದರು. ಬ್ಯಾಟಿಂಗ್‌ನಲ್ಲೂ ಉತ್ತಮ ಪ್ರದರ್ಶನ ತೋರಿದ ವಿಲಿಯಮ್ಸನ್ 4 ಪಂದ್ಯಗಳಲ್ಲಿ ಒಂದು ಶತಕದೊಂದಿಗೆ 65.83 ಸರಾಸರಿಯಲ್ಲಿ 395 ರನ್‌ಗಳನ್ನು ಗಳಿಸಿದರು. ಭಾರತ ತಂಡದ ಆಟಗಾರರ ಹೊರತಾಗಿಯೂ ODI ತಂಡದಲ್ಲಿ ಆಸ್ಟ್ರೇಲಿಯಾ, ಇಂಗ್ಲಿಷ್, ನ್ಯೂಜಿಲೆಂಡ್ ಅಥವಾ ವೆಸ್ಟ್ ಇಂಡೀಸ್‌ನ ಯಾವುದೇ ಆಟಗಾರರಿಲ್ಲ.