ಐಸಿಸಿ ಏಕದಿನ ಬ್ಯಾಟರ್ ಗಳ ನೂತನ ಶ್ರೇಯಾಂಕ ಪಟ್ಟಿಯನ್ನು ಪ್ರಕಟಿಸಿದೆ. ಹೊಸ ರ‍್ಯಾಂಕಿಂಗ್ ಪಟ್ಟಿಯಲ್ಲೂ ಪಾಕಿಸ್ತಾನ್ ತಂಡದ ನಾಯಕ ಬಾಬರ್ ಆಝಂ ಅಗ್ರಸ್ಥಾನವನ್ನು ಕಾಯ್ದುಕೊಂಡಿದ್ದಾರೆ. ಆದರೆ ಮತ್ತೊಂದೆಡೆ ಟೀಮ್ ಇಂಡಿಯಾದ ಯುವ ಆರಂಭಿಕ ಆಟಗಾರ ಶುಭ್ಮನ್ ಗಿಲ್ ವೃತ್ತಿ ಜೀವನದ ಶ್ರೇಷ್ಠ ಸಾಧನೆ ಮಾಡಿದ್ದಾರೆ.
ಏಷ್ಯಾಕಪ್ ನಲ್ಲಿ ನೇಪಾಳ ಹಾಗೂ ಪಾಕಿಸ್ತಾನ್ ವಿರುದ್ಧ ಅರ್ಧಶತಕ ಬಾರಿಸಿದ ಗಿಲ್ ಇದೀಗ ಏಕದಿನ ಶ್ರೇಯಾಂಕದಲ್ಲಿ 3ನೇ ಸ್ಥಾನದಿಂದ 2ನೇ ಸ್ಥಾನಕ್ಕೆ ಜಿಗಿದಿದ್ದಾರೆ. ಹಾಗೆಯೇ ಕಳೆದ ಬಾರಿ ಟಾಪ್-10 ರಲ್ಲಿ ಕೊನೆಯ ಸ್ಥಾನದಲ್ಲಿ ಕಾಣಿಸಿಕೊಂಡಿದ್ದ ವಿರಾಟ್ ಕೊಹ್ಲಿ ಈ ಸಲ ಎರಡು ಸ್ಥಾನ ಮೇಲೇರಿದ್ದಾರೆ. ಹಾಗೆಯೇ ಅಗ್ರ ಹತ್ತರಲ್ಲಿ ಸ್ಥಾನ ಪಡೆಯುವಲ್ಲಿ ರೋಹಿತ್ ಶರ್ಮಾ ಕೂಡ ಯಶಸ್ವಿಯಾಗಿದ್ದಾರೆ.
ಐಸಿಸಿ ಏಕದಿನ ಬ್ಯಾಟರ್ ಗಳ ನೂತನ ಶ್ರೇಯಾಂಕ ಪಟ್ಟಿ:
ಬಾಬರ್ ಆಝಂ (ಪಾಕಿಸ್ತಾನ್)- 863 ರೇಟಿಂಗ್
ಶುಭ್ಮನ್ ಗಿಲ್ (ಭಾರತ)- 759 ರೇಟಿಂಗ್
ರಸ್ಸಿ ವಂಡೆರ್ ಡುಸ್ಸೆನ್ (ಸೌತ್ ಆಫ್ರಿಕಾ)- 745 ರೇಟಿಂಗ್
ಡೇವಿಡ್ ವಾರ್ನರ್ (ಆಸ್ಟ್ರೇಲಿಯಾ)- 739 ರೇಟಿಂಗ್
ಇಮಾಮ್ ಉಲ್ ಹಕ್ (ಪಾಕಿಸ್ತಾನ್)- 735 ರೇಟಿಂಗ್
ಹ್ಯಾರಿ ಟೆಕ್ಟರ್ (ಐರ್ಲೆಂಡ್)- 726 ರೇಟಿಂಗ್
ಕ್ವಿಂಟನ್ ಡಿಕಾಕ್ (ಸೌತ್ ಆಫ್ರಿಕಾ)- 721 ರೇಟಿಂಗ್
ವಿರಾಟ್ ಕೊಹ್ಲಿ (ಭಾರತ)- 715 ರೇಟಿಂಗ್
ರೋಹಿತ್ ಶರ್ಮಾ (ಭಾರತ)- 707 ರೇಟಿಂಗ್
ಫಖರ್ ಝಮಾನ್ (ಪಾಕಿಸ್ತಾನ್)- 705 ರೇಟಿಂಗ್
ಐಸಿಸಿ ಬೌಲರ್ ಗಳ ನೂತನ ಟಾಪ್-10 ಶ್ರೇಯಾಂಕ ಪಟ್ಟಿಯಲ್ಲಿ ಟೀಮ್ ಇಂಡಿಯಾದ ಇಬ್ಬರು ಬೌಲರ್ಗಳು ಸ್ಥಾನ ಪಡೆದಿದ್ದಾರೆ. ಈ ಪಟ್ಟಿಯಲ್ಲಿ ಆಸ್ಟ್ರೇಲಿಯಾ ವೇಗಿ ಜೋಶ್ ಹ್ಯಾಝಲ್ವುಡ್ ಅಗ್ರಸ್ಥಾನದಲ್ಲಿದ್ದರೆ, ಟೀಮ್ ಇಂಡಿಯಾ ಸ್ಪಿನ್ನರ್ ಕುಲ್ದೀಪ್ ಯಾದವ್ 7ನೇ ಸ್ಥಾನ ಅಲಂಕರಿಸಿದ್ದಾರೆ.
ಪಾಕಿಸ್ತಾನ್ ವಿರುದ್ಧದ ಪಂದ್ಯದಲ್ಲಿ 5 ವಿಕೆಟ್ ಕಬಳಿಸಿದ್ದ ಕುಲ್ದೀಪ್ ಯಾದವ್ ಶ್ರೀಲಂಕಾ ವಿರುದ್ಧ 4 ವಿಕೆಟ್ ಪಡೆದಿದ್ದರು. ಈ ಅದ್ಭುತ ಪ್ರದರ್ಶನದೊಂದಿಗೆ ಎಡಗೈ ಸ್ಪಿನ್ನರ್ ಟಾಪ್-10 ನಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ಟೀಮ್ ಇಂಡಿಯಾ ವೇಗಿ ಮೊಹಮ್ಮದ್ ಸಿರಾಜ್ ಕಳೆದ ಬಾರಿಯ ಶ್ರೇಯಾಂಕವನ್ನು ಕಾಯ್ದುಕೊಂಡಿದ್ದಾರೆ.
ಐಸಿಸಿ ಏಕದಿನ ಬೌಲರ್ ಗಳ ನೂತನ ಶ್ರೇಯಾಂಕ ಪಟ್ಟಿ:
ಜೋಶ್ ಹ್ಯಾಝಲ್ವುಡ್ (ಆಸ್ಟ್ರೇಲಿಯಾ)- 692 ರೇಟಿಂಗ್.
ಮಿಚೆಲ್ ಸ್ಟಾರ್ಕ್ (ಆಸ್ಟ್ರೇಲಿಯಾ)- 666 ರೇಟಿಂಗ್
ಟ್ರೆಂಟ್ ಬೌಲ್ಟ್ (ನ್ಯೂಝಿಲೆಂಡ್)- 666 ರೇಟಿಂಗ್
ಆ್ಯಡಂ ಝಂಪಾ (ಆಸ್ಟ್ರೇಲಿಯಾ)- 663 ರೇಟಿಂಗ್
ಮ್ಯಾಟ್ ಹೆನ್ರಿ (ನ್ಯೂಝಿಲೆಂಡ್)- 658 ರೇಟಿಂಗ್
ಮುಜೀಬ್ ಉರ್ ರೆಹಮಾನ್ (ಅಫ್ಘಾನಿಸ್ತಾನ್)- 657 ರೇಟಿಂಗ್
ಕುಲ್ದೀಪ್ ಯಾದವ್ (ಭಾರತ)- 656 ರೇಟಿಂಗ್
ರಶೀದ್ ಖಾನ್ (ಅಫ್ಘಾನಿಸ್ತಾನ್)- 655 ರೇಟಿಂಗ್
ಮೊಹಮ್ಮದ್ ಸಿರಾಜ್ (ಭಾರತ)- 643 ರೇಟಿಂಗ್
ಶಾಹೀನ್ ಅಫ್ರಿದಿ (ಪಾಕಿಸ್ತಾನ್)- 635 ರೇಟಿಂಗ್.