ಮನೆ ರಾಜ್ಯ 500 ಸಿಲಿಂಡರ್, 3 ಸಾವಿರ ಜನ ಬುಕ್ ಮಾಡಿದ್ರೆ, ಕೊಡೋದು ಹೇಗೆ? – ಗ್ಯಾಸ್ ಏಜೆನ್ಸಿ...

500 ಸಿಲಿಂಡರ್, 3 ಸಾವಿರ ಜನ ಬುಕ್ ಮಾಡಿದ್ರೆ, ಕೊಡೋದು ಹೇಗೆ? – ಗ್ಯಾಸ್ ಏಜೆನ್ಸಿ ಮಾಲೀಕರು ಪರದಾಟ..!

0

ಚಿಕ್ಕಬಳ್ಳಾಪುರ : ಬಂದಿರೋದು 500 ಸಿಲಿಂಡರ್, 3 ಸಾವಿರ ಜನ ಬುಕ್ ಮಾಡಿದ್ರೆ ಕೊಡೋದು ಹೇಗೆ ಎಂದು ಗ್ಯಾಸ್ ಏಜೆನ್ಸಿ ಮಾಲೀಕರು ಪರದಾಡುವಂತಾಗಿದೆ. ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಸಂಘರ್ಷದಿಂದಾಗಿ ಎಲ್‌ಪಿಜಿ ಸಿಲಿಂಡರ್ ಅಭಾವ ಹೆಚ್ಚಾಗುತ್ತಲೇ ಇದೆ.

ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ಪಟ್ಟಣದಲ್ಲಿ ಜನ ಕಿ.ಮೀಗಟ್ಟಲೇ ಸರದಿ ಸಾಲಿನಲ್ಲಿ ನಿಂತು ಎಲ್‌ಪಿಜಿ ಸಿಲಿಂಡರ್‌ಗಾಗಿ ಮುಗಿಬಿದ್ದಿದ್ದಾರೆ. ಸಪ್ಲೈ ಆಗುವ ಸಿಲಿಂಡರ್‌ಗಳ ಸಂಖ್ಯೆ ಕಡಿಮೆಯಾಗಿ, ಇತ್ತ ಬುಕ್ ಮಾಡುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇದರಿಂದ ನಾವು ಸಿಲಿಂಡರ್ ಕೊಡೋದು ಹೇಗೆ ಎಂದು ಗ್ಯಾಸ್ ಏಜೆನ್ಸಿ ಮಾಲೀಕರು ಪ್ರಶ್ನಿಸಿದ್ದಾರೆ.

ಲಿಂಡರ್ ಸಪ್ಲೈ ಆಗುತ್ತಿದೆ. ಇದರ ಮಧ್ಯೆ 500 ಸಿಲಿಂಡರ್‌ಗಳ ಲೋಡ್ ಬಂದ್ರೆ 3,000 ಜನ ಬುಕ್ ಮಾಡ್ತಿದ್ದಾರೆ. ಹೀಗಾದರೆ ನಾವು ಸಿಲಿಂಡರ್ ಕೊಡೋದು ಹೇಗೆ ಎಂದಿದ್ದಾರೆ. ಹೀಗಾಗಿ ಸದ್ಯ ಪೊಲೀಸ್ ಭದ್ರತೆಯಲ್ಲಿ ಸಿಲಿಂಡರ್‌ಗಳನ್ನ ವಿತರಣೆ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ. ಇತ್ತ ಗ್ರಾಹಕರು ಬುಕ್ ಮಾಡಿ ವಾರ ಕಳೆದರೂ ನಮಗೆ ಸಿಲಿಂಡರ್ ಕೊಡುತ್ತಿಲ್ಲ ಅಂತ ಅಳಲು ತೋಡಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ.