ಜೀವನದಲ್ಲಿ ಕೆಟ್ಟ ಅಭ್ಯಾಸಗಳನ್ನು ಮಾಡಿಕೊಳ್ಳುವ ಬದಲು ಯೋಗಭ್ಯಾಸದಂತಹ ಅಭ್ಯಾಸಗಳನ್ನು ರೂಢಿಸಿಕೊಳ್ಳುವುದರಿಂದ ಹೃದಯ ಚೆನ್ನಾಗಿ ನಗುನಗುತ್ತಾ ಇರುತ್ತದೆ.
ಸಣ್ಣದಾಗಿ ಚಿಂತೆ ಮಾಡಲು ಪ್ರಾರಂಭಿಸಿದಾಗ ನಮಗೆ ಚಿಂತೆ ನಿರಂತರವಾದರೆ ಮಾನಸಿಕ ಒತ್ತಡ ಶುರುವಾಗುತ್ತದೆ. ಮಾನಸಿಕ ಒತ್ತಡ ಹೆಚ್ಚಾದರೆ ರಕ್ತದ ಒತ್ತಡ ಅಂದರೆ ಬಿಪಿ ಬರುತ್ತದೆ. ಯಾವುದೋ ಕಾರಣಗಳಿಂದ ಸ್ವಲ್ಪ ದಿನ ಬಿಪಿ ಹೆಚ್ಚು ಮಾಡಿಕೊಂಡರೆ ಅದರಿಂದ ಹಾರ್ಟ್ ಪ್ರಾಬ್ಲಮ್ ಅಂದರೆ ಹೃದಯದ ತೊಂದರೆ ಕಾಣಿಸಿಕೊಳ್ಳುತ್ತದೆ.
ಇಂದು ಇಂತಹ ಹೃದಯದ ಸಮಸ್ಯೆ ಇರುವವರು ನಮ್ಮ ಮಧ್ಯೆ ಬೇಕಾದಷ್ಟು ಜನ ಇದ್ದಾರೆ. ಹೃದಯದ ಸಮಸ್ಯೆಗೆ ದುಬಾರಿ ಹಣದ ಚಿಕಿತ್ಸೆ ತೆಗೆದು ಕೊಳ್ಳುತ್ತಿ ದ್ದಾರೆ. ಆದರೆ ಯೋಗಾಭ್ಯಾಸದ ಮೂಲಕ ನಮ್ಮ ಹೃದಯದ ಆರೋಗ್ಯವನ್ನು ಮೊದಲಿನಂತೆ ಕಾಪಾಡಿಕೊಳ್ಳಲು ಸಾಧ್ಯ .
ಹೃದಯದ ಕಾಯಿಲೆಗೆ ಯೋಗಾಸನಗಳು…
ಒಂದೊಂದು ಕಾಯಿಲೆಗೂ ಒಂದೊಂದು ಬಗೆಯ ಯೋಗಾಸನ ಗಳು ಪರಿಹಾರ ಒದಗಿಸುತ್ತವೆ. ಅದರಂತೆ ನಮ್ಮ ಹೃದಯದ ಕಾಯಿಲೆಗೂ ಕೂಡ ಕೆಲವೊಂದು ಯೋಗಸನಗಳು ತುಂಬಾ ಪರಿಣಾಮಕಾರಿಯಾದ ಪರಿಹಾರ ನೀಡುತ್ತವೆ.
ಹೃದಯದ ಆರೋಗ್ಯಕ್ಕೆ 3 ಯೋಗಾಸನಗಳು
ತಾಡಾಸನ
ಇದು ನಮ್ಮ ಹೃದಯಕ್ಕೆ ಆಮ್ಲಜನಕ ಪೂರೈಕೆ, ಉತ್ತಮ ರಕ್ತ ಸಂಚಾರ, ನಮ್ಮ ದೇಹದ ಸಮತೋಲನ ಕಾಪಾಡುವ ಯೋಗಾಸನವಾಗಿದೆ. ಈ ಯೋಗಾಸನವನ್ನು ಮಾಡುವುದರಿಂದ ಶ್ವಾಸಕೋಶದ ಸಾಮರ್ಥ್ಯ ಹೆಚ್ಚಾಗುತ್ತದೆ ಮತ್ತು ಹೃದಯಕ್ಕೆ ಸಂಬಂಧಪಟ್ಟ ಕಾಯಿಲೆಗಳು ಕಡಿಮೆಯಾಗುತ್ತವೆ.
ಸೇತುಬಂಧಾಸನ
ಇದು ಎದೆಯನ್ನು ವಿಸ್ತರಿಸಿ ನಿಮ್ಮ ಹೃದಯದ ಮಾಂಸ ಖಂಡಗಳನ್ನು ಸದೃಢಗೊಳಿಸುವ ಯೋಗಾಸನವಾಗಿದೆ. ನೀವು ಹಿಂಬದಿಗೆ ಬಾಗುವುದರಿಂದ ನಿಮ್ಮ ಬೆನ್ನು, ಸೊಂಟ, ಬೆನ್ನುಹುರಿ ಎಲ್ಲವೂ ಸಾಮರ್ಥ್ಯದಿಂದ ಕೂಡಿರುತ್ತದೆ. ನಿಮಗೆ ಇದರಿಂದ ಹೃದಯದ ಕಾಯಿಲೆಗಳು ಬರುವ ಸಾಧ್ಯತೆ ಕಡಿಮೆಯಾಗುತ್ತದೆ.
ವೃಕ್ಷಾಸನ
ಈ ಯೋಗಾಸನವನ್ನು ಮಾಡುವುದರಿಂದ ನೀವು ನಿಮ್ಮ ದೇಹದ ಸಮತೋಲನವನ್ನು ಕಾಪಾಡಿ ಕೊಳ್ಳಲು ಅನುಕೂಲವಾಗುತ್ತದೆ. ಅಧಿಕ ರಕ್ತದ ಒತ್ತಡ ಮತ್ತು ನಿಮ್ಮ ಉಸಿರಾಟದ ತೊಂದರೆ ಇತ್ಯಾದಿಗಳನ್ನು ಇದು ಸರಿಪಡಿಸುತ್ತದೆ. ಹೃದಯ ಬಡಿತವನ್ನು ಅಚ್ಚುಕಟ್ಟಾಗಿ ಕಾಪಾಡುವ ಯೋಗಾಸನವಿದು.
ಯೋಗ ತಜ್ಞರ ಅಭಿಪ್ರಾಯ ಸಂಗ್ರಹಿಸಿ
ನೀವು ಹೊಸದಾಗಿ ನಿಮ್ಮ ಹೃದಯದ ಆರೋಗ್ಯದ ಸಲುವಾಗಿ ಯೋಗಾಸನವನ್ನು ನಿಮ್ಮ ಜೀವನದಲ್ಲಿ ಅಳವಡಿಸಿ ಕೊಳ್ಳುತ್ತೀರಾ ಎಂದಾದರೆ ಮೊದಲು ನಿಮ್ಮ ಆರೋಗ್ಯ ಪರೀಕ್ಷೆ ಮಾಡಿಸಿ ಆನಂತರ ಆರೋಗ್ಯ ತಜ್ಞರಿಂದ ಮಾಹಿತಿ ಪಡೆದುಕೊಂಡು ಯೋಗ ತಜ್ಞರಿಂದ ಕೂಡ ಅಭಿಪ್ರಾಯ ತಿಳಿದುಕೊಳ್ಳಿ.
ನಿಮ್ಮ ಸದ್ಯದ ರಕ್ತದ ಮಟ್ಟ, ನಿಮ್ಮ ಮಾನಸಿಕ ಒತ್ತಡ, ನಿಮ್ಮ ನಿದ್ರೆ ಗುಣಮಟ್ಟ ಎಲ್ಲವನ್ನು ಅವಲೋಕಿಸಿ ಅವರು ನಿಮಗೆ ಸೂಕ್ತವಾದ ಯೋಗಾಸನವನ್ನು ತಿಳಿಸಿ ಕೊಡುತ್ತಾರೆ.
ನಿಮಗೆ ಒಂದು ವೇಳೆ ಹೃದಯದ ತೊಂದರೆ ಇದ್ದರೆ, ನಿಮ್ಮ ಜೀವನದಲ್ಲಿ ಯೋಗಾಸನಗಳನ್ನು ಅಳವಡಿಸಿ ಕೊಳ್ಳುವ ಮೊದಲು ಯೋಗ ತಜ್ಞರಿಂದ ಉತ್ತಮ ಅಭಿಪ್ರಾಯ ಬಹಳ ಮುಖ್ಯವಾಗುತ್ತದೆ.