ಮನೆ ರಾಜಕೀಯ ಡಿಕೆಶಿಗೆ ಮಾನ, ಮರ್ಯಾದೆ ಇದ್ದರೆ ಕೂಡಲೇ ಮಂಜುನಾಥ್ ಉಚ್ಚಾಟನೆ ಮಾಡಲಿ : ಶರಣು ಸಲಗರ್

ಡಿಕೆಶಿಗೆ ಮಾನ, ಮರ್ಯಾದೆ ಇದ್ದರೆ ಕೂಡಲೇ ಮಂಜುನಾಥ್ ಉಚ್ಚಾಟನೆ ಮಾಡಲಿ : ಶರಣು ಸಲಗರ್

0

ಬೀದರ್: ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ಮಾನ, ಮರ್ಯಾದೆ ಇದ್ರೆ ಕೂಡಲೇ ಮಂಜುನಾಥರನ್ನು ಪಕ್ಷದಿಂದ ಉಚ್ಚಾಟಿಸಬೇಕು ಎಂದು ಬಿಜೆಪಿ ಶಾಸಕ ಶರಣು ಸಲಗರ್ ಕಿಡಿಕಾರಿದರು.

ಬೀದರ್‌ನಲ್ಲಿ ಕಾಂಗ್ರೆಸ್ ಶಾಸಕ ಕೊತ್ತೂರು ಮಂಜುನಾಥ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಆಪರೇಷನ್ ಸಿಂಧೂರ ಬಗ್ಗೆ ರೈತರು, ಕೂಲಿ ಕಾರ್ಮಿಕರು ಎಲ್ಲರಿಗೂ ಸಂತೋಷವಿದೆ. ಉಗ್ರವಾದವನ್ನ ಬುಡ ಸಮೇತ ಕಿತ್ತು ಹಾಕುವ ಕೆಲಸವನ್ನು ಆಪರೇಷನ್ ಸಿಂಧೂರ ಮಾಡಿದೆ ಎಂದರು.

ಕಾಂಗ್ರೆಸ್ ಶಾಸಕರು ಮೂರ್ಖತನದ ಹೇಳಿಕೆ ಕೊಡುತ್ತಿದ್ದು, ಕಾಂಗ್ರೆಸ್‌ನ ಮುಖವಾಡ ಕಳಚುತ್ತಿದೆ. ಇದು ಕೇವಲ ಶಾಸಕನ ಮಾತಲ್ಲ, ಇಡೀ ಕಾಂಗ್ರೆಸ್ ಪಕ್ಷದ ಹೇಳಿಕೆ. ಯಾಕಂದ್ರೆ, ಇದು ರಾಷ್ಟ್ರ ಕಟ್ಟುವ ಕೆಲಸವಾಗಿದ್ದು ಪ್ರಧಾನಿ ಮೋದಿ ಸೇರಿದಂತೆ ಬಿಜೆಪಿ ಸರ್ಕಾರ ಗಟ್ಟಿ ನಿರ್ಧಾರ ಕೈಗೊಳ್ಳುತ್ತಿದೆ ಎಂದು ಹೇಳಿದರು.

ಮುರ್ಖತನ, ದೇಶದ್ರೋಹದ ಹೇಳಿಕೆ ಕೊಟ್ಟಿರುವ ಕೊತ್ತೂರು ಮಂಜುನಾಥ್ ಬಹಿರಂಗವಾಗಿ ಕ್ಷಮೆಯಾಚಿಸಬೇಕು. ಇಂತಹ ದೇಶದ್ರೋಹಿ ಶಾಸಕರನ್ನ ಅಧಿವೇಶನದೊಳಗೆ ಕಾಲಿಡಲು ಬಿಡಲ್ಲ ಎಂದು ಆಕ್ರೋಶ ಹೊರಹಾಕಿದರು. ಕಾಂಗ್ರೆಸ್ ನಾಯಕರು ಆಪರೇಷನ್ ಸಿಂಧೂರ ಬಗ್ಗೆ ಸಾಕ್ಷಿ ಕೇಳುತ್ತಿರುವ ವಿಚಾರವಾಗಿ ಮಾತನಾಡಿ, ಯುದ್ಧ ಮಾಡಬೇಕಾದ್ರೆ ಇವರೆಲ್ಲರಿಗೂ ಲೈವ್ ತೋರಿಸಿ ಯುದ್ಧ ಮಾಡೋಕೆ ಆಗಲ್ಲ. ಪ್ರಿಯಾಂಕ್ ಖರ್ಗೆಯವರ ಹೇಳಿಕೆಯಲ್ಲ ಇಡೀ ಕಾಂಗ್ರೆಸ್ ಹೇಳಿಕೆಯಾಗಿದೆ. ಪ್ರಿಯಾಂಕ್ ಖರ್ಗೆಯವರಿಗೆ ನಾಲಿಗೆಯ ಮೇಲೆ ಹಿಡಿತವಿರಲಿ ಎಂದು ಕಿಡಿಕಾರಿದರು.

ಇದು ಸಿಂಧೂರ ಅಷ್ಟೇ, ಕೆಲವೇ ದಿನಗಳಲ್ಲಿ ಆಪರೇಷನ್ ಸಂಹಾರ ಮಾಡಲಾಗುತ್ತದೆ. ನನಗೂ ಆದೇಶ ಬಂದ್ರೆ ಗನ್ ಹಿಡಿದು ಯುದ್ಧಕ್ಕೆ ಹೋಗ್ತೀನಿ. ನನಗೆ ಯಾವುದೇ ತರಬೇತಿ ಬೇಡ. ಅನುಮತಿ ಕೊಟ್ರೆ ಪಾಕಿಸ್ತಾನ ವಿರುದ್ಧ ಮುಗಿ ಬೀಳುತ್ತೇವೆ ಎಂದು ಹೇಳಿದರು.