ಮನೆ ರಾಜ್ಯ ಮೋದಿ ರೋಡ್ ಶೋ ನಡೆಸಿದ್ದಲ್ಲಿ ಬಿಜೆಪಿಗೆ ಸೋಲಾಗಿದೆ: ಎನ್.ಎಸ್.ಭೋಸರಾಜು

ಮೋದಿ ರೋಡ್ ಶೋ ನಡೆಸಿದ್ದಲ್ಲಿ ಬಿಜೆಪಿಗೆ ಸೋಲಾಗಿದೆ: ಎನ್.ಎಸ್.ಭೋಸರಾಜು

0

ರಾಯಚೂರು: ಕಳೆದ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಎಲ್ಲೆಲ್ಲಿ ರೋಡ್ ಶೋ ನಡೆಸಿದ್ದರು ಅಲ್ಲೆಲ್ಲ ಬಿಜೆಪಿಗೆ ಸೋಲಾಗಿದೆ. ಹೀಗಾಗಿ ಮೋದಿ ರೋಡ್ ಶೋಗಳ ಬಗ್ಗೆ ನಮಗೆ ಯಾವುದೇ ಆತಂಕವಿಲ್ಲ ಎಂದು ಸಣ್ಣ ನೀರಾವರಿ ಸಚಿವ ಎನ್.ಎಸ್.ಭೋಸರಾಜು ಟೀಕಿಸಿದರು.

Join Our Whatsapp Group

ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿ, ಬಿಜೆಪಿಯವರು ಮೊದಲು ತಮ್ಮ ಪಕ್ಷದೊಳಗಿನ ಸಮಸ್ಯೆಗಳನ್ನು ಬಗೆ ಹರಿಸಿಕೊಳ್ಳಲಿ. ರಾಹುಲ್ ಗಾಂಧಿಯವರ ಬಗ್ಗೆ ಮಾತನಾಡುವ ನೈತಿಕತೆ ಅವರಿಗೆ ಇಲ್ಲ ಎಂದರು.

ಕಾಂಗ್ರೆಸ್ ಅಭ್ಯರ್ಥಿ ಬಗ್ಗೆ ಮಾತನಾಡುವ ಬಿಜೆಪಿಯವರು ತಾವು ಯಾಕೆ ಡಾ.ಮಂಜುನಾಥರನ್ನು ಯಾಕೆ ಕಣಕ್ಕಿಳಿಸಿದ್ದಾರೆ. ಸೋಮಣ್ಣರನ್ನು ತುಮಕೂರಿಗೆ ಕರೆದುಕೊಂಡು ಬಂದಿದ್ದಾರೆ. ರಾಜಕೀಯದಲ್ಲಿ ಇದೆಲ್ಲ ಸಾಮಾನ್ಯ ಎಂದರು.

ಹಿಂದಿನ ಲೇಖನಚುನಾವಣೆಗಾಗಿ ಪ್ರತಿ ಸಕ್ಕರೆ ಕಾರ್ಖಾನೆಯಿಂದ 50 ಲಕ್ಷ ವಸೂಲಿ: ಬಸನಗೌಡ ಪಾಟೀಲ ಯತ್ನಾಳ್ ಆರೋಪ
ಮುಂದಿನ ಲೇಖನವಚನಕಾರರಾದ ದೇವರ ದಾಸಿಮಯ್ಯ ಜಯಂತಿ ಆಚರಣೆ