ಮನೆ ರಾಜ್ಯ ಪೋಷಕರಲ್ಲಿ ಯಾರೊಬ್ಬರು sc/st ಸೇರಿದ್ದರೆ, ಮಗುವನ್ನೂಅದೇ ವರ್ಗದಲ್ಲಿ ಪರಿಗಣಿಸಬಹುದು : ಹೈ ಕೋರ್ಟ್

ಪೋಷಕರಲ್ಲಿ ಯಾರೊಬ್ಬರು sc/st ಸೇರಿದ್ದರೆ, ಮಗುವನ್ನೂಅದೇ ವರ್ಗದಲ್ಲಿ ಪರಿಗಣಿಸಬಹುದು : ಹೈ ಕೋರ್ಟ್

0

ಪೋಷಕರಲ್ಲಿ ತಂದೆ ಅಥವಾ ತಾಯಿ ಯರಾದರೂ ಒಬ್ಬರು ಆರ್ಥಿಕವಾಗಿ ತೊಂದರೆ ಎದುರಿಸುತ್ತಿರುವ ಪರಿಶಿಷ್ಟ ಸಮುದಾಯಕ್ಕೆ ಸೇರಿದ್ದರೆ ಅಂತಹ ಮಗುವನ್ನು ಎಸ್.ಸಿ / ಎಸ್.ಟಿ ವರ್ಗಕ್ಕೆ ಸೇರಿದ್ದು ಎಂದು ಪರಿಗಣಿಸಬಹುದು ಎಂದು ಕೇರಳ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.

Join Our Whatsapp Group

ನ್ಯಾ. ವಿಜು ಅಬ್ರಹಾಂ ಅವರಿದ್ದ ನ್ಯಾಯಪೀಠ ಈ ಮಹತ್ವದ ಆದೇಶ ಹೊರಡಿಸಿದೆ. ಸದ್ರಿ ಪ್ರಕರಣದಲ್ಲಿ ಅರ್ಜಿದಾರನ ತಂದೆ ಸಿರಿಯನ್ ಕ್ರಿಶ್ಚಿಯನ್ ಸಮುದಾಯದವರಾಗಿದ್ದು, ತಾಯಿ ಹಿಂದೂ ಪಣಿಯಾ ಸಮುದಾಯಕ್ಕೆ ಸೇರಿದವರಾಗಿದ್ದಾರೆ. 1950 ರ ಸಂವಿದಾನದ ಆದೇಶ , ಎರಡನೇ ಶೆಡ್ಯೂಲ್ ಪ್ರಕಾರ ಮಾನ್ಯತೆ ಪಡೆದ ಪರಿಶಿಷ್ಟ ಪಂಗಡ ಸಮುದಾಯವಾಗಿದೆ.

ವಿದ್ಯಾರ್ಥಿಯೊಬ್ಬರು ಜಾತಿ ಪ್ರಮಾಣಪತ್ರ ಕೋರಿ ಅರ್ಜಿ ಸಲ್ಲಿಸಿದ್ದು, ತಾನು ಪಣಿಯ ಜಾತಿಗೆ ಸೇರಿದ್ದು, ಪಣಿಯ ಜಾತಿಗೆ ನೀಡುವ ಎಲ್ಲ ಸವಲತ್ತುಗಳಿಗೆ ಅರ್ಹಳು ಎಂದು ಘೋಷಿಸುವಂತೆ ಕೋರಿ ನ್ಯಾಯಲಯಕ್ಕೆ ಅರ್ಜಿ ಸಲ್ಲಿಸಿದಳು.

ಮಗುವನ್ನು ಸಮುದಾಯ ತನ್ನದೆಂದು ಒಪ್ಪಿಕೊಂಡಿರುವಾಗ, ಆ ಮಗು ಅದೇ ಸಾಮಾಜಿಕ ತತ್ವದಲ್ಲಿ ಬದುಕುತ್ತಿದ್ದರೆ ಆಗ ಆ ಮಗುವನ್ನು ಎಸ್.ಸಿ /ಎಸ್.ಟಿ ಸಮುದಾಯಕ್ಕೆ ಸೇರಿದೆ ಎಂದು ಪರಿಗಣಿಸಬಹುದು ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿತು.

ಸೂಕ್ತ ವಿಚಾರಣೆ ನಡೆಸಿದ ಬಳಿಕ, ನ್ಯಾಯಲಯದ ಮುಂದೆ ಇರಿಸಲಾದ ದಾಖಲೆಗಳು ಮತ್ತು ಮೌಖಿಕ ಸಾಕ್ಷ್ಯವನ್ನು ಪರಿಗಣಿಸಿ ವಿದ್ಯಾರ್ಥಿನಿ ಪಣಿಯ ಸಮುದಾಯಕ್ಕೆ ಸೇರಿದವರು ಎಂದು ಘೋಷಿಸಿ, ಕೆ.ಐ.ಆರ್.ಎ.ಡಿ.ಎಸ್ ನೀಡಿದ ವರದಿಯನ್ನು ಬದಿಗೆ ಸರಿಸಿತು. ಆಕೆ ಪಣಿಯ ಸಮುದಾಯಕ್ಕೆ ಸೇರಿದವರು ಎಂಬ ವಾದವನ್ನು ಬೆಂಬಲಿಸುವ ಸೂಕ್ತ ದಾಖಲೆಗಳನ್ನು ಒದಗಿಸಲು ಅರ್ಜಿದಾರರು ಮುಕ್ತವಾಗಿದ್ದಾರೆ ಎಂದು ತಿಳಿಸಿತು.

ಹಿಂದಿನ ಲೇಖನಶಂಕಿತ ಉಗ್ರರ ಬಂಧನ: ಕಾನೂನು ಸುವ್ಯವಸ್ಥೆ ಬಿಗಿ ಮಾಡಲು ಹೆಚ್.ಡಿ.ಕುಮಾರಸ್ವಾಮಿ ಆಗ್ರಹ
ಮುಂದಿನ ಲೇಖನಮಳೆಗಾಲದಲ್ಲಿ ಕಾಲ್ಬೆರಳುಗಳ ನಡುವೆ ಉಂಟಾಗುವ ಸೋಂಕು ನಿವಾರಣೆಗೆ ಸಲಹೆ