ಮನೆ ಸುದ್ದಿ ಜಾಲ ಮೀಸಲಾತಿ ನೀಡಿದರೆ ವಿಜಯೋತ್ಸವ, ಇಲ್ಲವೇ ಬಂಡಾಯ: ಬಸವಜಯ ಮೃತ್ಯುಂಜಯ ಸ್ವಾಮೀಜಿ

ಮೀಸಲಾತಿ ನೀಡಿದರೆ ವಿಜಯೋತ್ಸವ, ಇಲ್ಲವೇ ಬಂಡಾಯ: ಬಸವಜಯ ಮೃತ್ಯುಂಜಯ ಸ್ವಾಮೀಜಿ

0

ಬೈಲಹೊಂಗಲ: ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ ಡಿ.22ರಂದು ವಿಜಯೋತ್ಸವದ ದಿನ ಆಗಬೇಕೆ ಹೊರತು ಬಂಡಾಯದ ದಿನ ಆಗದಂತೆ ನೋಡಿಕೊಳ್ಳುವುದು ಸರ್ಕಾರದ ಜವಾಬ್ದಾರಿ ಎಂದು ಕೂಡಲ ಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.

ಪಟ್ಟಣದ ವೀರರಾಣಿ ಕಿತ್ತೂರು ಚನ್ನಮ್ಮನ ಸಮಾಧಿಗೆ ಬುಧವಾರ ಪುಷ್ಪ ನಮನ ಸಲ್ಲಿಸಿ ಬೆಳಗಾವಿ ಕಡೆಗೆ ಪಾದಯಾತ್ರೆ ಆರಂಭಿಸಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಕೂಡಲ ಸಂಗಮದಿಂದ ಆರಂಭವಾದ ಪಂಚಮಸಾಲಿ ಹೋರಾಟಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬಹಳ ದೊಡ್ಡ ಬೆಂಬಲ ಕೊಟ್ಟಿದ್ದಾರೆ. ಮುಖ್ಯಮಂತ್ರಿ ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ಕೊಟ್ಟೇ ಕೊಡುತ್ತಾರೆಂಬ ವಿಶ್ವಾಸ ಇದೆ. ಆದರೆ ಮಾತು ಕೊಟ್ಟು ಎಲ್ಲೋ ಒಂದು ಕಡೆ ಪಂಚಮಸಾಲಿ ಸಮಾಜ ಬಾಂಧವರ ಭಾವನೆಗಳೊಂದಿಗೆ ಚೆಲ್ಲಾಟ ಆಡುತ್ತಿದ್ದಾರೆ. ಸಮಾಜ ಬಾಂಧವರು ಸಹನೆ ಕಳೆದುಕೊಳ್ಳುವುದಕ್ಕಿಂತ ಮುಂಚ್ಚೆ ‘2ಎ’ಮೀಸಲಾತಿ ಘೋಷಿಸಿ ಅಭಿನಂದನೆಗೆ ಪಾತ್ರರಾಗಬೇಕು ಎಂದರು.

ಲಿಂಗಾಯತ ಪಂಚಮಸಾಲಿ ಸಮಾಜ ಬಾಂಧವರ ಕುಲದೇವತೆ ಆಗಿರುವ ವೀರರಾಣಿ ಕಿತ್ತೂರು ಚನ್ನಮ್ಮನ ಐಕ್ಯಸ್ಥಳದಿಂದ ಸಂಪಗಾಂವ, ಚಿಕ್ಕಬಾಗೇವಾಡಿ, ಹಿರೇಬಾಗೇವಾಡಿ ಮಾರ್ಗವಾಗಿ ಬೆಳಗಾವಿ ಸುವರ್ಣ ಸೌಧಕ್ಕೆ ತೆರಳಿ ಪಂಚಶಕ್ತಿ ವಿರಾಟ ಸಮಾವೇಶ ನಡೆಸಲಾಗುತ್ತಿದೆ. ಈ ಭಾಗದ ಸಮಸ್ತ ಪಂಚಮಸಾಲಿ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶಕ್ತಿ ಪ್ರದರ್ಶನ ಮಾಡಬೇಕು ಎಂದರು.

ಹಿಂದಿನ ಲೇಖನಕೋವಿಡ್‌ ಸೋಂಕಿತರ ಪರೀಕ್ಷಾ ಮಾದರಿಗಳ ಜೀನೋಮ್‌ ಸೀಕ್ವೆನ್ಸಿಂಗ್‌’ಗೆ ಕ್ರಮ: ಸಚಿವ ಡಾ.ಕೆ.ಸುಧಾಕರ್‌
ಮುಂದಿನ ಲೇಖನಸಂಗೊಳ್ಳಿ ರಾಯಣ್ಣ ಕಾಲೇಜು ಕಟ್ಟಡ ಉದ್ಘಾಟಿಸಿದ ಸಿಎಂ ಬೊಮ್ಮಾಯಿ