ಮನುಷ್ಯನ ದೇಹದಲ್ಲಿ ಎರಡು ತರಹದ ರಕ್ತಕಣಗಳು ಇರುತ್ತವೆ. ಒಂದು ಬಿಳಿ ರಕ್ತ ಕಣಗಳು ಇನ್ನೊಂದು ಕೆಂಪು ರಕ್ತ ಕಣಗಳು. ಬಿಳಿ ರಕ್ತ ಕಣಗಳು ನಮ್ಮ ರೋಗನಿರೋಧಕ ಶಕ್ತಿಯನ್ನು ಬಲಪಡಿಸಲು ನೆರವಾದರೆ, ಕೆಂಪು ರಕ್ತ ಕಣಗಳು ನಮ್ಮ ದೇಹದಲ್ಲಿ ಒಂದು ಕಡೆಯಿಂದ ಮತ್ತೊಂದು ಕಡೆಗೆ ಆಮ್ಲಜನಕವನ್ನು ತೆಗೆದುಕೊಂಡು ಹೋಗುವ ಕೆಲಸ ಮಾಡುತ್ತವೆ.
ಇದೇ ಕೆಂಪು ರಕ್ತ ಕಣಗಳಲ್ಲಿ ಹಿಮೋಗ್ಲೋಬಿನ್ ಎಂಬ ಪ್ರೋಟೀನ್ ಇರಲಿದ್ದು, ಆಮ್ಲಜನಕವನ್ನು ತಲುಪಿಸಲು ಸಹಾಯ ಮಾಡುತ್ತದೆ. ಇದರ ಇನ್ನೊಂದು ಬಹು ಮುಖ್ಯ ಕಾರ್ಯವೆಂದರೆ ನಮ್ಮನ್ನು ವಿವಿಧ ಬಗೆಯ ಸೋಂಕು ಗಳಿಂದ, ರೋಗಕಾರಕ ಕ್ರಿಮಿಗಳಿಂದ ರಕ್ಷಿಸುತ್ತದೆ.
ಹೀಗೊಂದು ಪ್ರಶ್ನೆ ಪ್ರತಿಯೊಬ್ಬರನ್ನು ಕಾಡುತ್ತದೆ. ನಮ್ಮ ದೇಹದಲ್ಲಿ ಹಿಮೋಗ್ಲೋಬಿನ್ ಹಲವಾರು ಬಹು ಮುಖ್ಯ ಕಾರ್ಯಗಳಲ್ಲಿ ಸಹಾಯಕ್ಕೆ ಬರುತ್ತದೆ. ಆದರೆ ಒಂದು ವೇಳೆ ಇದು ಗಣನೀಯವಾಗಿ ಕುಸಿತ ಕಂಡರೆ ಏನಾಗಬಹುದು ಎಂದು.
ಆರೋಗ್ಯ ತಜ್ಞರು ಹೇಳುವ ಹಾಗೆ ಯಾವ ವ್ಯಕ್ತಿಯಲ್ಲಿ ಹಿಮೋಗ್ಲೋಬಿನ್ ಪ್ರಮಾಣ ಕಡಿಮೆ ಇರುತ್ತದೆ, ಅಂತಹ ವರಲ್ಲಿ ರಕ್ತದ ಜೀವಕೋಶಗಳು ಹಾನಿಯಾಗುತ್ತವೆ.
ಕೆಂಪು ರಕ್ತ ಕಣಗಳ ಸಂಖ್ಯೆ ಕಡಿಮೆಯಾಗುತ್ತದೆ ಮತ್ತು ಅನೀಮಿಯ ಸಮಸ್ಯೆ ಎದುರಾಗುತ್ತದೆ. ಹಾಗಾಗಿ ಸಮರ್ಪಕ ಪ್ರಮಾಣದಲ್ಲಿ ಒಬ್ಬ ಮನುಷ್ಯನಿಗೆ ಹಿಮೋ ಗ್ಲೋಬಿನ್ ಇರುವುದು ಬಹಳ ಮುಖ್ಯವಾಗುತ್ತದೆ.
ನಮ್ಮ ಆಹಾರ ಪದ್ಧತಿಯಲ್ಲಿ ಬದಲಾವಣೆಗಳನ್ನು ತಂದು ಕೊಂಡರೆ ಇದು ಸಾಧ್ಯವಿದೆ. ಉದಾಹರಣೆಗೆ ಫೋಲಿಕ್ ಆಮ್ಲ, ಕಬ್ಬಿಣದ ಅಂಶ, ವಿಟಮಿನ್ ಬಿ 12 ಮತ್ತು ವಿಟಮಿನ್ ಸಿ ಹೆಚ್ಚಾಗಿರುವ ಆಹಾರ ಪದಾರ್ಥಗಳನ್ನು ಸೇವಿಸಲು ಮುಂ ದಾಗುವುದು.
ಹಿಮೋಗ್ಲೋಬಿನ್ ಉತ್ಪತ್ತಿಯಲ್ಲಿ ಕಬ್ಬಿಣದ ಅಂಶದ ಪಾತ್ರ ತುಂಬಾ ದೊಡ್ಡದಿದೆ. ಹಿಮೋಗ್ಲೋಬಿನ್ ಕೊರತೆ ಇದ್ದರೆ, ಕಬ್ಬಿಣದ ಅಂಶ ಹೆಚ್ಚಾಗಿರುವ ಈ ಆಹಾರಗಳನ್ನು ಸೇವಿಸಿ.
ಉದಾಹರಣೆಗೆ, ಮೀನು, ಮಾಂಸ, ಕೋಳಿ ಮೊಟ್ಟೆ, ಸೋಯಾ ಉತ್ಪನ್ನಗಳು, ಪಾಲಕ್ ಸೊಪ್ಪು, ಡ್ರೈ ಫ್ರೂಟ್ಸ್ ಮತ್ತು ಒಣ ಬೀಜಗಳು.
ನಮ್ಮ ದೇಹದ ರೋಗ ನಿರೋಧಕ ಶಕ್ತಿಯಲ್ಲಿ ಪ್ರಮುಖ ಪಾತ್ರ ವಹಿಸುವ ವಿಟಮಿನ್ ಸಿ ಹಿಮೋಗ್ಲೋಬಿನ್ ಉತ್ಪತ್ತಿಯಲ್ಲಿ ಕೂಡ ನೆರವಾಗುತ್ತದೆ.
ವಿಟಮಿನ್ ಸಿ ಹೆಚ್ಚಾಗಿರುವ ಆಹಾರಗಳನ್ನು ಸೇವಿಸುವು ದರಿಂದ ನಮ್ಮ ದೇಹ ಕಬ್ಬಿಣದ ಅಂಶ ಹೀರಿಕೊಳ್ಳುವ ಸಾಮರ್ಥ್ಯ ಹೆಚ್ಚಾಗುತ್ತದೆ.
ಉದಾಹರಣೆಗೆ ಹಸಿರು ಎಲೆ ತರಕಾರಿಗಳು, ಸಿಟ್ರಸ್ ಹಣ್ಣು ಗಳು, ಸ್ಟ್ರಾಬೆರಿ ಹಣ್ಣುಗಳು ಇತ್ಯಾದಿಗಳನ್ನು ನಿಮ್ಮ ಆಹಾರ ಪದ್ಧತಿಯಲ್ಲಿ ಸೇರಿಸಿಕೊಳ್ಳಿ.
ಯಾವ ಮನುಷ್ಯನಿಗೆ ಫೋಲಿಕ್ ಆಸಿಡ್ ಅಂಶದ ಕೊರತೆ ಇರುತ್ತದೆ, ಅಂತಹ ವ್ಯಕ್ತಿಯ ದೇಹದಲ್ಲಿ ಕೆಂಪು ರಕ್ತ ಕಣಗಳ ಸಂಖ್ಯೆ ಕಡಿಮೆಯಾಗುತ್ತದೆ ಮತ್ತು ಇದರಿಂದ ಹಿಮೋಗ್ಲೋಬಿನ್ ಮಟ್ಟ ಕುಸಿಯುತ್ತದೆ.
ನೀವು ಇದಕ್ಕಾಗಿ ನಿಮ್ಮ ಆಹಾರ ಪದ್ಧತಿಯಲ್ಲಿ ಅನ್ನ, ಕಡಲೆಬೀಜ, ಅಲಸಂದೆ ಕಾಳು, ಅವಕ್ಯಾಡೊ ಇತ್ಯಾದಿಗಳನ್ನು ಸೇರಿಸಿ ತಿನ್ನಿ.
ವಿಟಮಿನ್ ಬಿ 12 ಕೊರತೆ ಇರುವ ವ್ಯಕ್ತಿಯಲ್ಲಿ ಅನೀಮಿಯ ಸಮಸ್ಯೆ ಕಂಡು ಬರುತ್ತದೆ ಎಂದು ಹೇಳಲಾಗುತ್ತದೆ. ಇದು ಮಾಂಸ, ಲಿವರ್, ಕೋಳಿ ಮೊಟ್ಟೆ ಮತ್ತು ಡೈರಿ ಉತ್ಪನ್ನಗಳಲ್ಲಿ ಹೆಚ್ಚಾಗಿ ಸಿಗುತ್ತದೆ. ನಿಮ್ಮ ಆಹಾರ ಪದ್ಧತಿಯಲ್ಲಿ ಇವುಗಳನ್ನು ಸೇರಿಸಿಕೊಳ್ಳಬಹುದು.
ಮೇಲಿನ ಎಲ್ಲಾ ಬಗೆಯ ಆಹಾರ ಪದಾರ್ಥಗಳನ್ನು ನಿಮ್ಮ ಆಹಾರ ಪದ್ಧತಿಯಲ್ಲಿ ಸೇರಿಸಿಕೊಳ್ಳುವುದರ ಜೊತೆಗೆ ನಿಮ್ಮ ವೈದ್ಯರನ್ನು ಭೇಟಿಯಾಗಿ ಸಲಹೆ ಪಡೆದುಕೊಂಡು ಕಬ್ಬಿಣದ
ಅಂಶ ಮತ್ತು ಫೋಲೆಟ್ ಅಂಶ ಇರುವ ಪೂರಕಗಳ ಸೇವನೆಗೆ ಆದ್ಯತೆ ನೀಡಿ. ಏಕೆಂದರೆ ನಿಮ್ಮ ಆರೋಗ್ಯಕ್ಕೆ ಮತ್ತು ಹಿಮೋಗ್ಲೋಬಿನ್ ವೃದ್ಧಿಗೆ ಇವುಗಳು ಸಹಾಯಕ.
ತನ್ನಲ್ಲಿ ಅಧಿಕ ಪ್ರಮಾಣದಲ್ಲಿ ಕಬ್ಬಿಣಾಂಶ, ವಿಟಮಿನ್ ಸಿ, ವಿಟಮಿನ್ ಬಿ ಕಾಂಪ್ಲೆಕ್ಸ್, ಪೋಲಿಕ್ ಆಮ್ಲ ಇತ್ಯಾದಿ ಗಳನ್ನು ಹೆಚ್ಚಾಗಿ ಹೊಂದಿರುವ ಖರ್ಜೂರ ಗಳನ್ನು ಸೇವನೆ ಮಾಡುವ ಅಭ್ಯಾಸ ಮಾಡಿಕೊಂಡರೆ ಬಹಳ ಒಳ್ಳೆಯದು.
ಹರಿವೆ ಸೊಪ್ಪುಗಳನ್ನು ಆದಷ್ಟು, ತಮ್ಮ ಆಹಾರ ಪದ್ಧತಿ ಯಲ್ಲಿ ಸೇರಿಸಿಕೊಂಡರೆ ಬಹಳ ಒಳ್ಳೆಯದು.