ಮನೆ ಅಪರಾಧ ಸೂಕ್ತ ದಾಖಲೆಗಳಿಲ್ಲದೆ ವಾಹನಗಳು ರಸ್ತೆಗೆ ಇಳಿದರೆ  ಸವಾರರ ವಿರುದ್ಧ ಕ್ರಮ: ಡಿವೈಎಸ್‌ಪಿ ಮುರಳೀಧರ್

ಸೂಕ್ತ ದಾಖಲೆಗಳಿಲ್ಲದೆ ವಾಹನಗಳು ರಸ್ತೆಗೆ ಇಳಿದರೆ  ಸವಾರರ ವಿರುದ್ಧ ಕ್ರಮ: ಡಿವೈಎಸ್‌ಪಿ ಮುರಳೀಧರ್

0

ಶಿಡ್ಲಘಟ್ಟ: ವಾಹನಗಳ  ಚಾಲನಾ ಪರವಾನಿಗೆ,ಮತ್ತು ವಿಮೆ  ಸೇರಿದಂತೆ ವಾಹನಗಳ  ಅಗತ್ಯ ದಾಖಲೆಗಳನ್ನು ಸರಿಪಡಿಸಿಕೊಳ್ಳಲು 15 ದಿನ ಕಾಲವಕಾಶ ಕೊಟ್ಟು ಬಳಿಕ ಯಾವುದೇ ಮೂಲಾಜಿಲ್ಲದೆ ದಾಖಲೆ ಇಲ್ಲದ ವಾಹನಗಳ ಮಾಲೀಕರ ವಿರುದ್ದ ಪ್ರಕರಣಗಳನ್ನು ದಾಖಲಿಸುತ್ತೇವೆಂದು ಚಿಂತಾಮಣಿ ಉಪ ವಿಭಾಗದ ಡಿವೈಎಸ್‌ಪಿ ಪಿ. ಮುರಳೀಧರ್ ಅವರು ಎಚ್ಚರಿಕೆ ನೀಡಿದರು.

Join Our Whatsapp Group

 ನಗರದ ನಗರ ಪೋಲಿಸ್ ಠಾಣೆ ಆವರಣದಲ್ಲಿ ಗುರುವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಇತ್ತೀಚಿಗೆ ರಸ್ತೆ ಅಪಘಾತಗಳು ಹೆಚ್ಚಾಗುತ್ತಿದ್ದು, ಅಪಘಾತಗಳನ್ನು ತಡೆಗಟ್ಟುವ ಉದ್ದೇಶದಿಂದ ಇನ್ನೂ ಮುಂದೆ ಶಿಡ್ಲಘಟ್ಟ ನಗರ ಠಾಣೆ ಸಿಬ್ಬಂದಿ ಪ್ರತಿದಿನ ಕನಿಷ್ಠ ಎರಡು ಗಂಟೆ ವಾಹನಗಳ ತಪಾಸಣೆ ಮಾಡಬೇಕು ಎಂದು ಸೂಚಿಸಲಾಗಿದೆ ಎಂದು ತಿಳಿಸಿದರು.

 ಶಿಡ್ಲಘಟ್ಟ ನಗರದಲ್ಲಿ ಬಹುತೇಕ ಆಟೋಗಳಿಗೆ ವಿಮೆ ಇಲ್ಲ ಹಾಗೂ ಸತಿಯಾಗಮದ ದಾಖಲೆಗಳು ಇಲ್ಲದಿರುವ ಅಂತಹವರಿಗೆ 15 ದಿನಗಳು ಕಾಲಾವಕಾಶ ನೀಡಲಾಗಿದ್ದು, ತದನಂತರ ಯಾವುದೇ ಆಟೋಗಳು ವಿಮೆ ಇಲ್ಲದೆ ಚಲಾಯಿಸಿದರೆ ನಿರ್ಧಾಕ್ಷಿಣ್ಯವಾಗಿ ಆಟೋಗಳನ್ನು ಜಪ್ತಿ ಮಾಡಲಾಗುವುದು ಎಂದರು.

ಶಿಡ್ಲಘಟ್ಟ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಶಾಲಾ ಕಾಲೇಜುಗಳ 18 ವರ್ಷದ ಕೆಳಗಿರುವ ವಿದ್ಯಾರ್ಥಿಗಳು ಯಾವುದೇ ಕಾರಣಕ್ಕೂ ದ್ವಿ ಚಿಕ್ರ ವಾಹನಗಳನ್ನು ಚಲಾಯಿಸುವಂತಿಲ್ಲ.  ಯುವಕರು ಇತ್ತೀಚಿಗೆ ವ್ಹೀಲಿಂಗ್ ಮಾಡುವುದು ಸಹ ಅತೀ ಹೆಚ್ಚಾಗಿ ಕಂಡುಬರುತ್ತಿದೆ ಅಂತವರ ವಿರುದ್ಧ ಸೂಕ್ತವಾಗಿ ಕ್ರಮ ಕೈಗೊಂಡು ದೂರು ದಾಖಲಿಸಿಕೊಳ್ಳುವುದಲ್ಲದೇ ಪೋಷಕರ ಮೇಲೆಯೂ ದೂರನ್ನು ದಾಖಲಿಸುತ್ತೇವೆ ಎಂದರು.

ಬುಲೆಟ್, ರಾಯಲ್ ಎನ್ಫಿಲ್ಡ್ ಹಾಗೂ ಇತರೆ ಹೆಚ್ಚು ಸಿಸಿ ಬೈಕ್ ಗಳು ಇಂತಿಷ್ಟೇ ಶಬ್ದ ಹೊಂದಿರಬೇಕು. ಎಂದು ನಿಯಮಾವಳಿಗಳಿದ್ದರೂ ಸಹ ಕರ್ಕಶ ಶಬ್ದ ಮಾಡುವ ಕ್ರೇಜಿ ಬೈಕ್ ಖರೀದಿಸುವ ಯುವಕರು, ನಂತರ ತಮ್ಮದೇ ಸ್ಟೈಲ್ ನಲ್ಲಿ ಬೈಕ್ ಮಾರ್ಪಾಟು ಮಾಡಿಕೊಳ್ಳುತ್ತಿದ್ದಾರೆ ಹಾಗೂ  ನಗರದ ವ್ಯಾಪ್ತಿಯಲ್ಲಿ ವ್ಹೀಲಿಂಗ್ ಮಾಡುವವರು, ಮಧ್ಯಪಾನ ಮಾಡಿ ವಾಹನ ಚಲಾಯಿಸುವವರಿಗೆ, ಬೈಕ್ ನಲ್ಲಿ ಹೆಚ್ಚು ಶಬ್ದದಲ್ಲಿ ಹಾರನ್ ಮಾಡಿಕೊಂಡು ಓಡಾಡುವ ವಾಹನಗಳಿಗೆ ವಿಮೆ ಇಲ್ಲದ ವಾಹನಗಳು ಇನ್ನು ಮುಂದೆ ರಸ್ತೆಗೆ ಬಂದರೆ ಎಫ್.ಐ.ಆರ್ ಖಚಿತ ಹಾಗೂ ಬೈಕ್ ಸವಾರರಿಗೆ ಹೊಸ ದಂಡದ ದರಗಳು ಜಾರಿಯಾಗಿವೆ ಎಂದು ಖಡಕ್ ಎಚ್ಚರಿಕೆ ನೀಡಿದರು.

 ಈ ಸಂದರ್ಭದಲ್ಲಿ ಆರಕ್ಷಕ ವೃತ್ತ ನಿರೀಕ್ಷಕ ಎಂ ಶ್ರೀನಿವಾಸ್, ನಗರ ಠಾಣೆಯ ಆರಕ್ಷಕ ಉಪನಿರೀಕ್ಷಕ ಎಂ ವೇಣುಗೋಪಾಲ್ ಸೇರಿದಂತೆ ಮುಂತಾದವರು ಹಾಜರಿದ್ದರು.