ಮನೆ ರಾಜ್ಯ ಯೋಗೇಶ್ವರ್ ಗೆದ್ದರೆ ಕ್ಷೇತ್ರದ ಅಭಿವೃದ್ಧಿ ಖಚಿತ: ಚಲುವರಾಯಸ್ವಾಮಿ ಭರವಸೆ

ಯೋಗೇಶ್ವರ್ ಗೆದ್ದರೆ ಕ್ಷೇತ್ರದ ಅಭಿವೃದ್ಧಿ ಖಚಿತ: ಚಲುವರಾಯಸ್ವಾಮಿ ಭರವಸೆ

0

ಚನ್ನಪಟ್ಟಣ: ರಾಜ್ಯದಲ್ಲಿ ವಿರೋಧ ಪಕ್ಷದ ಸ್ಥಾನದ ಮೂಲಕ ರಾಜ್ಯ ಅಭಿವೃದ್ಧಿಗೆ ಶ್ರಮವಹಿಸದೆ. ಕೇಂದ್ರ ಮಂತ್ರಿಯಾಗುವ ಆಸೆಗೆ ಕ್ಷೇತ್ರ ತ್ಯಜಿಸಿದ ಕುಮಾರಸ್ವಾಮಿ ಸ್ವಾರ್ಥ ರಾಜಕಾರಣಿ ಎಂದು ಕೃಷಿ ಸಚಿವ ಹಾಗೂ ಕೋಡಂಬಳ್ಳಿ ಜಿಲ್ಲಾ ಪಂಚಾಯತಿಯ ಚುನಾವಣಾ ಉಸ್ತುವಾರಿ ಎನ್.ಚಲುವರಾಯಸ್ವಾಮಿ ಕಿಡಿ ಕಾರಿದರು.
ತಾಲೂಕಿನ ಕೋಡಂಬಳ್ಳಿ ಗ್ರಾಮದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ಪರ ಪ್ರಚಾರ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದರು.

Join Our Whatsapp Group

ವಿರೋಧ ಪಕ್ಷದ ಸ್ಥಾನ ಜನರ ಸಮಸ್ಯೆ ಅರಿಯಲು, ಜನರಿಗಾಗಿ ಉತ್ತಮ ಕೆಲಸ ಮಾಡಲು ಉತ್ತಮ ಸ್ಥಾನ, ಸದರಿ ಸ್ಥಾನ ಮುಖ್ಯಮಂತ್ರಿ ಸ್ಥಾನಕ್ಕೆ ಸಮವೆಂದೇ ಹೇಳಲಾಗುವುದು, ಅಂತಹ ಸ್ಥಾನ ತ್ಯಜಿಸಿ ಗೆದ್ದ ಕ್ಷೇತ್ರ ಬಿಟ್ಟು, ಮಂಡ್ಯದಲ್ಲಿ ಮತ ಪಡೆದು ಕೇಂದ್ರ ಮಂತ್ರಿಯಾಗಿ ಸ್ವಾರ್ಥ ಮೆರೆದಿದ್ದಾರೆ ಎಂದು ಕುಟುಕಿದರು.
ಕ್ಷೇತ್ರ ಬಿಟ್ಟು ನಿಮ್ಮನ್ನು ತ್ಯಜಿಸಿ ಹೋದಮೇಲೆ ಕ್ಷೇತ್ರದಲ್ಲಿ ಉತ್ತಮ ಕೆಲಸ ಮಾಡಲು ಹೊರಟ ಕಾಂಗ್ರೆಸ್ ಅಭ್ಯರ್ಥಿಗೆ ಅವಕಾಶ ಮಾಡಿಕೊಡಬೇಕು, ಕ್ಷೇತ್ರದಲ್ಲಿ ಒಳ್ಳೆ ಕೆಲಸ ಮಾಡಲು ಉಪಮುಖ್ಯ ಮಂತ್ರಿ ಡಿ.ಕೆ.ಶಿವಕುಮಾರ್, ಮಾಜಿ ಎಂಪಿ ಡಿ.ಕೆ.ಸುರೇಶ್ ಪಣತೊಟ್ಟಿದ್ದು, ಚನ್ನಪಟ್ಟಣದ ಅಭಿವೃದ್ಧಿಗೆ 500 ಕೋಟಿರೂ ಹಣ ಕೊಟ್ಟಿದ್ದಾರೆ. ಅದನ್ನು ಬಿಟ್ಟು ಕುಮಾರಸ್ವಾಮಿ ಅವರ ಇಲ್ಲಸಲ್ಲದ ಆರೋಪಗಳಿಗೆ ಕಿವಿಕೊಡದೆ, ಯೋಗೇಶ್ವರ್ ಗೆಲುವಿಗೆ ಅನುವು ಮಾಡಿಕೊಡುವಂತೆ ಮತದಾರರಲ್ಲಿ ಮನವಿ ಮಾಡಿದರು.
ಕಾಂಗ್ರೆಸ್ ಸರ್ಕಾರ ಪಂಚಯೋಜನೆ ಮೂಲಕ ಸಾಕಷ್ಟು ಅನುಕೂಲ ಮಾಡಿಕೊಟ್ಟಿದೆ, 3ಲಕ್ಷ ಇದ್ದದನ್ನು 5 ಲಕ್ಷ ಬಡ್ಡಿ ರಹಿತ ಸಾಲ, ಕೃಷಿ ಇಲಾಖೆ ಮೂಲಕ 2100 ಕೋಟಿ ರೂ ಪರಿಹಾರ ಒದಗಿಸಿದ್ದು, 80 ಲಕ್ಷ ರೈತರಿಗೆ ಪರಿಹಾರ ದೊರೆತಿದೆ, 1000 ರೂ ಕೋಟಿ ಮೌಲ್ಯದ ಯಂತ್ರೋಪಕರಣಗಳನ್ನು, ಆದ್ಯತೆಗೆ ಮೇರೆಗೆ ಸಬ್ಸಿಡಿ ದರದಲ್ಲಿ ಕಾಂಗ್ರೆಸ್ ಸರ್ಕಾರ ನೀಡಿದೆ ಎಂದು ಮನವರಿಕೆ ಮಾಡಿಕೊಟ್ಟರು.
ಪಂಚಯೋಜನೆ, ಅಭಿವೃದ್ಧಿ ಕೊಟ್ಟು, ಕಾಂಗ್ರೆಸ್ ಸರ್ಕಾರ ಜನಪರ ಕೆಲಸ ಮಾಡುತ್ತಿದೆ. ಸ್ಥಳೀಯವಾಗಿ ಯೋಗೇಶ್ವರ್ ನೀರಾವರಿಗೇ ಕೊಡುಗೆ ಕೊಟ್ಟು ಭಗೀರಥ ಎಂದು ಹೆಸರು ಪಡೆದ ಅವರು ಚನ್ನಪಟ್ಟಣಕ್ಕೆ ಸಮರ್ಥ ಅಭ್ಯರ್ಥಿ, ಸ್ಥಳೀಯರ ಕೈಗೆ ಸಿಗುವವರು ಅಭ್ಯರ್ಥಿಯಾಗಿದ್ದು ಅವರನ್ನು ಗೆಲ್ಲಿಸಬೇಕು ಎಂದರು.
ರಾಜ್ಯದಲ್ಲಿ ನಡೆಯುತ್ತಿರುವ ಉಪಚುನಾವಣೆಯಲ್ಲಿ ಯಾರು ಗೆದ್ದರು ಬದಲಾವಣೆಯಗದು, ಆದರೆ ಚನ್ನಪಟ್ಟಣದಲ್ಲಿ ಯೋಗೇಶ್ವರ್ ಗೆದ್ದರೆ ಕ್ಷೇತ್ರದ ಅಭಿವೃದ್ಧಿ ಆಗುತ್ತೆ, ಇಲ್ಲದಿದ್ದರೆ ಯಾವ ಅಧಿಕಾರದ ಮೇಲೆ ಅಭಿವೃದ್ದಿ ನಿರೀಕ್ಷೆ ಮಾಡುವಿರಿ ಎಂದು ಪ್ರಶ್ನಿಸಿದರು.

ಯೋಗೇಶ್ವರ್ ಗೆದ್ದರೆ ಚನ್ನಪಟ್ಟಣ ಸಂಪೂರ್ಣ ಅಭಿವೃದ್ಧಿ ಆಗುವುದು, ಯೋಗೇಶ್ವರ್ ಡಿ. ಕೆ.ಶಿವಕುಮಾರ್ ಜೊತೆ ಸೇರಿ ಕೆಲಸ ಮಾಡುವರು. ಲೋಕಸಭಾ ಚುನಾವಣೆಯಲ್ಲಿ ಆಮಿಷಕ್ಕೆ ಒಳಗಾಗಿ ಡಿ. ಕೆ.ಸುರೇಶ್ ಸೋತಿದ್ದರು, ಆದರೂ ಅವರು ಕ್ಷೇತ್ರದ ಕೆಲಸ ಮಾಡುತ್ತಿದ್ದಾರೆ. ಈಗ ಯೋಗೇಶ್ವರ್ ಜೊತೆ ಸೇರಿ ಕೆಲಸ ಮಾಡಲು ಸಿದ್ದರಿದ್ದಾರೆ ಎಂದು ನುಡಿದರು.
ಉಪಚುನಾವಣೆಯಲ್ಲಿ ಕೆಲವರು ಜಾತಿ ವಿಂಗಡಣೆ ಮಾಡುತ್ತಾರೆ, ಇದಕ್ಕೆ ಯಾರು ಕಿವಿ ಕೊಡಬೇಡಿ, ನಿಮ್ಮ ಬಾಯಿಗೆ ಸಕ್ಕರೆ ಹಾಕ ಕಾಂಗೇಸ್ ಕೆಲಸ ಮಾಡುತ್ತಿದೆ ಯಾಕೆ ವಿನಃ ಕಾರಣ ಆರೋಪ ಮಾಡುತ್ತೀರಿ, ಜಾತಿ ವಿಶಾಬೀಜ ಯಾಕೆ ತುಂಬುತೀರಿ ಎಂದು ಪ್ರಶ್ನಿಸಬೇಕು ಎಂದು ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಉಪಮುಖ್ಯಮಂತ್ರಿ ಡಿ. ಕೆ.ಶಿವಕುಮಾರ್, ಲೋಕಸಭಾ ಮಾಜಿ ಸದಸ್ಯ ಡಿ. ಕೆ.ಸುರೇಶ್, ಮಾಜಿ ಸ್ಪೀಕರ್ ರಮೇಶ್ ಕುಮಾರ್, ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ, ಮಂಡ್ಯ ಶಾಸಕ ಪಿ.ರವಿಕುಮಾರ್ ಗೌಡ ಸೇರಿದಂತೆ ಇತರ ಶಾಸಕರು, ಮುಖಂಡರು ಪಾಲ್ಗೊಂಡಿದ್ದರು