ಯೋಗಾಭ್ಯಾಸದಿಂದ ಹಲವಾರು ಆರೋಗ್ಯ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದು ಎಂಬುದಕ್ಕೆ ಈಗಾಗಲೇ ಸಾಕಷ್ಟು ಪುರಾವೆಗಳು ಸಿಕ್ಕಿವೆ. ಏಕೆಂದರೆ ಇದು ನಿನ್ನೆ ಮೊನ್ನೆಯದಲ್ಲ. ನಮ್ಮ ಹಿರಿಯರು ಅನಾದಿಕಾಲದಿಂದ ಅನುಸರಿಸಿಕೊಂಡು ಬಂದಿರುವ ಪದ್ಧತಿ. ನಮ್ಮ ಭಾರತದ ಯೋಗಾಭ್ಯಾಸ ಬೇರೆ ದೇಶಗಳಿಗೆ ಮಾದರಿಯೆಂದರೆ ನಮಗೆ ಹೆಮ್ಮೆಯ ವಿಷಯ.
ಯೋಗ ಮುದ್ರೆ ಎಂದರೇನು?
• ಮನುಷ್ಯ ತನ್ನ ದೇಹವನ್ನು ವಿವಿಧ ರೀತಿಯಲ್ಲಿ ಬಾಗಿಸಿ ಇರಿಸಿಕೊಂಡು ವಿಶ್ರಾಂತಿ ಪಡೆದುಕೊಳ್ಳು ವುದು. ಕೇವಲ ದೊಡ್ಡವರು ಮಾತ್ರವಲ್ಲದೆ ಮಕ್ಕಳು ಕೂಡ ಇವುಗಳನ್ನು ಕಲಿಯಬಹುದು ಅದು ಕೂಡ ಯಾವುದೇ ಕಷ್ಟ ಇಲ್ಲದೆ!
• ಯೋಗಮುದ್ರೆ ಅಭ್ಯಾಸ ಮಾಡುವುದರಿಂದ ಹಲವು ಆರೋಗ್ಯ ಪ್ರಯೋಜನಗಳು ಇರುತ್ತವೆ. ಅದರಲ್ಲಿ ಒಣ ಕೆಮ್ಮಿನ ಸಮಸ್ಯೆಯಿಂದ ದೂರ ಆಗುವುದು ಕೂಡ ಒಂದು. ಅದು ಹೇಗೆ ಮಾಡುವುದು ಎಂದು ಇಲ್ಲಿ ತಿಳಿಯೋಣ ಬನ್ನಿ.
• ನೀವು ಪ್ರಾರಂಭ ಮಾಡುವ ಮುಂಚೆ, ದೀರ್ಘವಾದ ಉಸಿರಾಟ ನಡೆಸಿ ನಿಮ್ಮ ಮನಸ್ಸನ್ನು ಪ್ರಶಾಂತ ವಾಗಿಸಿಕೊಳ್ಳಿ. ಈಗ ಪದ್ಮಾಸನದಲ್ಲಿ ಕುಳಿತುಕೊಳ್ಳಿ.
ಶೂನ್ಯ ಮುದ್ರಾ ಹೇಗೆ ಮಾಡುವುದು ನೋಡೋಣ
ಇದೊಂದು ಸಿಂಪಲ್ ಯೋಗ ಮುದ್ರೆ ಎನ್ನಬಹುದು. ಹಸ್ತ ಮುದ್ರೆಯ ಮೂಲಕ ದೇಹದಲ್ಲಿ ಆಕಾಶದ ಅಂಶವನ್ನು ಕಡಿಮೆ ಮಾಡುವ ವಿಧಾನ ಮತ್ತು ಪ್ರಕ್ರಿಯೆ ಇದಾಗಿದೆ. ದೇಹದ ತೊಂದರೆಗಳನ್ನು ಸರಿ ದೂಗಿಸುವಲ್ಲಿ ಶೂನ್ಯ ಮುದ್ರೆ ಕೂಡ ಒಂದು.
ಶೂನ್ಯ ಮುದ್ರೆ ಮಾಡುವುದು ಹೇಗೆ?
• ಶೂನ್ಯ ಮುದ್ರೆ ಮಾಡಲು ಮೊದಲು ಹೇಳಿದಂತೆ ಪದ್ಮಾಸನ ಅಥವಾ ಸುಖಾಸನದಲ್ಲಿ ಕುಳಿತುಕೊಳ್ಳಬೇಕು.
• ನಿಮ್ಮ ಬೆನ್ನುಹುರಿ, ಬೆನ್ನಿನ ಹಿಂಬದಿ ಮತ್ತು ಕುತ್ತಿಗೆಯ ಭಾಗ ನೇರವಾಗಿ ಇರಿಸಿಕೊಳ್ಳಬೇಕು.
• ಈಗ ನಿಮ್ಮ ಎರಡು ಅಂಗೈಗಳನ್ನು ಮಂಡಿಗಳ ಮೇಲೆ ಇರಿಸಿಕೊಳ್ಳಿ.
• ಶೂನ್ಯ ಮುದ್ರೆಯನ್ನು ಮಾಡುವಾಗ ನಿಮ್ಮ ಎರಡು ಅಂಗೈಗಳು ಮೇಲ್ಭಾಗಕ್ಕೆ ನೋಡುತ್ತಿರಬೇಕು.
• ನಿಮ್ಮ ಮಧ್ಯದ ಬೆರಳನ್ನು ಮಡಸಿಕೊಳ್ಳಿ.
• ನಿಮ್ಮ ಹೆಬ್ಬರಳನ್ನು ನಿಮ್ಮ ಮಧ್ಯದ ಬೆರಳಿನ ಮೇಲೆ ಇಟ್ಟುಕೊಂಡು ಉಳಿದಂತಹ ಬೆರಳುಗಳನ್ನು ನೇರವಾಗಿ ಇಟ್ಟುಕೊಳ್ಳಿ.
• ಇದು ನಿಮ್ಮ ಎರಡು ಕಣ್ಣುಗಳನ್ನು ಮುಚ್ಚಿಕೊಂಡು ಸಹಜವಾಗಿ ಉಸಿರಾಡಿ.
• ಐದು ನಿಮಿಷ ಹೀಗೆ ಇದ್ದು ಅನಂತರ ಸಹಜ ಸ್ಥಿತಿಗೆ ಮರಳಿ ಬನ್ನಿ…..
ಲಿಂಗ ಮುದ್ರೆ ಮಾಡುವ ವಿಧಾನ
ಒಣ ಕೆಮ್ಮಿನ ಸಮಸ್ಯೆ ದೂರ ಮಾಡಿಕೊಳ್ಳಲು ಲಿಂಗ ಮುದ್ರೆ ತುಂಬಾ ಶಕ್ತಿಯುತವಾದ ಯೋಗಮುದ್ರೆ ಆಗಿದೆ. ಇದನ್ನು ಮಾಡುವುದರಿಂದ ದೇಹದಲ್ಲಿ ಉಷ್ಣಾಂಶ ಹೆಚ್ಚಾಗುತ್ತದೆ ಮತ್ತು ಕೆಮ್ಮು ಉತ್ಪತ್ತಿ ಯಾಗುವ ಸಾಧ್ಯತೆ ಕಡಿಮೆಯಾಗುತ್ತದೆ.
ಲಿಂಗ ಮುದ್ರೆ ಮಾಡುವ ವಿಧಾನ
• ಮುದ್ರೆ ಮಾಡುವ ಮುಂಚೆ ನೀವು ನಿಮ್ಮ ಎರಡು ಕೈಗಳಲ್ಲಿನ ಬೆರಳುಗಳನ್ನು ಇಂಟರ್ಲಾಕ್ ಮಾಡಿಕೊಳ್ಳಿ.
• ನಿಮ್ಮ ಎಡಗೈ ಹೆಬ್ಬೆರಳನ್ನು ನೇರವಾಗಿ ಇರಿಸಿಕೊಳ್ಳಿ
• ಬಲಗೈ ಹೆಬ್ಬೆರಳು ಎಡಗೈ ಹೆಬ್ಬೆರಳನ್ನು ಸುತ್ತುವರಿಯಬೇಕು.
ಲಿಂಗಮುದ್ರೆ ಮಾಡುವ ಪ್ರಯೋಜನಗಳು
• ಇದರಿಂದ ನಿಮ್ಮ ಕೆಮ್ಮು ಮತ್ತು ಕಫ ದೂರವಾಗುತ್ತದೆ. ವಿಶೇಷವಾಗಿ ಮಳೆಗಾಲ ಹಾಗೂ ಚಳಿಗಾಲದಲ್ಲಿ ಅಲರ್ಜಿ ಉಂಟಾಗಿದ್ದರೆ ಅದರಿಂದ ಮುಕ್ತಿ ಪಡೆದುಕೊಳ್ಳಬಹುದು.
• ದೇಹದಲ್ಲಿ ಉಷ್ಣಾಂಶ ಹೆಚ್ಚಾಗಿ ತಾಪಮಾನವನ್ನು ನಿರ್ವಹಣೆ ಮಾಡಿಕೊಳ್ಳಬಹುದು.
• ಉಸಿರಾಟದ ತೊಂದರೆ ಇದ್ದರೆ ಅದು ಸಹ ಸರಿ ಹೋಗುತ್ತದೆ.
• ಆದರೆ ಇದನ್ನು ಹೆಚ್ಚು ಮಾಡಬೇಡಿ. ಏಕೆಂದರೆ ಇದು ದೇಹದಲ್ಲಿ ಅತಿಯಾದ ಉಷ್ಣಾಂಶವನ್ನು ಹೆಚ್ಚು ಮಾಡುತ್ತದೆ.
ಈ 2 ಯೋಗ ಮುದ್ರೆಗಳನ್ನು ಎಷ್ಟು ಸಮಯ ಮಾಡಬೇಕು?
• ದಿನದಲ್ಲಿ ಯಾವುದೇ ಸಮಯದಲ್ಲಿ ಇವುಗಳನ್ನು ಮಾಡಬಹುದು. ಆದರೆ ಐದು ನಿಮಿಷ ಮಾತ್ರ ಮಾಡಬೇಕು. ದೇಹಕ್ಕೆ ನಿರ್ಜಲೀಕರಣ ಆಗದಂತೆ ನೋಡಿಕೊಳ್ಳಬೇಕು. ಯಥೇಚ್ಛವಾಗಿ ನೀರು ಮತ್ತು ಇನ್ನಿತರ ಆರೋಗ್ಯಕರ ದ್ರವಗಳನ್ನು ಸೇವನೆ ಮಾಡಬೇಕು.
• ಒಣ ಕೆಮ್ಮಿನ ಸಮಸ್ಯೆಯಿಂದ ಮುಕ್ತಿ ಪಡೆದುಕೊಳ್ಳಲು ಈ ಯೋಗ ಮುದ್ರೆಗಳು ಅನುಕೂಲಕಾರಿ. ಏಕೆಂದರೆ ಒಣ ಕೆಮ್ಮು, ವಾತಾವರಣದಲ್ಲಿ ಬರುವಂತಹ ಹಲವಾರು ರೋಗಕಾರಕ ತೊಂದರೆ ಗಳಿಂದ ಬರುತ್ತದೆ.
• ಉದಾಹರಣೆಗೆ ಮಾಲಿನ್ಯಕಾರಕ ವಾತಾವರಣ, ಹೊಗೆ, ಕಾಯಿಲೆಗಳು, ಅಸ್ತಮಾ ಸಮಸ್ಯೆ ಇತ್ಯಾದಿ. ಇಂತಹ ಸಂದರ್ಭದಲ್ಲಿ ನೀವು ಆರೋಗ್ಯ ತಜ್ಞರ ಸಲಹೆ ಪಡೆದುಕೊಳ್ಳುವುದು ಉತ್ತಮ. ಅವರು ನೀಡುವ ಔಷಧಿಗಳ ಜೊತೆಗೆ ಯೋಗ ಮುದ್ರೆಗಳನ್ನು ಮಾಡಬಹುದು.